ಪೋಕ್ಸೋ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ

Share

ಪೋಕ್ಸೋ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ
ಮಂಡ್ಯ.ಸೆ.13-
 ಪ್ರಕರಣದ ವಿವರ: 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಆರೋಪಿಯು ಅಪಹರಿಸಿಕೊಂಡು ಹೋಗಿ ಬಲವಂತವಾಗಿ ಬಾಲ್ಯ ವಿವಾಹ ಮಾಡಿಕೊಂಡು ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಕಲಂ:363,354 ಐ.ಪಿ.ಸಿ ಮತ್ತು ಕಲಂ:8,12 ಪೋಕ್ಸೋ ಕಾಯಿದೆ ಹಾಗೂ ಕಲಂ,9 ಬಾಲ್ಯ ವಿವಾಹ ನಿಷÃಧ ಕಾಯಿದೆ ಅಡಿ ಅಂದಿನ ಮೇಲುಕೋಟೆ ಪೋಲೀಸ್ ಠಾಣಾ ಪಿ.ಎಸ್.ಐ ಗಿರಿಧರರವರು ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ದಾಖಲಿಸಲಾಗಿತ್ತು.

ಈ ಪ್ರಕರಣವು ಸ್ಪೆಷಲ್ ಕೇಸ್ ಸಂ:91/2023 (ಮೇಲುಕೋಟೆ ಪೊಲೀಸ್ ಠಾಣಾ ಮೊ.ಸಂ:9/2023) ರಂತೆ ಮಂಡ್ಯದ ಮಾನ್ಯ ಎಫ್.ಟಿ.ಎಸ್.ಸಿ-1(ಪೋಕ್ಲೋ ವಿಶೇಷ) ನ್ಯಾಯಾಲಯದಲ್ಲಿ ವಿಶೇಷ ನ್ಯಾಯಾಧೀಶರಾದ ಮಾನ್ಯ ಶಬಾನಾ ಬೇಗಂ ಲಾಡ್‌ಖಾನ್‌ರವರ ಮುಂದೆ ವಿಚಾರಣೆ ನಡೆದು ಆರೋಪಿ ರಾಜೇಶ ಇವರಿಗೆ ಕಲಂ: 363 ಐ.ಪಿ.ಸಿ ಹಾಗೂ ಕಲಂ:8 ಪೋಕ್ಸೋ ಕಾಯಿದೆ ಆಪರಾಧಗಳಿಗೆ ಅಪರಾಧಿ ಎಂದು ತೀರ್ಪು ನೀಡಿದ್ದು, ಕಲಂ: 363 ಐ.ಪಿ.ಸಿ ಗೆ 1 ವಷÀð ಸಾದಾ ಸಜೆ & 5000ರೂ  ದಂಡ ಹಾಗೂ ಕಲಂ:8 ರ ಪೋಕ್ಸೋ ಕಾಯಿದೆ ಅಪರಾಧಕ್ಕೆ 3 ವರ್ಷಗಳ ಸಾದಾ ಸಜೆ ಮತ್ತು 15000ರೂ ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ. ಅಭಿಯೋಜನೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಎಂ.ಜೆ.ಪೂರ್ಣಿಮಾರವರು ವಾದ ಮಂಡಿಸಿದ್ದರು.

1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾದ (ಪೋಕ್ಸೋ), ಎಂ.ಜೆ.ಪೂರ್ಣಿಮಾರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share