ಪ್ರಾಣಿಪಕ್ಷಿಗಳ ಪರಿಸರ ಉಳಿಸುವ ಸೇವಾಮನೋಭಾವ ಬೆಳೆಸಿಕೊಳ್ಳಿ

Share

*ಪ್ರಾಣಿಪಕ್ಷಿಗಳ ಪರಿಸರ ಉಳಿಸುವ ಸೇವಾಮನೋಭಾವ ಬೆಳಸಿಕೊಳ್ಳಬೇಕು: ಶಿವಕುಮಾರ್*

ಭೂಮಿಯ ಮೇಲೆ ಕಾಲಬದಲಾವಣೆ ಜಗದ ನಿಯಮ ಅದಕ್ಕೆ ಹೊಂದಿಕೊಂಡು‌‌ ಜೀವಿಸುವುದು ಪ್ರತಿಯೊಬ್ಬರ ಕರ್ತವ್ಯ, ಮನುಷ್ಯ ಪ್ರತಿಯೊಂದಕ್ಕೂ ಪರಿಸರದ ಮೇಲೆ ಅವಲಂಬಿತನಾಗುತ್ತಾನೆ ಆದರೆ ಪ್ರಾಣಿಪಕ್ಷಿಗಳ ಪರಿಸರ ಉಳಿಸುವ ಸೇವಾಮನೋಭಾವ ಬೆಳಸಿಕೊಳ್ಳಬೇಕು, ಹೆಚ್ಚು ಸಸಿಗಳನ್ನು ನೆಡಲು ಮುಂದಾದರೆ ಪ್ರಾಣಿಪಕ್ಷಿಗಳ ರಕ್ಷಣೆಯಾಗುತ್ತದೆ, ಭವಿಷ್ಯದ ಪರಿಸರ ಸಂರಕ್ಷಣೆಯ ಪರಿಕಲ್ಪನೆಯ ನಿಟ್ಟಿನಲ್ಲಿ ಮೈಸೂರು ಅರಸರು ಮೃಗಾಲಯ ಕುಕ್ಕರಹಳ್ಳಿ ಕೆರೆ ಕಾರಂಜಿ ಕೆರೆ ಮಾದರಿ ಬಡಾವಣೆಗಳ ಉದ್ಯಾನವನಗಳನ್ನು ನಿರ್ಮಿಸಿದ್ದಾರೆ ಅದನ್ನು ಉಳಿಸಿಕೊಂಡು ಹೋಗುವುದು ಮೈಸೂರಿಗರ ಕರ್ತವ್ಯ : ಮಹಾಪೌರರಾದ ಶಿವಕುಮಾರ್ ಹೇಳಿದರು

ಬೇಸಿಗೆಯ ಬಿಗಿಯ ತೀವ್ರತೆ ಹಿನ್ನೆಲೆಯಲ್ಲಿ ಪ್ರಾಣಿಪಕ್ಷಿಗಳಿಗೆ ನೀರಿನ ತೊಟ್ಟಿ ಹಾಗೂ ಆಹಾರದ ಬಟ್ಟಲು ಅಳವಡಿಸುವ ಮೂಲಕ ಹಾಗೂ ಜವಾಬ್ದಾರಿತ ಪ್ರಾಣಿ ಪಕ್ಷಿಪ್ರಿಯರಿಗೆ ಉಚಿತವಾಗಿ ನೀರಿನ ತೊಟ್ಟಿ ಕೊಡುವ ಮೂಲಕ ಮೂಕಸ್ಪಂದನಾ ಎಂಬ ಜಾಗೃತಿ ಅಭಿಯಾನ ಕೆ ಎಂ ಪಿ ಕೆ ಟ್ರಸ್ಟ್ ಹಾಗೂ ಪರಿಸರ ಸ್ನೇಹಿ ತಂಡ ಮತ್ತು ಜೀವದಾರ ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ನೀರಿನ ತೊಟ್ಟಿಗೆ ನೀರು ಹಾಕುವ ಮೂಲಕ ಉದ್ಘಾಟಿಸಲಾಯಿತು
ನಂತರ ಪಕ್ಷಿ ಪ್ರಾಣಿ ಪ್ರಿಯರಿಗೆ ಉಚಿತವಾಗಿ ನೀರಿನ ತೊಟ್ಟಿ ಹಾಗೂ ಆಹಾರದ ಬಟ್ಟಲು ವಿತರಿಸಿ ಮಾತನಾಡಿದ ಅವರು
ಭೂಮಿಯಲ್ಲಿ ಮನುಷ್ಯನಿಗೆ ಬದುಕಲಿರುವಷ್ಟೇ ಪ್ರಾಣಿಪಕ್ಷಿಗಳಿಗೂ ಅಷ್ಟೇ ಅವಕಾಶವಿರುತ್ತದೆ, ಬಿಸಿಲಿನ ಬೇಗೆಯ ತಾಪಮಾನದಿಂದಾಗಿ ನಮ್ಮ ಬಡಾವಣೆಯ ಸುತ್ತಮುತ್ತಲು ನಮ್ಮೊಂದಿಗೆ ವಾಸಿಸುವ ಪ್ರಾಣಿಪಕ್ಷಿಗಳಿಗೆ ನೀರು ಆಹಾರ ನೀಡಲು ಮುಂದಾಗಬೇಕಿದೆ, ಆದಷ್ಟು ನಮ್ಮ ಮನೆಗಳ ತಾರಸಿಯ ಮೇಲೆ ಮನೆಯವಮುಂಭಾಗ ನೀರು ಆಹಾರ ನೀಡಿದರೆ ಒಂದಷ್ಟು ಮೂಕ ಪ್ರಾಣಿಗಳಿಗೆ ಜೀವರಕ್ಷಣೆ ಮಾಡಿದಂತಾಗುತ್ತದೆ ಎಂದರು

ಮೂಡ ಮಾಜಿ ಅಧ್ಯಕ್ಷ ಹೆಚ್.ವಿ ರಾಜೀವ್ ರವರು ಮಾತನಾಡಿ ಸಮಾರು ವರ್ಷಗಳ ಹಿಂದೆ ಮೈಸೂರಿನ ಮನೆಗಳ ಮುಂದೆ ಹಸುಕರು ಮೂಕ‌ ಪ್ರಾಣಿ ಪಕ್ಷಿಗಳು ನೀರು ಕುಡಿಯಲು ಕಲ್ಲಿನ ನೀರಿನ ತೊಟ್ಟಿಯನ್ನು ನಿರ್ಮಿಸಲಾಗುತ್ತಿತ್ತು, ಪಶು ಪಕ್ಷಿಗಳು ಆನಂದದಿಂದ ನೀರು ಕುಡಿದು ತಾಣಿಸಿಕೊಳ್ಳುತ್ತಿದ್ದವು , ಆದರೆ ಈ ದಿನಗಳಲ್ಲಿ ಅವೆಲ್ಲವೂ ಕಣ್ಮರೆಯಾಗಿರುವುದು ವಿಷಾದನೀಯ,
ನಿಸರ್ಗದಲ್ಲಿ ಪಶು ಪಕ್ಷಿ ಜಲಚರಗಳ ಹಿರಿತನದಲ್ಲಿ ಮಾನವ ಇತ್ತೀಚಿನ ಸಂಕುಲ ತನ್ನ ಕ್ಷೇಮಕ್ಕಾಗಿ ಬಡಾವಣೆಗಳನ್ನು ನಿರ್ಮಿಸಿ ಕೊಂಡು ಕೆರೆ ಕಟ್ಟೆ ಗಳನ್ನು ಮುಚ್ಚಿ ವೃಕ್ಷಗಳನ್ನು ಕಡೆದು ಆ ಅಮಾಯಕ್ಕೆ ಮೂಕ ಜೀವಿಗಳಿಗೆ ನೀರು ನೆರಳಿಲ್ಲದಂತೆ ಮಾಡಿರುವುದು ದುರಂತ ಈ ನಿಟ್ಟಿನಲ್ಲಿ ಮಾನವೀಯತೆ ದೃಷ್ಟಿಕೋಣದಿಂದ ನಾಗರೀಕರು ಈ ಬೇಸಿಗೆಯ ಧಗೆಯನ್ನು ನೀಗಿಸಲು ಮೂಕಪ್ರಾಣಿಗಳಿಗೆ ನೀರು ಆಹಾರವನ್ನು ನೀಡಿ ಸಕಲ ಜೀವರಾಶಿಗಳನ್ನು ಕಾಪಾಡಲು ಮುಂದಾಗಬೇಕೆಂದು ಕರೆ ನೀಡಿದರು

ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ.‌ಪ್ರಕಾಶ್ ರವರು ಮಾತನಾಡಿ‌ ಇತಿಹಾಸ ಪುರಾಣಗಳಲ್ಲಿ ಒಂದೊಂದು ಹಬ್ಬಗಳಲ್ಲಿ ಮತ್ತು ದೇವತೆಗಳಿಗೂ ಸಹ ಪ್ರಾಣಿಪಕ್ಷಿಗಳನ್ನ ವಾಹನಗಳಾಗಿ ಪೂಜಿಸಲಾಗಿದೆ ಇದು ಪರಿಸರ ಸಂರಕ್ಷಣೆಯ ಸಂದೇಶವಗಿದೆ, ಸಾಕು ಪ್ರಾಣಿಗಳಿಗೆ ಪ್ರೀತಿ ಮಮತೆ ಆಶ್ರಯ ಕೊಟ್ಟಣ್ಡು ಮನುಷ್ಯರೊಂದಿಗೆ ಉತ್ತಮ ಒಡನಾಟದಲ್ಲಿರುತ್ತದೆ ಎಂದರು

ಇದೇ ಸಂದರ್ಭದಲ್ಲಿ ಮಹಾಪೌರರಾದ ಶಿವಕುಮಾರ್, ಮೂಡ ಮಾಜಿ ಅಧ್ಯಕ್ಷರಾದ ಎಚ್ ವಿ ರಾಜೀವ್, ಕೇಂದ್ರ ಪ್ರಾಣಿಗಳ ಕಲ್ಯಾಣ ಮಂಡಳಿಯ ರಾಜ್ಯ ಚೇರ್ಮನ್ ಮಿತ್ತಲ್, ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಹೇಮ ನಂದೀಶ್,ಆಯುರ್ ಪೋರ್ಟ್ ವೆಲ್ ನೈಸ್ ವ್ಯವಸ್ಥಾಪಕ ನಿರ್ದೇಶಕ ಭರತ್ ರಾಜ್,
ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕಡಕೋಳ ಜಗದೀಶ್, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್, ಪರಿಸರ ಸ್ನೇಹಿ ತಂಡದ ಅಧ್ಯಕ್ಷ ಲೋಹಿತ್,
ಸವಿತಾ ಘಾಟ್ಕೆ , ಅಜಯ್ ಶಾಸ್ತ್ರಿ, ರವಿಶಂಕರ್, ಜಿ ರಾಘವೇಂದ್ರ, ರಾಕೇಶ್, ಸುಚೇಂದ್ರ ,ಚಕ್ರಪಾಣಿ, ಎಸ್ ಎನ್ ರಾಜೇಶ್, ಮೋಹನ್ ಕುಮಾರ್ ಗೌಡ,ಚ ಎಸ್ ಅರುಣ್, ರಾಜಗೋಪಾಲ್, , ಸುರೇಶ್ ಗೋಲ್ಡ್, ಮೈ ಲಾ ವಿಜಯ್ ಕುಮಾರ್, ಆನಂದ್, ಲಿಂಗರಾಜು, ಜೀವನ್, ವಾಸುದೇವಮೂರ್ತಿ,ಹಾಗೂ ಇನ್ನಿತರರು ಭಾಗಿಯಾಗಿದ್ದರು


Share