ನೌಕರರ ಕಾಳಜಿ ಮೇಲೆ ಹೋಟೆಲ್ ಉದ್ಯಮದ ಭವಿಷ್ಯ:

 

 

*ನೌಕರರ ಕಾಳಜಿ ಮೇಲೆ ಹೋಟೆಲ್ ಉದ್ಯಮದ ಭವಿಷ್ಯ: ನಾರಾಯಣಗೌಡ*

ನೌಕರರು ಹಾಗೂ ಗ್ರಾಹಕರ ಮೇಲೆ ತೋರುವ ಕಾಳಜಿ ಗೌರವದ ಮೇಲೆ ಹೋಟೆಲ್ ಉದ್ಯಮದ ಭವಿಷ್ಯ ನಿಂತಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ
ಸಿ ನಾರಾಯಣಗೌಡ ಹೇಳಿದರು

ನಗರದ ಚಾಮುಂಡಿಪುರಂನಲ್ಲಿರುವ ಪಂಚವಟಿ ಹೋಟೆಲ್ ನಲ್ಲಿ ನಡೆದ
ಹೋಟೆಲ್ ಮಾಲೀಕರ ಸಂಘದ ವತಿಯಿಂದ ನೂತನವಾಗಿ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ರವಿಶಾಸ್ತ್ರಿ ರವರಿಗೆ ಹೋಟೆಲ್ ಮಾಲೀಕರ ಸಂಘದ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು

ಕರೋನಾ ಸಂದರ್ಭದಲ್ಲಿ ಹೋಟೆಲ್ ಉದ್ಯಮ ಬಹಳ ಸಂಕಷ್ಟಕ್ಕೆ ಸಿಲುಕಿತು, ನಂತರದ ದಿನಗಳಲ್ಲಿ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದು, ಗ್ರಾಹಕರಿಗೆ ತೋರಿಸುವ ಕಾಳಜಿ ಹಾಗೂ ಗೌರವ ನೌಕರರಿಗೆ ತೋರಿಸುವ ಪ್ರೀತಿ ಸಹಕಾರದಿಂದ ಹೋಟೆಲ್ ಉದ್ಯಮ ಚೇತರಿಸಿಕೊಳ್ಳುತ್ತಿದೆ ಎಂದು ತಿಳಿಸಿದರು,
ಉದ್ಯಮ ಬೆಳೆಯುತ್ತಿದ್ದಂತೆ ಅದರ ಸಮರ್ಪಕ ನಿರ್ವಹಣೆ ಅತ್ಯಂತ ಅಗತ್ಯ, ಹೋಟೆಲ್ ಉದ್ಯಮ ಸೇವಾ ಉದ್ಯಮವಾಗಿದ್ದು, ಇಲ್ಲಿ ಗ್ರಾಹಕ ಮತ್ತು ನೌಕರರ ಸಂಬಂಧವೇ ಪ್ರಮುಖವಾಗಿರುತ್ತದೆ, ಗ್ರಾಹಕರ ತೃಪ್ತಿಗೆ ನೌಕರರ ನಡುವಳಿಕೆಗಳು ಮೂಲ ಕಾರಣ ಎಂದು ಹೇಳಿದರು, ಮುಂದಿನ ದಿನಗಳಲ್ಲಿ ಹೋಟೆಲ್ ನಲ್ಲಿ ಕೆಲಸ ಮಾಡುವ ಎಲ್ಲಾ ನೌಕರರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ವೃತ್ತಿಜೀವನ ಹಾಗೂ ವೈಯಕ್ತಿಕ ಜೀವನ ಸಮಾನಾಗಿ ನಿರ್ವಹಣೆಯ ಕುರಿತು ಪರಿಣಾಮಕಾರಿ ಕಾರ್ಯಗಾರ ಮಾಡಲು ಹೋಟೆಲ್ ಮಾಲೀಕರ ಸಂಘ ಮುಂದಾಗುತ್ತೇವೆ ಎಂದು ಹೇಳಿದರು

ಇದೇ ಸಂದರ್ಭದಲ್ಲಿ ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷರಾದ ನಾರಾಯಣಗೌಡ, ಉಪಾಧ್ಯಕ್ಷರಾದ ಸುರೇಶ್ ಉಗ್ರಯ್ಯ, ಗೌ ಕಾರ್ಯದರ್ಶಿ ಎ ಆರ್ ರವೀಂದ್ರ ಭಟ್, ಪತ್ತಿನ ಸಹಕಾರ ಸಂಘದ ಅದ್ಯಕ್ಷರಾದ ಸುಬ್ರಹ್ಮಣ್ಯ ತಂತ್ರಿ, ಪಂಚವಟಿ ಸತೀಶ್ ಹಾಗೂ ಹೋಟೆಲ್ ಅಸೋಸಿಯೇಷನ್ ಎಲ್ಲಾ ಪದಾಧಿಕಾರಿಗಳು ಹಾಗು ಕಾರ್ಯಕಾರಿಸಮಿತಿ ಸದಸ್ಯರುಗಳು ಹಾಜರಿದ್ದರು