ಪ್ರತಿಬಾರಿ ದೋಣಿಯಲ್ಲಿ ಬಂದು ಮತಚಲಾಯಿಸಿರುವ 91 ರ ವಯೋವೃದ್ಧ

Share

ಉಡುಪಿ: ಮತದಾರರ ಶಿಕ್ಷಣ, ಮತದಾರರ ಜಾಗೃತಿ ಮತ್ತು ಮತದಾರರ ಸಾಕ್ಷರತೆಯನ್ನು ಉತ್ತೇಜಿಸುವ ಸಲುವಾಗಿ ಭಾರತ ಚುನಾವಣಾ ಆಯೋಗದ (ಇಸಿಐ) ಪ್ರಮುಖ ಕಾರ್ಯಕ್ರಮವಾದ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ (ಎಸ್‌ವಿಇಇಪಿ) ಭಾಗವಾಗಿ ಕರ್ನಾಟಕದ ಉಡುಪಿ ಜಿಲ್ಲಾಡಳಿತದ ಅಧಿಕಾರಿಗಳು ಜಿಲ್ಲೆಯ ದೂರದ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ.
ಶನಿವಾರ ಉಡುಪಿ ಡಿಸಿ ಕೂರ್ಮಾರಾವ್ ಎಂ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್, ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂಎಚ್, ಕರಾವಳಿ ಭದ್ರತಾ ಪೊಲೀಸ್ ಎಸ್ಪಿ ಅಬ್ದುಲ್ ಅಹ್ಮದ್ ಸೇರಿದಂತೆ ಅಧಿಕಾರಿಗಳ ತಂಡ ಬ್ರಹ್ಮಾವರದ ಐರೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿನಿಯಾರ ಕುದ್ರುವಿಗೆ ಭೇಟಿ ನೀಡಿ 91 ವರ್ಷದ ವಯೋವೃದ್ಧನನ್ನು ಗುರುತಿಸಿದ್ದಾರೆ. -ವೃದ್ಧ ಜೆರೋಮ್ ಡಿಸೋಜರ್ವರನ್ನು ಜಿಲ್ಲೆಯ “ಐಲ್ಯಾಂಡ್ ಐಕಾನ್” ಎಂದು ಕರೆದಿದ್ದಾರೆ.
“ಮತಗಟ್ಟೆಗಳನ್ನು ಪರಿಶೀಲಿಸಿದ ನಂತರ, ಮತದಾರರಲ್ಲಿ ಜಾಗೃತಿ ಮೂಡಿಸಲು ಮತ್ತು ಮತದಾನ ಮಾಡಲು ಪ್ರೋತ್ಸಾಹಿಸಲು ನಾವು ಕೆಲವು ದ್ವೀಪಗಳಿಗೆ ಭೇಟಿ ನೀಡಲು ನಿರ್ಧರಿಸಿದ್ದೇವೆ.
ಸೀತಾ ನದಿಯ ಮಧ್ಯದಲ್ಲಿರುವ ಕಿನಿಯಾರ ದ್ವೀಪ ಕುದ್ರು ಸೇತುವೆಯ ಮೂಲಕ ಸಂಪರ್ಕ ಹೊಂದಿಲ್ಲದ ಕಾರಣ ಜನರು ಶಾಲೆ, ಆಸ್ಪತ್ರೆಗಳು ಮತ್ತು ಇತರ ಅಗತ್ಯಗಳಿಗೆ ಹೋಗಲು ದೋಣಿ ಮೂಲಕ ನದಿಯನ್ನು ದಾಟಬೇಕಾಗಿದೆ, ”ಎಂದು ಸಂಬಂಧ ಪಟ್ಟ ಅಧಿಕಾರಿಯೊಬ್ಬರು ಹೇಳಿದ್ದಾರೆ.
“ಜರೋಮ್ ಡಿಸೋಜಾ ಅವರನ್ನು ಭೇಟಿಯಾದಾಗ ನಮಗೆ ಆಶ್ಚರ್ಯವಾಯಿತು, ಅವರು ಬಹುಶಃ ಇಲ್ಲಿಯವರೆಗೆ ಒಂದೇ ಒಂದು ಚುನಾವಣೆಯನ್ನು ತಪ್ಪಿಸಿಲ್ಲ. ಉತ್ಸಾಹಿ ಹಿರಿಯ ನಾಗರಿಕರಾದ, ಅವರು ಮನೆಯಿಂದಲೇ ಮತ ಚಲಾಯಿಸುವುದಕ್ಕಿಂತ ಹೆಚ್ಚಾಗಿ ಮತಗಟ್ಟೆಗೆ ಭೇಟಿ ನೀಡಿ ಮತ ಚಲಾಯಿಸಲು ಬಯಸಿದ್ದಾರೆ. ಆರು ಮನೆಗಳ ಸುಮಾರು 27 ಸದಸ್ಯರು ಮತಚಲಾಯಿಸುವುದಾಗಿ ಭರವಸೆ ನೀಡಿದ್ದಾರೆ ” ಎಂದು ತಿಳಿಸಿದ್ದಾರೆ. ಇವರ ಸ್ಪೂರ್ತಿಯನ್ನು ನೋಡಿ ಇಲಾಖೆಯು ಬೇರೆ ಕಡೆ ಚುನಾವಣಾ ಜಾಗೃತಿ ಮೂಡಿಸುವ ಸಂದರ್ಭದಲ್ಲಿ ಇವರ ಉದಾಹರಣೆಯನ್ನು ನೀಡಿ ಮತದಾನದ ವಿಶೇಷ ತಿಳಿಸುವುದಾಗಿ ತಿಳಿಸಿದ್ದಾರೆ.


Share