ಪ್ರಧಾನಮಂತ್ರಿಗಳ ಐತಿಹಾಸಿಕ ಆರ್ಥಿಕ ಪ್ಯಾಕೇಜ್ ಸ್ವಾಗತಾರ್ಹ: ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸ ಪ್ರಸಾದ್

481
Share

ಚಾಮರಾಜನಗರ, ಮೇ 14 ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯಗಳು ಅನುಭವಿಸುತ್ತಿರುವ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೇ 12 ರಂದು 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಿಸಿರುವುದು ಅತ್ಯಂತ ಸ್ವಾಗತಾರ್ಹ ಹಾಗೂ ಐತಿಹಾಸಿಕ ತೀರ್ಮಾನ ಎಂದು ಚಾಮರಾಜನಗರ ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸ್ ಪ್ರಸಾದ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಕೊರೋನಾ ಮಹಾಮಾರಿಯ ಭೀಕರ ಹೊಡೆತಕ್ಕೆ ದೇಶದ ಆರ್ಥಿಕ ಸ್ಥಿತಿ ಏರುಪೇರು ಆಗಿದೆ, ವಿಶೇಷವಾಗಿ ಶ್ರಮಿಕ ವರ್ಗ ತುಂಬ ತೊಂದರೆಗೆ ಒಳಗಾಗಿದೆ. ಸಣ್ಣ ಕೈಗಾರಿಕೆಗಳು ನೆಲೆ ಕಚ್ಚುವಂತಾಗಿದೆ. ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳಿಂದ ತರಿಸಿಕೊಂಡ ವರದಿಯನ್ನು ಪರಿಶೀಲಿಸಿ ರಾಜ್ಯಗಳು ಅನುಭವಿಸುತ್ತಿರುವ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ.ಪ್ರಧಾನಮಂತ್ರಿಗಳು ಘೋಷಿಸಿರುವ ವಿಶೇಷ ಪ್ಯಾಕೇಜ್ ಅನ್ನು ಎಲ್ಲಿಯೂ ಸೋರಿಹೋಗದಂತೆ, ಮಧ್ಯವರ್ತಿಗಳÀ ಹಸ್ತಕ್ಷೇಪವಾಗದಂತೆ ಜಾಗೃತಿವಹಿಸಿ, ದಕ್ಷತೆಯಿಂದ ಅನುಷ್ಟಾನಗೊಳಿಸಬೇಕು. ಆಗ ಭಾರತವನ್ನು ಸ್ವಾವಲಂಭಿ ರಾಷ್ತ್ಟವಾಗಿಸಬೇಂಬ ಕನಸು ನನಸಾಗುತ್ತದೆ. ಈ ಮಹಾನ್ ಕಾರ್ಯದಲ್ಲಿ ರಾಜಕಾರಣಿಗಳು, ಅಧಿಕಾರಿಗಳು, ಎಲ್ಲ ಹಂತದ ನೌಕರರು ಮತ್ತು ನಾಗರಿಕರು ಸಹಕರಿಸುವುದು ಅಗತ್ಯವಾಗಿದೆ ಎಂದ ವಿ. ಶ್ರೀನಿವಾಸ್ ಪ್ರಸಾದ್ ಅವರು ತಿಳಿಸಿದ್ದಾರೆ.ಕೊರೋನಾ ಸಾಂಕ್ರಾಮಿಕ ರೋಗದಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಮುನ್ನೆಚ್ಚರಿಕೆಯಿಂದ ಸಾಮಾಜಿಕ ಅಂತರವನ್ನು ಪ್ರತಿಯೊಬ್ಬರು ಕಾಯ್ದುಕೊಳ್ಳಬೇಕು. ಇಡೀ ದೇಶಕ್ಕೆ ಮಾರ್ಚ್ 23ರಿಂದಲೇ ಲಾಕ್‍ಡೌನ್ ಮುಂದುವರಿಸಿಕೊಂಡು ಬಂದಿರುವುದರಿಂದ ದೇಶವು ಬಹುದೊಡ್ಡ ಗಂಡಾಂತರದಿಂದ ಪಾರಾಗುವಂತಾಗಿದೆ ಪಕ್ಷಾತೀತವಾಗಿ, ಮತೀಯವಾಗಿ ಪ್ರತಿಯೊಬ್ಬರು ಕೊರೋನಾ ವಿರುದ್ಧ ಹೋರಾಡಿ ಭಾರತವನ್ನು ಬಲಪಡಿಸೋಣ ಎಂದು ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸ್ ಪ್ರಸಾದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share