ಪೋಲೀಸರಿಂದ 6 ಲಕ್ಷ ನಗದು ವಶ

Share

ಉಡುಪಿಯ ಹೆಜಮಾಡಿ ಚೆಕ್ ಪೋಸ್ಟ್ ಮತ್ತು ಮಂಗಳೂರಿನ ನಂತೂರು ಚೆಕ್ ಪೋಸ್ಟ್ ನಲ್ಲಿ ಉಡುಪಿ ಮತ್ತು ಮಂಗಳೂರು ಪೊಲೀಸರು ಒಟ್ಟು 6.10 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಅಬ್ದುಲ್ ಖಾದರ್ ಜೈಲಾನಿ ಮತ್ತು ಚಾಲಕ ಅಹ್ಮದ್ ಕಬೀರ್ ಅವರು ಮಂಗಳೂರಿನಿಂದ ಉಡುಪಿ ಕಡೆಗೆ ಕಾರಿನಲ್ಲಿ 500 ರೂಪಾಯಿ ನೋಟುಗಳ ಬಂಡಲ್‌ನಲ್ಲಿ ಐದು ಲಕ್ಷ ರೂಪಾಯಿ ಲೆಕ್ಕವಿಲ್ಲದ ಹಣವನ್ನು ಸಾಗಿಸುತ್ತಿದ್ದರು. ಹಣ ಸಾಗಿಸಲು ಅವರ ಬಳಿ ಯಾವುದೇ ದಾಖಲೆ ಇರಲಿಲ್ಲ. ಪಡುಬಿದ್ರಿ ಪೊಲೀಸರು ಕಾರು ಹಾಗೂ ನಗದನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.


Share