ಪಾಲಿಕೆ ನಡೆ ಜನತೆ ಕಡೆ

Share

ಪಾಲಿಕೆ ನಡೆ ಜನತೆ ಕಡೆ

ಮೈಸೂರು, ಅಕ್ಟೋಬರ್.2.(ಕರ್ನಾಟಕ ವಾರ್ತೆ ):- ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ ಮಾಲೀಕರು ಮತ್ತು ಅನುಭೋಗದಾರರು ಆಸ್ತಿ ತೆರಿಗೆ ಪಾವತಿಸಲು ಕೋವಿಡ್-19 ಪ್ರಯುಕ್ತ ನಗರ ಪಾಲಿಕೆಯ ಕಚೇರಿಗೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪ್ರಪ್ರಥಮ ಬಾರಿಗೆ “ಪಾಲಿಕೆ ನಡೆ ಜನತೆ ಕಡೆ” ಎಂಬ ವಿನೂತನ ಆಸ್ತಿ ತೆರಿಗೆ ವಸೂಲಾತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ವಲಯ ಕಚೇರಿ-3 ರ ವಾರ್ಡ್ ನಂಬರ್ 46 ಮತ್ತು 58 ರ ವ್ಯಾಪ್ತಿಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆ ದಿನಾಂಕ ಅಕ್ಟೋಬರ್ 3 ರಂದು ಸಾಲುಮರದ ತಿಮ್ಮಕ್ಕ ಉದ್ಯಾನವನ ರಾಮಕೃಷ್ಣನಗರ ಎಚ್ ಬ್ಲಾಕ್ , ಅಕ್ಟೋಬರ್ 5 ರಂದು ವಾರ್ಡ್ ನಂ.46 ಗಣಪತಿ ದೇವಸ್ಥಾನ ಐ ಬ್ಲಾಕ್ ರಾಮಕೃಷ್ಣನಗರ ಹಾಗೂ ದಿನಾಂಕ ಅಕ್ಟೋಬರ್ 12 ರಂದು ವರಮಹಾಲಕ್ಷ್ಮಿ ದೇವಸ್ಥಾನ ಆವರಣ, ಮೂರನೇ ಹಂತ ದಟ್ಟಗಳ್ಳಿಯಲ್ಲಿ ನಿಗದಿತ ಸ್ಥಳದಲ್ಲಿ ಆನ್‌ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಸಿಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ಅವಕಾಶವನ್ನು ಆಸ್ತಿ ಮಾಲೀಕರು, ಅನುಭೋಗದಾರರು ಸದುಪಯೋಗಪಡಿಸಿಕೊಂಡು ಆಸ್ತಿ ತೆರಿಗೆ ಪಾವತಿಸುವ ಮೂಲಕ ನಗರದ ಅಭಿವೃದ್ಧಿಗೆ ಹಾಗೂ ಸ್ವಚ್ಛ ಭಾರತ್ ಯೋಜನೆಯಡಿ ಪ್ರಶಂಸಾರ್ಹ ದಿಸೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಹಕರಿಸುವಂತೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share