ಪೊಲೀಸ್ ಠಾಣೆಯ ವತಿಯಿಂದ Mask Day ದಿನಾಚರಣೆ.

ಮೈಸೂರು:18 ಜೂನ್ 2020

ಮಾಸ್ಕ್ ದಿನಾಚರಣೆ ಹಿನ್ನಲೆ
ಕೃಷ್ಣರಾಜ ಪೊಲೀಸ್ ಠಾಣೆ ವತಿಯಿಂದ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ಕೆ.ಆರ್.ಪೋಲಿಸ್
ಠಾಣೆ ಇನ್ಸ್ಪೆಕ್ಟರ್ ಶ್ರೀನಿವಾಸ್ ನೇತೃತ್ವದಲ್ಲಿ ನಡೆದ ಜಾಥಾವು
ಅಗ್ರಹಾರ ವೃತ್ತದಲ್ಲಿ ಧ್ವನಿವರ್ಧಕ ಮೂಲಕ ಹಾಗೂ ಕೈಯಲ್ಲಿ ನಾಮಫಲಕ‌ ಹಿಡಿದು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಿದ್ರು.

ಇದೇ ಸಂದರ್ಭ ಇನ್ಸ್ಪೆಕ್ಟರ್ ಶ್ರೀನಿವಾಸ್ ಮಾತನಾಡಿ
ಕೊರೊನಾ ಹಿನ್ನಲೆ ಇಂದು
ಮಾಸ್ಕ್ ದಿವಸ ಆಚರಣೆ ಹಿನ್ನಲೆ ಕೆ.ಆರ್.ಪೋಲಿಸ್ ಠಾಣೆಯಿಂದ ಜಾಥಾ ಹಮ್ಮಿಕೊಳ್ಳಲಾಗಿದೆ‌.ಅಗ್ರಹಾರ,ನಂಜುಮಳಿಗೆ ವೃತ್ತ,ಚಾಮುಂಡಿಪುರಂ ಸರ್ಕಲ್,ಸೆಂಟರ್ ಮೇರಿಸ್ ಸರ್ಕಲ್,ರಾಮಾನುಜ ರಸ್ತೆ ಮೂಲಕ ಅಗ್ರಹಾರದಲ್ಲಿ ಜಾಥಾ ಅಂತ್ಯಗೊಳ್ಳಲಿದೆ.
ಸಾರ್ವಜನಿಕರು ಮನೆಯಿಂದ ಹೊರಗೆ ಬರುವ ಮುನ್ನ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ.
ಮಾಸ್ಕ್ ಧರಿಸಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದರು.

ಜಾಥಾದಲ್ಲಿ
ಕೃಷ್ಣರಾಜ ಪೊಲೀಸ್ ಠಾಣೆಯ ಸಿಬ್ಬಂದಿಗಳು ಭಾಗಿಯಾಗಿದ್ದರು.