ಪ್ರಶಿಕ್ಷಣಾರ್ಥಿಗಳು ಕಾರ್ಯಕ್ಷಮತೆ ಬದ್ಧತೆಯಿಂದ ಕರ್ತವ್ಯ ನಿರ್ವಹಿಸಿ

Share

 

 

 

ಕಾರ್ಯ ಕ್ಷಮತೆ ಹಾಗೂ ಬದ್ಧತೆಯಿಂದ ಕೆಲಸ ನಿರ್ವಹಿಸುವ ಮೂಲಕ ವೃತ್ತಿಪರತೆ ಅಳವಡಿಸಿಕೊಳ್ಳಬೇಕು*

-*ಡಾ ಪಿ. ರವೀಂದ್ರನಾಧ್*

ಮೈಸೂರ  ಡಿಎಆರ್ ಕವಾಯತು ಮೈದಾನದಲ್ಲಿ ಇಂದು ಪೊಲೀಸ್ ತರಬೇತಿ ಶಾಲೆ ಮೈಸೂರು ೮ನೇ ತಂಡದ ಮಹಿಳಾ ನಾಗರಿಕ ಪೊಲೀಸ್ ಕಾನ್ಸಟೇಬಲ್ ರೈಲ್ವೇಸ್ ಮತ್ತು ಕೆಎಸ್ ಐ ಎಸ್ ಎಫ್ ಪ್ರಶಿಕ್ಷಣಾರ್ಥಿಗಳ ಮತ್ತು ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ಮೈಸೂರು ನಗರ ೪ನೇ ತಂಡದ ಮಹಿಳಾ ನಾಗರಿಕ ಪೊಲೀಸ್ ಕಾನ್ಸಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ನಡೆಯಿತು.

ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಮಾನಸಿಕ ಧೈರ್ಯ, ದೈಹಿಕ ಸದೃಢತೆ ಮತ್ತು ಪರಿಸ್ಥಿತಿಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಮನೋಬಲವಿರಬೇಕು. ಇಲಾಖೆಯ ಶಿಸ್ತು, ಸಂಯಮ, ಕಾನೂನುಗಳನ್ನು ಪಾಲಿಸಿ, ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕರ್ತವ್ಯಪ್ರಜ್ಞೆ ಮೆರೆಯಬೇಕು ಎಂದರು.

ಅತ್ಯುತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿಯನ್ನು ಗಂಗೇ ಹೆಚ್.ಎಸ್ ತಮ್ಮದಾಗಿಸಿಕೊಂಡರು. ಒಳಾಂಗಣ ಪ್ರಶಸ್ತಿಯಲ್ಲಿ ಪ್ರಥಮಸ್ಥಾನವನ್ನು ಗಂಗೇ ಹೆಚ್.ಎಸ್ ಮಹಿಳಾ ಪಿಸಿ ಉತ್ತರ ವಿಭಾಗ ಬೆಂಗಳೂರು, ದ್ವಿತೀಯ ಸ್ಥಾನವನ್ನು ಸೌಂದರ್ಯ ಎಸ್.ಎಂ ಮಹಿಳಾ ಪಿಸಿ ಬೆಂಗಳೂರು ನಗರ, ತೃತೀಯ ಸ್ಥಾನವನ್ನು ಶಿಲ್ಪಶ್ರೀ. ಕೆ ಮಹಿಳಾ ಪಿಸಿ ಮಂಡ್ಯ ಜಿಲ್ಲೆ, ಹೊರಾಂಗಣ ಪ್ರಶಸ್ತಿಯಲ್ಲಿ ಪ್ರಥಮ ಸ್ಥಾನವನ್ನು ವಿಜಯಕುಮಾರಿ ಮಹಿಳಾ ಪಿಸಿ ಬಳ್ಳಾರಿ ಜಿಲ್ಲೆ, ದ್ವಿತೀಯ ಸ್ಥಾನವನ್ನು ಪವಿತ್ರ ಮಹಿಳಾ ಪಿಸಿ ರಾಯಚೂರು ಜಿಲ್ಲೆ, ತೃತೀಯ ಸ್ಥಾನವನ್ನು ಚಾಂದಿನಿ ಹೆಚ್.ಆರ್ ಮಹಿಳಾ ಪಿಸಿ ಮಂಡ್ಯ ಜಿಲ್ಲೆ, ಫೈರಿಂಗ್ ನಲ್ಲಿ ಪ್ರಥಮಸ್ಥಾನವನ್ನು ಪೂಜಾ ಎಂ.ಎಸ್ ಮಹಿಳಾ ಪಿಸಿ ಬೆಂಗಳೂರು ನಗರ, ದ್ವಿತೀಯ ಸ್ಥಾನವನ್ನು ಶಿಲ್ಪ ಬಿ.ಎಂ ಮಹಿಳಾ ಪಿಸಿ ಬೆಂಗಳೂರು ನಗರ, ತೃತೀಯ ಸ್ಥಾನವನ್ನು ಶ್ವೇತ ಮಹಿಳಾ ಪಿಸಿ ಬೀದರ್ ಜಿಲ್ಲೆ ಇವರುಗಳು ಪಡೆದುಕೊಂಡರು.

೪ನೇ ತಂಡದ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳಲ್ಲಿ ಒಳಾಂಗಣ ಪ್ರಶಸ್ತಿಯಲ್ಲಿ ಪ್ರಥಮ ಸ್ಥಾನವನ್ನು ವೈದಿಕ ಕೆ.ಆರ್ ಬೆಂಗಳೂರು, ದ್ವಿತೀಯ ಸ್ಥಾನವನ್ನು ಶ್ವೇತಾ ಅಲಗೌಡ ಬೆಂಗಳೂರು, ತೃತೀಯ ಸ್ಥಾನವನ್ನು ರಂಜಿನಿ ಟಿ ಪಡೆದುಕೊಂಡರು. ಹೊರಾಂಗಣ ಪ್ರಶಸ್ತಿಯಲ್ಲಿ ಪ್ರಥಮ ಸ್ಥಾನವನ್ನು ಸುಗುಣ ಎನ್. ಆರ್ ಬೆಂಗಳೂರು, ದ್ವಿತೀಯ ಸ್ಥಾನವನ್ನು ಅಂಜುಂ ತೇರದಾಳ ಬೆಂಗಳೂರು, ಪವಿತ್ರ ಹೆಚ್.ಬಳ್ಳಾರಿ ತೃತೀಯ ಸ್ಥಾನವನ್ನು ಪಡೆದುಕೊಂಡರು.

ರೈಫಲ್ ಶೂಟಿಂಗ್ ಪ್ರಶಸ್ತಿಯಲ್ಲಿ ಪ್ರಥಮ ಸ್ಥಾನವನ್ನು ದಿವ್ಯ ಹೆಚ್.ವಿ.ಬೆಂಗಳೂರು, ದ್ವಿತೀಯ ಸ್ಥಾನವನ್ನು ಸಿಮ್ರನ್ .ಎ ಬೆಂಗಳೂರು, ತೃತೀಯ ಸ್ಥಾನವನ್ನು ಸಾವಿತ್ರಿ ಕೆಂಚರೆಡ್ಡಿ ಬೆಂಗಳೂರು ಪಡೆದುಕೊಂಡರು.

ಸರ್ವೋತ್ತಮ ಪ್ರಶಸ್ತಿಯನ್ನು ವೈದಿಕ ಕೆ.ಆರ್.ಬೆಂಗಳೂರು ತಮ್ಮದಾಗಿಸಿಕೊಂಡರು.
ಕಾರ್ಯಕ್ರಮದಲ್ಲಿ ದಕ್ಷಿಣವಲಯ ಪೊಲೀಸ್ ಮಹಾನಿರೀಕ್ಷಕ ಪ್ರವೀಣ್ ಮಧುಕರ್ ಪವಾರ್, ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಗೀತ ಎಂ.ಎಸ್, ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಮಾರುತಿ .ಎ. ಮತ್ತಿತರರು ಉಪಸ್ಥಿತರಿದ್ದರು.


Share