ಪ್ರಧಾನ ಮಂತ್ರಿಗೆ ವತಿಯಿಂದ ಬಹಿರಂಗ ಪತ್ರ

Share

PM- CARES ನಿಧಿಗೆ ಇಲ್ಲಿಯವರಿಗೆ ಎಷ್ಟು ಹಣ ಮತ್ತು ಯಾರಿಂದ ಬಂದಿರುತ್ತದೆ ಎಂಬುದನ್ನು ಆಡಿಟ್ ಮಾಡಿಸಿ ಕೂಡಲೇ ಜನರಿಗೆ ತಿಳಿಸಬೇಕು ಈ ಹಣವನ್ನು ಕೂಡಲೇ ಪ್ರಧಾನಮಂತ್ರಿಗಳ ಪರಿಹಾರ ನಿಧಿಯಲ್ಲಿ ವಿಲೀನಗೊಳಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಮೈಸೂರು ಜಿಲ್ಲಾ ಸಮಿತಿ ಹಾಗೂ ಕೆಪಿಸಿಸಿ ವಕ್ತಾರರಾದ ಲಕ್ಷ್ಮಣ್ ಅವರು ಆಗ್ರಹಿಸಿದ್ದಾರೆ
ವಲಸೆ ಕಾರ್ಮಿಕರು ಮತ್ತು ನಿರ್ಗತಿಕರು ಲಾಕ್ ಡೌನ್ ಸಮಯ ಘೋಷಣೆ ಮುಂಚೆ ಸಮಯವಿಲ್ಲದೆ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಊಟ ಇಲ್ಲದಿದ್ದರೂ ಸಹಕರಿಸಿದ್ದನ್ನು ಮರೆತು ಬಿಜೆಪಿ ಸರ್ಕಾರ ಬಿಜೆಪಿ ಸರ್ಕಾರ ಈಗ ಅವರ ಊರುಗಳಿಗೆ ಹೋಗುವಾಗ ರೈಲು ಮತ್ತು ಬಸ್ಸುಗಳ ದರ ದುಪ್ಪಟ್ಟು ಮಾಡಿ ವಸೂಲಿ ಮಾಡಲು ಹೊರಟಿರುವುದು ನಾಚಿಗೇಡಿನ ಸಂಗತಿ ಎಂದು ಅವರು ವಾಗ್ ದಾಳಿ ನಡೆಸಿದರು
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪರಿಹಾರ ಹಣ ಎಷ್ಟು ಬಂದಿದೆ ಎಂದು ಶ್ವೇತ್ರಪತ್ರ ಹೊರಡಿಸಬೇಕು ಎಂದು ಅವರು ಬಹಿರಂಗ ಪತ್ರ ಬರೆದಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು .


Share