ಪುತ್ರನ ಬಗ್ಗೆ ಚಾಮುಂಡಿ ತಾಯಿಯ ಮೇಲಾಣೆ ಮಾಡಿದ ಸಂಸದೆ

Share

ಸಂಸದೆ ಸುಮಲತ ಇಂದು ನಡೆದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡುತ್ತ ತಾವು ಕುಟುಂಬ ರಾಜಕಾರಣ ಮಾಡುವುದಿಲ್ಲ. ತಾವು ರಾಜಕಾರಣದಕ್ಲಿರುವ ತನಕ ತಮ್ಮ ಪುತ್ರ ರಾಜಕೀಯಕ್ಕೆ ಬರುವುದಿಲ್ಲ ಎಂದು ತಾಯಿ ಚಾಮುಂಡೇಶ್ವರಿ ಮೇಲೆ ಆಣೆ ಮಾಡಿ ತಮ್ಮ ನಿರ್ಧಾರ ತಿಳಿಸಿದರು.
ತಮ್ಮನ್ನು ಪ್ರೀತಿಸುವ ಜನ ತಮಗೆ ಬಲವಂತ ಮಾಡಿರುವುದು ನಿಜ. ಹಾಗೇ ಪಕ್ಷವು ಆಹ್ವಾನ ನೀಡಿರುವುದು ನಿಜ. ಸದ್ಯಕ್ಕೆ ತಮ್ಮ ಮಗ ಸಿನಿಮ ಮಾಡುತ್ತಾರೆ. ಜನ ಸೇವೆ ಮಾಡುತ್ತಾರೆ. ಒಂದೊಮ್ಮೆ ರಾಜಕೀಯ ಸೇರಿದರೂ ತಮ್ಮ ಮಗ ಅವರ ಸಾಧನೆಯಿಂದಷ್ಟೆ ಗಳಿಸಬೇಕು. ಅಂಬರೀಶ್ ಹೆಸರಿನಿಂದಾಗಲೀ ತಮ್ಮ ಹೆಸರಿನಿಂದಾಗಲಿ ರಾಜಕೀಯವಾಗಿ ಮುಂದುವರೆಯುವುದಿಲ್ಲ ಎಂದು ಘಂಟಾ ಘೋಷಣೆ ಮಾಡಿದ್ದಾರೆ.


Share