ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಅಂಗವಾಗಿ ನಮೋ ದಿವಸ್ ನಮಸ್ಕಾರ ಬೃಹತ್ ವಿಶೇಷ ಕಾರ್ಯಕ್ರಮ.

Share

ಮೈಸೂರು
ನಮೋ ದಿವಸ್ ನಮಸ್ಕಾರ ಶೀರ್ಷಿಕೆಯಡಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 70ನೇ ವರ್ಷದ ಹುಟ್ಟುಹಬ್ಬವನ್ನು ಇಂದು ಅರ್ಥಪೂರ್ಣವಾಗಿ ಮೈಸೂರು ನಗರದ ಕೆ ಆರ್ ಕ್ಷೇತ್ರದ ಶಾಸಕರ ಗೃಹ ಕಚೇರಿ ಮುಂದೆ ಆಚರಿಸಲಾಗುತ್ತಿದೆ. ಈ ಸಂಬಂಧ ಗೃಹ ಕಚೇರಿ ಮುಂಭಾಗದಲ್ಲಿ ಇರತಕ್ಕಂತ ಉದ್ಯಾನವನದಲ್ಲಿ ವೇದಿಕೆಯನ್ನು ನಿರ್ಮಿಸಲಾಗಿದ್ದು ಉದ್ಯಾನವನದಲ್ಲಿ ವಿವಿಧ ನರೇಂದ್ರ ಮೋದಿಯವರ ಭಾವಚಿತ್ರಗಳನ್ನು ಹಾಕಲಾಗಿದೆ. ಉದ್ಯಾನವನದಲ್ಲಿ 70 ಯೋಜನೆ ಗಳ ಪ್ಲೆಕ್ಸ್ ಹಾಕಲಾಗಿದ್ದು ಕೇಂದ್ರ ಸರ್ಕಾರದಲ್ಲಿ ನರೇಂದ್ರಮೋದಿಯವರು ಅಭಿವೃದ್ಧಿ ಗೊಳಿಸಿರುವ ಬಗ್ಗೆ ಸಾರ್ವಜನಿಕರಿಗೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ.

ಇಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯಾರಣ್ಯಪುರಂ ರಾಮಲಿಂಗೇಶ್ವರ ಉದ್ಯಾನವನದಲ್ಲಿ ಕೋವಿಡ್ 19 ಮಾರ್ಗಸೂಚಿ ಅನುಸಾರ ಸಾಮಾಜಿಕ ಅಂತರ ಕಾಪಾಡಿಕೊಂಡು ಕಾರ್ಯಕ್ರಮ ನಡೆಸಲಾಗುವುದು ಎಂದು ಕ್ಷೇತ್ರದ ಶಾಸಕ ರಾಮದಾಸ್ ಅವರು ತಿಳಿಸಿದ್ದಾರೆ. ವಿಶೇಷವಾಗಿ ಮೋದಿ ಅವರ ಜನ್ಮ ಸಮಯ ಸೆಪ್ಟೆಂಬರ್ 17 ಗಂಟೆ 10.15, ಹೀಗಾಗಿ ಕಾರ್ಯಕ್ರಮವನ್ನು ಹತ್ತು-ಹದಿನೈದು ಸಮಯಕ್ಕೆ ಸರಿಯಾಗಿ ಉದ್ಘಾಟನೆಗೊಳ್ಳುವ ಏರ್ಪಾಡು ಮಾಡಲಾಗಿದೆ. ಬಿಜೆಪಿ ಕಾರ್ಯಕರ್ತ ಅಭಿಲಾಷ್ ಗೋರೆ ಅವರು ಮೋದಿ ಅವರ ಚಿತ್ರ ಬಿಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ಆ ಸಮಯದಲ್ಲಿ ಅವರ ಆರು ವರ್ಷಗಳ ಸಾಧನೆಗಳನ್ನು ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಲ್ಲಿ ಆನ್ ಲೈನ್ ಆಪ್ ನೀಡುವ ಕಾರ್ಯಕ್ರಮವನ್ನು ಬಿಡುಗಡೆ ಮಾಡಿ ಖ್ಯಾತ ಸಾಹಿತಿ ಎಸ್. ಎಲ್. ಭೈರಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಪ್ರಧಾನಮಂತ್ರಿ ಅವರು ಅನೇಕ ರಾಷ್ಟ್ರೀಯ ಯೋಜನೆಗಳನ್ನು ನೀಡಿದ್ದಾರೆ, ಕೆಲವು ಇದರಲ್ಲಿ ಯೋಜನೆಗಳನ್ನು ಪ್ರದರ್ಶಿಸಲಾಗುವುದು ವೀಕ್ಷಿಸಲು ಪ್ರತಿಯೊಬ್ಬರಿಗೂ ಅವಕಾಶ ನೀಡಲಾಗುವುದು, ಹಾಗೆಯೇ ಯೋಜನೆಗಳ ಬಗ್ಗೆ ತಮ್ಮ ಅಭಿಪ್ರಾಯ ಮತ್ತು ಯೋಜನೆಯ ಅನುಷ್ಠಾನಕ್ಕೆ ಅವರ ಸಲಹೆ ಸೂಚನೆಗಳನ್ನು 2 ಪುಟಗಳಿಗೆ ಮೀರದಂತೆ ಬರೆದು ನೀಡಲು ವ್ಯವಸ್ಥೆ ಮಾಡಲಾಗಿದೆ. ಒಳ್ಳೆಯ ಸಲಹೆ ಸೂಚನೆಗಳನ್ನು ನೀಡುವ ವ್ಯಕ್ತಿಗಳಿಗೆ ನಗದು ಬಹುಮಾನದೊಂದಿಗೆ ನಮೋ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ತಮ್ಮ ವೃತ್ತಿಯಲ್ಲಿ ಆತ್ಮ ಗೌರವದಿಂದ ಬದುಕಿ ಸಮಾಜಕ್ಕೆ ಮಾದರಿಯಾಗಿರುವ ವಿವಿಧ ಕ್ಷೇತ್ರದ 70 ಜನ ನಿರತರನ್ನು ಸಮಾಜದ ಗಣ್ಯರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ಕಾರ್ಯಕ್ರಮದ ವಿವರವನ್ನು ಶಾಸಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Share