ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಮಾಸ್ಕ್ ವಿತರಣೆ

Share

ಇಡೀ ದೇಶ ಕಂಡ ಶ್ರೇಷ್ಠ ನಾಯಕ ಜನ ಮೆಚ್ಚಿದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಅವರ 70 ನೇ ಹುಟ್ಟುಹಬ್ಬವನ್ನು ಅಗ್ರಹಾರ ವೃತ್ತದಲ್ಲಿರುವ ನೂರೊಂದು ಗಣಪತಿ ದೇವಸ್ಥಾನದಲ್ಲಿ ಬೇರು ಫೌಂಡೇಶನ್ ವತಿಯಿಂದ ನರೇಂದ್ರ ಮೋದಿ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ನರೇಂದ್ರ ಮೋದಿಜಿ ಅವರಿಗೆ ಆಯುರ್ ಆರೋಗ್ಯ ಇನ್ನೂ ಹೆಚ್ಚಿನದಾಗಿ ದೇಶ ಸೇವೆ ಮಾಡಲು ಶಕ್ತಿ ನೀಡಲಿ ಹಾಗೂ ಭಾರತ ದೇಶ ಕರೋನಾ ಮುಕ್ತ ರಾಷ್ಟ್ರವಾಗಲಿ ಎಂದು ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿರುವ ಜನರಿಗೆ ಹಾಗೂ ಆಟೊ ಚಾಲಕರಿಗೆ ಉಚಿತವಾಗಿ ಮಾಸ್ಕ್ ವಿತರಿಸಿ ಮಾತನಾಡಿದ ಬೇರು ಫೌಂಡೇಶನ್ ಅಧ್ಯಕ್ಷ ಮಧು ಎನ್ ಕರೋನಾ ನಮ್ಮ ಮೈಸೂರಿನಲ್ಲಿ ಪ್ರತಿದಿನ 700 ರಿಂದ 1 ಸಾವಿರದವರೆಗೂ ರೋಗಿಗಳು ಹೆಚ್ಚಾಗುತ್ತಿದ್ದು ಸಾರ್ವಜನಿಕರು ಮಾಸ್ಕ್ ಧರಿಸಿ ಅದಕ್ಕೆ ಬೇಕಾದಂತಹ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡು ಜಾಗೃತಿಯಿಂದ ಜೀವನವನ್ನು ನಡೆಸಬೇಕು. ಜೀವ ಇದ್ದರೆ ಜೀವನ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹಾಗೂ ರಾಷ್ಟ್ರ ಸರ್ಕಾರ ದೇಶದ ಏಳಿಗೆಗೆ ದೇಶದ ಜನರ ಆರೋಗ್ಯದ ವಿಚಾರವಾಗಿ ಸಾಕಷ್ಟು ಕ್ರಮ ಕೈಗೊಂಡಿದ್ದಾರೆ ಅವರ ಜೊತೆ ಕೈ ಜೋಡಿಸಿ ಇಡೀ ರಾಷ್ಟ್ರವನ್ನು ಕರೋನಾ ಮುಕ್ತ ರಾಷ್ಟ್ರವಾಗಿ ಸಬೇಕೆಂದು ಕೇಳಿಕೊಂಡರು.
ಈ ಸಂದರ್ಭದಲ್ಲಿ ಪರಮಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ , ಯುವ ಮುಖಂಡ ವಿಕ್ರಂ ಅಯ್ಯಂಗಾರ್, ಜೈ ಅರ್ಜುನ್, ಸುಚೇಂದ್ರ ,ರಾಕೇಶ್ ಭಟ್ , ಚಕ್ರಪಾಣಿ , ಪ್ರಶಾಂತ್ ಭಾರದ್ವಾಜ್, ರಾಕೇಶ್, ಹಾಗೂ ಬೇರು ಫೌಂಡೇಶನ್ ಸದಸ್ಯರು ಭಾಗವಹಿಸಿದ್ದರು .


Share