ಪೌರಕಾರ್ಮಿಕರು ಕೂಡ ಈ ದೇಶದ ಸ್ವಚ್ಛತೆಯ ಸೈನಿಕರು-ದರ್ಶನ್

 

*ಪೌರಕಾರ್ಮಿಕರು ಕೂಡ ಈ ದೇಶದ ಸ್ವಚ್ಛತೆಯ ಸೈನಿಕರು-ದರ್ಶನ್ ಯದುರಾಜ್*

ಮೈಸೂರಿನ ದೇವರಾಜ ರಸ್ತೆಯಲ್ಲಿ 77ನೇ ಸ್ವತಂತ್ರೋತ್ಸವದ ಸಂಭ್ರಮವನ್ನು ಸಿಂಹದಮರಿ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸ್ವತಂತ್ರ ದಿನಾಚರಣೆಯಲ್ಲಿ ಪೌರಕಾರ್ಮಿಕರಿಂದ ಧ್ವಜಾರೋಹಣವನ್ನು ಮಾಡಿಸಿ, ದೇಶಕ್ಕೆ ಬಹಳ ಮುಖ್ಯ ಎಂದು ವ್ಯಕ್ತಪಡಿಸಲಾಯಿತು

*ಇದೇ ಸಂದರ್ಭದಲ್ಲಿ ಯುವ ಮುಖಂಡ ದರ್ಶನ್ ಯದುರಾಜ್ ಮಾತನಾಡಿ”ಈ ದೇಶದ ಸ್ವತಂತ್ರಕ್ಕಾಗಿ ಸಾವಿರಾರು ಸ್ವತಂತ್ರ ಹೋರಾಟಗಾರರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ್ದಾರೆ ಇಂದಿಗೂ ಸಹ ಕೆಲವು ವ್ಯಕ್ತಿಗಳು ಅಂತಹ ಹೋರಾಟಗಾರರ ತೇಜೋವಧೆ ಮಾಡುತ್ತಲೇ ಬಂದಿದ್ದಾರೆ ಆದರೆ ಭಾರತೀಯ ನಾಗರಿಕನಾಗಿ ಒಳ್ಳೆ ಪ್ರಜೆಯಾಗಿ ನಾವು ಅಂತಹ ವೀರರನ್ನ ನೆನೆಸಿಕೊಳ್ಳಲೇಬೇಕು ಮತ್ತು ಗೌರವದಿಂದ ಕಾಣಲೇಬೇಕು ಈ ಈ ದೇಶಕ್ಕಾಗಿ ದುಡಿಯುತ್ತಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಅದು ಯೋಧನಿರಬಹುದು ವೈದ್ಯನಿರಬಹುದು ಇನ್ನು ಅನೇಕ ವ್ಯಕ್ತಿಗಳಿರಬಹುದು ಅವರೆಲ್ಲರೂ ಸ್ವತಂತ್ರ ವೀರರೇ ಅದೇ ಸಾಲಿನಲ್ಲಿ ಸೇರಿದರೆ ನಮ್ಮ ಪೌರಕಾರ್ಮಿಕರು ಪೌರಕಾರ್ಮಿಕರು ಕೂಡ ಸ್ವಚ್ಛತೆಯ ಯೋಧರೇ” ಎಂದರು*

*ನಂತರ ಮಾತನಾಡಿದ ಪೌರ ಕಾರ್ಮಿಕ ಅಂಬಯ್ಯ ರವರು “ನಮ್ಮನ್ನು ಕರೆದು ಧ್ವಜಾರಹಣ ಮಾಡಿಸಿದ್ದಕ್ಕೆ ನಿಮ್ಮ ಸಂಸ್ಥೆಗೆ ಹಾಗೂ ಮೈಸೂರಿನ ಜನತೆಗೆ ಧನ್ಯವಾದಗಳು ಅರ್ಪಿಸಿ ಈ ರೀತಿಯ ಪ್ರೋತ್ಸಾಹ ನಮಗೆ ಇನ್ನಷ್ಟು ಉಮ್ಮಸ್ಸಿನಿಂದ ಕೆಲಸ ಮಾಡಲು ಶಕ್ತಿ ಬರುತ್ತದೆ ಈ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದ ಎಲ್ಲರಿಗೂ ನನ್ನ ವಂದನೆಯನ್ನು ಆಫೀಸುತ್ತೇನೆ” ಎಂದರು*

ಇದೇ ಸಂದರ್ಭದಲ್ಲಿ ಟ್ರಸ್ಟಿನ ಗೌರವಾಧ್ಯಕ್ಷರಾದ ಕೆ.ದಿನೇಶ್. ಪಾಲಿಕೆ ಸದಸ್ಯ ಪ್ರಮೀಳಾ ಭರತ್, ಟ್ರಸ್ಟಿನ ಅಧ್ಯಕ್ಷರಾದ ನಂಜುಂಡಸ್ವಾಮಿ, ಪ್ರಧಾನ ಕಾರ್ಯದರ್ಶಿ ರೂಪೇಶ್, ನವೀನ್, ಹಿರಿಯ ಪತ್ರಕರ್ತರಾದ ಎಂ ಟಿ ಜಯರಾಮ್,ಯದುರಾಜ್, ಶಿವಣ್ಣ ,ಮಂಜಣ್ಣ, ರಾಷ್ಟ್ರೀಯ ಹಿಂದೂ ಸಮಿತಿಯ ತೇಜಸ್ ಕೌಶಿಕ್, ಮಧು ಜಿ, ವಿನೋದ್ ಕುಮಾರ್, ಪುನೀತ್ , ಪ್ರಾಣೇಶ್,ರಾಜಣ್ಣ,ಮುರಳಿದರ್, ಬಸವಣ್ಣ
ಸಂತೋಷ, ರೋಹಿತ್, ರವಿ ಮತ್ತಿತರರು ಉಪಸ್ಥಿತರಿದ್ದರು