ಪ್ರಧಾನಿ ಮೋದಿ ಮಂಡ್ಯ ಮೆಗಾ ರೋಡ್ ಶೋ : ಒಂದು ಭಾಗದ ಜನಕ್ಕೆ ನಿರಾಶೆ

Share

ಇಂದು ಪ್ರಧಾನಿ ಮೋದಿ ಅವರು ಮಂಡ್ಯಕ್ಕೆ ತೆರಳಿ ಮೆಗಾ ರೋಡ್ ಶೋ ನಡೆಸಿದ್ದಾರೆ. ರಸ್ತೆಯ ಎರಡು ಬದಿಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದನ್ನು ನಾವು ನೋಡಿದೆವು. ಈ ರೋಡ್ ಶೋಗೆ ಬಂದಿದ್ದ ಎಲ್ಲ ಜನರ ಉದ್ದೇಶ ಪ್ರಧಾನಿ ಮೋದಿಯವರನ್ನು ನೋಡುವುದಾಗಿತ್ತು. ಆದರೆ ಪ್ರಧಾನಿಯವರು ಕಾರಿನ ಎಡ ಭಾಗದಲ್ಲಷ್ಟೇ ನಿಂತಿದ್ದರಿಂದ ಮೋದಿಯವರ ಬಲ ಭಾಗದಲ್ಲಿ ನೆರೆದಿದ್ದ ಜನರೆಲ್ಲರಿಗೂ ನಿರಾಶೆಯಾಯಿತರಂದು ಹೇಳಬಹುದು. ಆ ಭಾಗದ ಜನರಿಗೆ ಯಾರಿಗೂ ಮೋದಿ ಅವರನ್ನು ನೋಡಲು ಸಾಧ್ಯವಾಗದೆ ಇದ್ದದ್ದು ಕಂಡುಬಂದಿತು. ಬಹುಶಃ ಬಿಜೆಪಿ ಆಯೋಜಕರು ಮುಂಚಿತವಾಗಿ ಇದನ್ನು ಯೋಚಿಸಿ ಸರಿಯಾದ ವ್ಯವಸ್ಥೆ ಮಾಡಬಹುದಿತ್ತೇನೋ.


Share