ಪೊಲೀಸ್ ಸಿಬ್ಬಂದಿ ವರ್ಗಕ್ಕೆ ಸನ್ಮಾನ ಹಾಗೂ ಗೌರವ ಸಮರ್ಪಣೆ

ಕರೋನಾ ಮಹಾಮಾರಿ ಇಡೀ ವಿಶ್ವವನ್ನು ಆಕ್ರಮಿಸಿ ಎಲ್ಲಾ ದೇಶಗಳಲ್ಲೂ ಕೂಡಾ ತನ್ನದೇ ಆದಂತಹ ದೊಡ್ಡ ಆಕ್ರಮಣವನ್ನು ಮಾಡಿದ್ದು, ಇದೇ ಸಂದರ್ಭದಲ್ಲಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿ ಮೈಸೂರು ಬಂದು, ಅತಿ ಹೆಚ್ಚು ಜನ ಕರೋನಾ ಸೋಂಕಿತರು ಮೈಸೂರಿನಲ್ಲಿದ್ದಾರೆ ಎಂಬ ಭಯದ ವಾತಾವರಣ ನಿರ್ಮಾಣ ಮಾಡಿತ್ತು. ವಿಶೇಷವಾಗಿ ಎಲ್ಲರೂ ಮನೆಯಲ್ಲಿರಬೇಕು ಎಂಬ ಸಂದೇಶವನ್ನು ಪಾಲನೆ ಮಾಡುತ್ತಿರುವ ಸಂದರ್ಭದಲ್ಲಿ 4500 ರಷ್ಟು ಜನರು ಕ್ವಾರಂಟೈನ್ ನಲ್ಲಿದ್ದು ಇವರನ್ನು ವೈದ್ಯರು, ಅರೆ ವೈದ್ಯರು ರೋಗ ಹರಡದಂತೆ ನೊಡಿಕೊಂಡಿದ್ದರೆ ಹೊರಗಡೆ ಸಾರ್ವಜನಿಕರು ಭೀತಿಯಿಲ್ಲದೇ ಓಡಾಡಲು ಕಟ್ಟುನಿಟ್ಟಿನ ಕ್ರಮ ವಹಿಸಿ ನಿರಂತರ ಸೇವೆ ಸಲ್ಲಿಸಿದ ಪೊಲೀಸ್ ಸಿಬ್ಬಂದಿ ವರ್ಗದವರು 43 ದಿವಸಗಳ ಕಾಲ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಕೆಲಸ ಮಾಡಿದ್ದಾರೆ, ಅವರನ್ನು COVID -19 ವಾರಿಯರ್ಸ್ ಎಂದು ಡಿಕ್ಲೇರ್ ಮಾಡಿ ಅವರುಗಳಿಗೆ ಸನ್ಮಾನ ಮಾಡುವ ಮೂಲಕ ಆ ವೃತ್ತಿಗೆ ಗೌರವ ಬರುವ ರೀತಿಯಲ್ಲಿ ನೆಡೆದುಕೊಂಡಿದ್ದಾರೆ ಎಂದು ಹೇಳಿ ಸನ್ಮಾನ ಮಾಡುವಂತಹ ಕೆಲಸವನ್ನು ಮಾಡುತ್ತಿದ್ದೇವೆ .
ಬಾರ್ಡರ್ ನಲ್ಲಿ ಯೋಧರು ಶತ್ರು ಸೈನ್ಯವನ್ನು ನಿರ್ಣಾಮ ಮಾಡುವ ರೀತಿಯಲ್ಲಿ ಮೈಸೂರಿನಲ್ಲಿ ಕರೋನ ವೈರಸ್ ಹರಡದಂತೆ ನಿರ್ಣಾಮ ಮಾಡುವಲ್ಲಿ ನಿರಂತರ ಹೋರಾಡಿದ ಪೊಲೀಸ್ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಸನ್ಮಾನಿತರಿಗೆ ಇನ್ನು ಮುಂದೆ ಹೆಚ್ಚಿನ ಜವಾಬ್ದಾರಿ ಯಿದ್ದು ನಾಳೆಯಿಂದ ಅನ್ಯ ಜಿಲ್ಲೆಯಿಂದ, ಅನ್ಯ ರಾಜ್ಯದಿಂದ, ಅನ್ಯ ರಾಷ್ಟ್ರದಿಂದ ಬರುವವರನ್ನು ನಿಯಂತ್ರಿಸುವ ದೊಡ್ಡ ಜವಾಬ್ದಾರಿ ಇದ್ದು ಇದನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಲು ತಾಯಿ ಚಾಮುಂಡೇಶ್ವರಿ ಆರ್ಶಿವದಿಸಲಿ ಎಂದು ಅಭಿನಂದಿಸಿ ಅವರನ್ನು COVID -19 ವಾರಿಯರ್ಸ್ ಎಂದು ಗುರುತಿಸಿದ ಪೊಲೀಸ್ ಸಿಬ್ಬಂಧಿಗಳನ್ನು ಸನ್ಮಾನಿಸಿದರು.
ಕೃಷ್ಣರಾಜ ಎಸಿಪಿ ಪೂರ್ಣಚಂದ್ರ ತೇಜಸ್ವಿ, ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವಂತಹ ಪೊಲೀಸ್ ನಿರೀಕ್ಷಕರುಗಳಾದ ಮಂಜುನಾಥ್, ಶ್ರೀನಿವಾಸ್, ರಾಜು, ಗಂಗಾಧರ್, ಜಗದೀಶ್, ಶಿವಕುಮಾರ್, ಪೂಜ, ಗೌರೀಶಂಕರ್ ಹಾಗೂ ಟ್ರಾಫೀಕ್ ಹಾಗೂ ಲಕ್ಷ್ಮಿಪುರಂ ಠಾಣೆಯ ಸಿಬ್ಬಂದಿ ವರ್ಗದವರಿಗೆ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಭಾಷ್ಯಂ, ಸೇಫ್ ವ್ಹೀಲ್ಸ್ ಪ್ರಶಾಂತ್ ಕೃಷ್ಣರಾಜ ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ಎಂ ವಡಿವೇಲು, ಉಪಾಧ್ಯಕ್ಷರುಗಳಾದ ಬಾಲಕೃಷ್ಣ ಎಂ ಆರ್, ಒಂ ಶ್ರೀನಿವಾಸ್, ಸಂತೋಷ್(ಶಂಭು), ಹೇಮಂತ್, ಮನು ಅಪ್ಪಿ, ವಿಜಯ್ ನಾಯಕ, ಹಾಗೂ ಮುಂತಾದವರು ಹಾಜರಿದ್ದರು