ಬಾಕ್ಸಿಂಗ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಸ್ಪರ್ಧಿಸುತ್ತಿರುವ ಕರ್ನಾಟಕದ ಸ್ಪರ್ಧಿಗಳು

Share

*ಥೈಲ್ಯಾಂಡ್ ನಲ್ಲಿ ನಡೆಯುವ ಮುವಾತಾಯ್ ಬಾಕ್ಸಿಂಗ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಸ್ಪರ್ಧಿಸುತ್ತಿರುವ ಕರ್ನಾಟಕದ ಸ್ಪರ್ಧಿಗಳು*

ಥೈಲ್ಯಾಂಡ್ ನಲ್ಲಿ ,
ಮಾರ್ಚ್ 12 ರಿಂದ 20 ರ ವರೆಗೂ ನಡೆಯುವ ಮುವಾತಾಯ್ ಬಾಕ್ಸಿಂಗ್
ವಿಶ್ವ ಚಾಂಪಿಯನ್ ಶಿಪ್ ನಲ್ಲಿ
ಭಾರತದಿಂದ ೮ ಜನ ಸ್ಪರ್ಧಿಗಳು ಭಾಗವಹಿಸುತ್ತಿದ್ದು
ಬೆಂಗಳೂರಿನಲ್ಲಿ ಜನವರಿ ೧೯ ರಂದು ನಡೆದ ಸ್ಪರ್ಧೆಯಲ್ಲಿ ೮ ಜನರು ಆಯ್ಕೆ ಯಾಗಿದ್ದು,
ಜೆನೆಸಸ್ ಮಾರ್ಷಲ್ ಆರ್ಟ್ಸ್ ನ ಸಮಿತ್ ಅವರ ಪ್ರೋತ್ಸಾಹದೊಂದಿಗೆ ನ್ಯಾಷನಲ್ ಟ್ರೈನಿಂಗ್ ಕ್ಯಾಂಪ್ ನಲ್ಲಿ ಹೇಮಂತ್ ಕುಮಾರ್ ಮತ್ತು ಪವನ್ ಕುಮಾರ್ ತರಬೇತುದಾರರ ತರಬೇತಿ ‌ಯೊಂದಿಗೆ ಕರ್ನಾಟಕ ಮತ್ತು ಅಸ್ಸಾಂ ನ ಬಾಕ್ಸಿಂಗ್‌‌ ಸ್ಪರ್ದಿಗಳು ಮೈಸೂರಿನ ವಿಜಯನಗರದ ಎರಡನೇ ಹಂತದಲ್ಲಿರುವ ಜೆನೆಸೆಸ್ ಮಾರ್ಷಲ್ ಆರ್ಟ್ಸ್ ನಲ್ಲಿ ಸಜ್ಜುಗೊಳಿಸುತ್ತಿದ್ದಾರೆ

ದಿನದ ಆರು ಗಂಟೆಗಳ ಕಾಲ ಟ್ರೈನಿಂಗ್ ನೀಡಲಾಗುತ್ತಿದೆ,
ಏಳು ಜನ ಪುರುಷ ಒಬ್ಬ ಮಹಿಳೆ ಸ್ಪರ್ದಿ ಬಾಕ್ಸಿಂಗ್‌‌ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ ..

ಸುಮಾರು 70 ದೇಶಗಳಿಂದ 600 ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಳ್ಳುತ್ತಿದ್ದು ಭಾರತದಿಂದ 8 ಸ್ಪರ್ಧಿಗಳು ಮೈಸೂರಿನಲ್ಲಿ ತರಬೇತಿ ಪಡೆದು ಭಾರತವನ್ನು ಪ್ರತಿನಿಧಿಸುತ್ತಿರುವುದು, ಮತ್ತು ಅವರಿಗೆ ಪ್ರೋತ್ಸಾಹಿಸುತ್ತಿರುವ ಸಮಿತ್ ಬಟ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ..


Share