ಪರೀಕ್ಷೆ (CBT) ಬರೆಯಲಿರುವ ಭವಿಷ್ಯದ ಅಗ್ನಿವೀರರಿಗೆ (ಭಾರತೀಯ ಸೇನೆ) ಶುಭಾಶಯ

553
Share

*ಪರೀಕ್ಷೆ (CBT) ಬರೆಯಲಿರುವ ಭವಿಷ್ಯದ ಅಗ್ನಿವೀರರಿಗೆ (ಭಾರತೀಯ ಸೇನೆ) ಶುಭಾಶಯ*

ಸೈನಿಕ್ ಅಕಾಡೆಮಿ ಮೈಸೂರಿನಲ್ಲಿ ಕಮಾಂಡರ್ ಎಸ್. ಮಹೇಂದ್ರ ಸಿಂಗ್ ನಿವೃತ್ತ ಸೇನಾಧಿಕಾರಿ, ಇವರು ತಮ್ಮ ವೃತ್ತಿ ಜೀವನದ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳುವುದರ ಜೊತೆಗೆ ದಿನಾಂಕ 22/04/2024 ಸೋಮವಾರದಿಂದ ಪರೀಕ್ಷೆ ಬರೆಯಲು ತೆರಳಲಿರುವ ಅಗ್ನಿವೀರ ಮೂರನೇ ಬ್ಯಾಚಿನ ಅಭ್ಯರ್ಥಿಗಳಿಗೆ ಬೆಳವಾಡಿ ಯಲ್ಲಿರುವ ಸೈನಿಕ್ ಅಕಾಡೆಮಿ ಮೈಸೂರಿನಲ್ಲಿ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಸೈನಿಕ್ ಅಕಾಡೆಮಿ (ರಿ ) ಮೈಸೂರಿನ ಸಂಸ್ಥಾಪಕರಾದ ಮಾಜಿ ಕಮಾಂಡೋ ಶ್ರೀಧರ್. ಸಿ. ಎಂ, ಸಹ ಸಂಸ್ಥಾಪಕರಾದ ಶ್ರೀಮತಿ ಅನಿತ ಶ್ರೀಧರ್, ಅಧ್ಯಾಪಕರಾದ ವಿಜಯಕುಮಾರ್. ಕೆ, ರಘು. ಎಂ, ಸಂತೋಷ್ ಎಚ್‌ ಜಿ, ಜಯಪ್ರಕಾಶ್, ಅಮೂಲ್ಯ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 


Share