ಪರಿಹಾರಧನ ವಿತರಣೆ

509
Share

ಮೃತಪಟ್ಟ ರೈತ ಕುಟುಂಬಗಳಿಗೆ ಭೇಟಿ, ಸಾಂತ್ವನ

ತಲಾ 5 ಲಕ್ಷ ರೂ.ಗಳ ಪರಿಹಾರ ವಿತರಣೆ : ಡಿಸಿಎಂ ಕಾರಜೋಳ

ಬಾಗಲಕೋಟೆ: ಜೂನ್ 02 (ಕರ್ನಾಟಕ ವಾರ್ತೆ) : ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದಲ್ಲಿ ಸಿಡಿಲು ಬಡಿದು ಮೃತಪಟ್ಟ ರೈತ ಬಸಯ್ಯ ಮುಚಖಂಡಿ ಹಾಗೂ ಹೊಸೂರ ಗ್ರಾಮದ ಮೃತ ರೈತ ಮಹಿಳೆ ಶಾಂತವ್ವ ಭೋವಿ ಕುಟುಂಬಕ್ಕೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಭೇಟಿ ನೀಡಿ ಸಾಂತ್ವನ ಹೇಳಿ ತಲಾ 5 ಲಕ್ಷ ರೂ.ಗಳ ಪರಿಹಾರಧನ ಚೆಕ್‍ನ್ನು ವಿತರಿಸಿದರು.
ಮಂಗಳವಾರ ಸಿಡಿಲು ಬಡಿದು ಮೃತಪಟ್ಟದ ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದ 67 ವರ್ಷದ ರೈತ ಬಸಯ್ಯ ವೀರಭದ್ರಯ್ಯ ಮುಚಖಂಡಿ ಅವರ ಪತ್ನಿಗೆ ಪರಿಹಾರಧನದ ಚೆಕ್ ವಿತರಿಸಲಾಯಿತು. ಹೊಸೂರ ಗ್ರಾಮದ 25 ವರ್ಷದ ರೈತ ಮಹಿಳೆ ಶಾಂತವ್ವ ಭೋವಿ ಅವರ ಪತಿ ಅಣ್ಣಪ್ಪನಿಗೆ ಪರಿಹಾರಧನದ ಚೆಕ್‍ನ್ನು ವಿತರಿಸಲಾಯಿತು.
ಸದರಿ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಅಪಘಾತದಲ್ಲಿ ಮೃತಪಟ್ಟ ನಂದಿಕೇಶ್ವರ ಗ್ರಾಮದ 53 ವರ್ಷದ ಅಂಗನವಾಡಿ ಕಾರ್ಯಕರ್ತೆ ಪ್ರಭಾವತಿ ಹಂಗರಗಿ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿ ಧನ ಸಹಾಯ ಮಾಡಿದರು. ಅದೇ ರೀತಿ ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ವೀರಯ್ಯ ಬಸಯ್ಯ ಅಂಗರಗಿ ಕುಟುಂಬಕ್ಕೂ ಸಹ ಭೇಟಿ ನೀಡಿ ಸಾಂತ್ವನ ಹೇಳಿದರು.
ಭೇಟಿ ಸಂದರ್ಭದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಮಾಜಿ ಶಾಸಕ ರಾಜಶೇಖರ ಶೀಲವಂತ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಬಾದಾಮಿ ತಹಶೀಲ್ದಾರ ಇಂಗಳೆ ಸೇರಿದಂತೆ ಇತರು ಉಪಸ್ಥಿತರಿದ್ದರು.
ಛಾಯಾಚಿತ್ರ ಲಗತ್ತಿಸಿದೆ. 1 ರಿಂದ 4


Share