ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನಾಚರಣೆಯ ಪ್ರಯುಕ್ತ ಶ್ರೀಅಭಿನಂದನ ಕಾರ್ಯಕ್ರಮ.

Share

ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನಾಚರಣೆಯ ಪ್ರಯುಕ್ತ ಕನ್ನಡ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರಾಗಿ ನೇಮಕವಾಗಿರುವ ಸಂವಹನ ಪ್ರಕಾಶನದ ಡಿ.ಎಸ್. ಲೋಕಪ್ಪನವರನ್ನು ಅನಿಕೇತನ ಸೇವಾ ಟ್ರಸ್ಟ್ ವತಿಯಿಂದ ಅಭಿನಂದಿಸಲಾಯಿತು.
ಸಂವಹನ ಪ್ರಕಾಶನದ ಮೂಲಕ ಹಿರಿಯರ ಹಾಗೂ ಕಿರಿಯ ಸಾಹಿತಿಗಳ ಸಾವಿರಕ್ಕೂ ಮಿಗಿಲಾದ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದ ಕೀರ್ತಿ ಲೋಕಪ್ಪನವರದು. ಪಾರಂಪರಿಕ ನಗರಿಯಾದ ಮೈಸೂರಿಗೆ ಪುಸ್ತಕ ಪ್ರಕಾಶನದ ಮೂಲಕ ಅವರು ಒಂದು ಘನತೆಯನ್ನು ತಂದುಕೊಟ್ಟಿದ್ದಾರೆ. ಇವರ ಪ್ರಕಾಶನದ ಪುಸ್ತಕಗಳಿಗೆ ಅನೇಕ ರಾಜ್ಯಮಟ್ಟದ ಪುರಸ್ಕಾರಗಳು ಸಂದಿವೆ. ಇವರ ಪ್ರಕಾಶನದಲ್ಲಿ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ, ಚನ್ನವೀರ ಕಣವಿ, ಡಾ. ಎಂ. ಚಿದಾನಂದಮೂರ್ತಿ, ಎಂ.ಎಂ. ಕಲಬುರ್ಗಿ, ಜಿ.ಎಸ್. ಸಿದ್ದಲಿಂಗಯ್ಯ, ಕೆ.ಸಿ. ಶಿವಪ್ಪ, ಡಾ. ಬಿ.ವಿ. ವೆಂಕಟಾಚಲ ಶಾಸ್ತ್ರಿ ಇನ್ನೂ ಮುಂತಾದ ಹಿರಿಯ ಸಾಹಿತಿಗಳ ಕೃತಿಗಳು ಪ್ರಕಟಗೊಂಡಿವೆ.
ಕನ್ನಡ ನಾಡಿನ ಸಾಹಿತ್ಯ ಮತ್ತು ಪ್ರಕಾಶನ ಕ್ಷೇತ್ರದಲ್ಲಿ ಬಹುದೊಡ್ಡ ನಕ್ಷತ್ರವಾಗಿ ಮಿನುಗಿದ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಹುಟ್ಟುಹಬ್ಬದ ಅಂಗವಾಗಿ ಅನಿಕೇತನ ಸೇವಾ ಟ್ರಸ್ಟ್ ಸನ್ಮಾನಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಟ್ರಸ್ಟ್ನ ಅಧ್ಯಕ್ಷರು, ಮಾಜಿ ನಗರ ಪಾಲಿಕೆ ಸದಸ್ಯರೂ ಆದ ಕೆ.ವಿ. ಮಲ್ಲೇಶ್ರವರು ತಿಳಿಸಿರುತ್ತಾರೆ.
ಅಭಿನಂದನೆಯ ಸರಳ ಸಮಾರಂಭದಲ್ಲಿ ಸಾಹಿತಿಗಳಾದ ಪ್ರೊ. ಮಲೆಯೂರು ಗುರುಸ್ವಾಮಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ್, ವೀರ ವನಿತೆ ರಾಣಿ ಚೆನ್ನಮ್ಮ ಸ್ವಯಂ ಸೇವಾ ಸಂಘದ ಉಪಾಧ್ಯಕ್ಷರಾದ ಎ.ಪಿ. ವಿರೂಪಾಕ್ಷ, ಕಲಾವಿದ ರಂಗು ಸಂದೇಶ ಹಾಜರಿದ್ದರು


Share