ಬಾರತೀಯರ ನೆಚ್ಚಿನ ಖಾದ್ಯ ಪಾನಿ ಪುರಿ ಸೇವಿಸಿದ ಜಪಾನ್ ಪ್ರಧಾನಿ : ವೀಕ್ಷಿಸಿ

Share

 

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಹಾಗೂ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಇಂದು ದೆಹಲಿಯ ಬುದ್ಧ ಜಯಂತಿ ಪಾರ್ಕ್‌ನಲ್ಲಿರುವ ಬಾಲ ಬೋಧಿ ವೃಕ್ಷಕ್ಕೆ ಭೇಟಿ ನೀಡಿ, ಅಲ್ಲಿ ಇಬ್ಬರೂ ವಿಭಿನ್ನ ಆಹಾರ ಪದಾರ್ಥಗಳನ್ನು ಸೇವಿಸಿದ್ದಾರೆ.
ಪ್ರಧಾನಿ ಮೋದಿ ಮತ್ತು ಫ್ಯೂಮಿಯೊ ಕಿಶಿದಾ ಅವರು ವಿವಿಧ ಭಾರತೀಯ ಭಕ್ಷ್ಯಗಳನ್ನು ಸೇವಿಸುತ್ತಿರುವ ವೀಡಿಯೊವನ್ನು ಸುದ್ದಿ ಸಂಸ್ಥೆ ANI ನಲ್ಲಿ ಹಂಚಿಕೊಳ್ಳಲಾಗಿದೆ. ಇಬ್ಬರು ನಾಯಕರು ಮಾತನಾಡುತ್ತಾ ಪಾರ್ಕ್‌ನಲ್ಲಿ ನಡೆಯುತ್ತಾ, ‘ಲಸ್ಸಿ’, ‘ಗೋಲ್ಗಪ್ಪೆ’ ( ಪಾನಿ ಪುರಿ ) ಮತ್ತು ‘ಆಮ್-ಪನ್ನಾ’ ಆಸ್ವಾದಿಸುತ್ತಿರುವುದನ್ನು ಕಾಣಬಹುದು. ಈ ವರ್ಷದ ಮೇನಲ್ಲಿ ಹಿರೋಷಿಮಾದಲ್ಲಿ ನಡೆಯಲಿರುವ ಜಿ7 ನಾಯಕರ ಸಭೆಗೆ ಕಿಶಿದಾ ಪ್ರಧಾನಿ ಮೋದಿಯವರನ್ನು ಆಹ್ವಾನಿಸಿದ್ದಾರೆ.


Share