ಇಂದು ವಿಶ್ವ ಪರಿಸರ ದಿನಾಚರಣೆ. ನಗರದ ಸ್ವಚ್ಛತೆಗಾಗಿ ಸದಾ ಶ್ರಮಿಸುವ ಪೌರಕಾರ್ಮಿಕರು ಇಂದು ಸಸಿ ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಿದ್ದಾರೆ.
ಪೌರಕಾರ್ಮಿಕರು ಸದಾ ನಗರದ ಸ್ವಚ್ಛತೆಯ ಕಡೆ ಗಮನ ಹರಿಸುತ್ತಿದ್ದು, ಪರಿಸರ ಕುರಿತು ಕಾಳಜಿ ಮೆರೆದಿದ್ದಾರೆ. ನಗರದ ಗೋಕುಲಂ ವಾರ್ಡ್ ನ ಪೌರಕಾರ್ಮಿಕರು ಇಂದು ಬೆಳಿಗ್ಗೆ ಗೋಕುಲಂ ನ ಸ್ಮಶಾನ ರಸ್ತೆಯಲ್ಲಿ ಸೂಪರ್ ವೈಸರ್ ಕಮಲ್ ನೇತೃತ್ವದಲ್ಲಿ ಸಸಿ ನೆಡುವ ಮೂಲಕ ವಿಶ್ವಪರಿಸರ ದಿನವನ್ನು ಆಚರಿಸಿದರು.
ಪೌರಕಾರ್ಮಿಕರಿಂದ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಣೆ ನಗರದಲ್ಲಿ ಕೋವಿಡ್-19 ಅತಿ ಹೆಚ್ಚು ಪತ್ತೆಯಾದ ಸಂದರ್ಭದಲ್ಲಿಯೂ ನಗರದ ಸ್ವಚ್ಛತೆಯಲ್ಲಿ ಗುರುತಿಸಿಕೊಂಡು ಕೊರೋನಾ ವಾರಿಯರ್ಸ್ ಗಳೆಂದು ಗುರುತಿಸಿಕೊಂಡಿದ್ದ ಪೌರಕಾರ್ಮಿಕರು ಸಸಿ ನೆಟ್ಟು ಪರಿಸರ ದಿನ ಆಚರಿಸಿದ್ದಕ್ಕೆ ಶ್ಲಾಘನೆ ವ್ಯಕ್ತವಾಗಿದೆ.