ಕರ್ನಾಟಕ ಸರ್ಕಾರ ಚುಕ್ಕಾಣಿ ಹಿಡಿದು ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ರೈತ ನಾಯಕ
ಬಿಎಸ್ ಯಡಿಯೂರಪ್ಪ ಅವರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ
ಬಲ್ಲಾಳ್ ವೃತ್ತದಲ್ಲಿ
ಪೌರ ಕಾರ್ಮಿಕರಿಗೆ ರೋಗ ನಿರೋಧಕ ಶಕ್ತಿ ವೃದ್ಧಿಗಾಗಿ ಆಯುರ್ವೇದ ಔಷಧಿಗಳು ಹಾಗೂ ಮಾಸ್ಕ್ ವಿತರಣೆ ಕಾರ್ಯಕ್ರಮ ಆಯೋಜಿಸಲಾಯಿತು
ನಂತರ ಮಾತನಾಡಿದ ಬಿಜೆಪಿ ಮಹಿಳಾ ಮುಖಂಡರಾದ ಲಕ್ಷ್ಮೀದೇವಿ
ಯಡಿಯೂರಪ್ಪನವರ ಸಾರ್ಥಕ ಆಡಳಿತ ಯಡಿಯೂರಪ್ಪ ಸರ್ಕಾರವು ಒಂದು ವರ್ಷ ಪೂರೈಸಿದೆ ಕೂರೂನಾ ಬಿಕ್ಕಟ್ಟಿನ ಹೊರತಾಗಿಯೂ ಸರ್ಕಾರವು ಉತ್ತಮ ಆಡಳಿತವನ್ನೇ ನೀಡಿರುವುದು ಶ್ಲಾಘನೀಯ .ಎಲ್ಲಕ್ಕಿಂತ ಮುಖ್ಯವಾಗಿ ಕೊರೂನಾ ವೈರಸ್ ಬಿಕ್ಕಟ್ಟು ನಿಭಾಯಿಸುವಲ್ಲಿ ಯಡಿಯೂರಪ್ಪ ಸರ್ಕಾರವೂ ಸಾಕಷ್ಟು ಪ್ರಬುದ್ಧತೆಯನ್ನು ತೋರಿದೆ ರಾಜ್ಯದಲ್ಲಿ ಕೋರೋನಾ ವೈರಸ್ ನ ಸೋಂಕು ಹೆಚ್ಚುತ್ತಿರುವುದು ನಿಜವಾದರೂ ಅದಕ್ಕೆ ಜನರು ಕಾರಣರು ಹೊರತು ಸರ್ಕಾರವಲ್ಲ. ಸರ್ಕಾರ ಅದರಿಂದಾಗುವ ಕಾರ್ಯ ಮಾಡಿದೆ .ಆದರೆ ಜನರೇ ಬೇಜವಾಬ್ದಾರಿತನದಿಂದ ವರ್ತಿಸಿದ್ದಾರೆ ಕೂರೂನಾದಿಂದಾಗಿ ಸಂಕಷ್ಟಕ್ಕೆ ಸಿಲುಕಿದ ವಿವಿಧ ವರ್ಗಗಳಿಗೆ ಉತ್ತೇಜನಕಾರಿ ಉಪಕ್ರಮಗಳನ್ನು ಪ್ರಕಟಿಸಿರುವುದು ಸ್ಮರಣೀಯ .
ಯಡಿಯೂರಪ್ಪನವರು ಅಧಿಕಾರ ವಹಿಸಿಕೊಂಡಾಗ ಇಡೀ ರಾಜ್ಯವೂ ಅತಿವೃಷ್ಟಿಯಿಂದ ಮತ್ತು ಭೀಕರ ಪ್ರವಾಹದಿಂದ ನಲುಗುತ್ತಿತ್ತು .
ಆ ಸಂದರ್ಭದಲ್ಲಿ ಯಡಿಯೂರಪ್ಪನವರು ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಯನ್ನು ಯಾರೂ ಮರೆಯಲಾರರು .ಬಹುತೇಕವಾಗಿ ಏಕಾಂಗಿಯಾಗಿಯೇ ಅವರ ಪರಿಸ್ಥಿತಿ ನಿಭಾಯಿಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ನೆರವಾದವರನ್ನು ಯಡಿಯೂರಪ್ಪನವರು ಮರೆಯಲಿಲ್ಲ. ಬೇರೆ ಪಕ್ಷಗಳಿಂದ ಬಂದು ಪಕ್ಷವನ್ನು ಸೇರಿಕೊಂಡ ಎಲ್ಲ ಮುಖಂಡರಿಗೂ ನ್ಯಾಯ ಒದಗಿಸುವಲ್ಲಿ ಅವರು ಪ್ರಾಮಾಣಿಕತೆಯಿಂದ ನಡೆದುಕೊಂಡಿದ್ದಾರೆ ಒಬ್ಬ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಪ್ರಾಮಾಣಿಕತೆಯನ್ನು ಮೆರೆದಿರುವುದು ಉಲ್ಲೇಖನೀಯ ಅಂಶವೇ ಆಗಿದೆ.ಜೆಡಿಎಸ್- ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರದ ಕಾಲದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಂತೆ ಯಡಿಯೂರಪ್ಪನವರು ‘ಮನಬಂದಂತೆ’ ಮಾತನಾಡಲಿಲ್ಲ .
ಅತಿರೇಕದಿಂದ ವರ್ತಿಸಲೂ ಇಲ್ಲ.ಅಧಿಕಾರದುದ್ದಕ್ಕೂ ಬಹಳ
ಸಂಯಮದಿಂದ ನಡೆದುಕೊಂಡರು. ಅವರ ಆಡಳಿತವೂ ಇನ್ನೂ ಸುಗಮವಾಗಿ ಸಾಗಲಿ ಎಂದು ಹಾರೈಸುತ್ತೇವೆ ಹಾಗೆಯೇ ಈ ಮಹಾಮಾರಿ ಕೋರೋನಾ ಬೇಗ ಈ ದೇಶ ಬಿಟ್ಟು ತೊಲಗಲಿ ಎಂದು ಭಗವಂತನಲ್ಲಿ ಬೇಡಿಕೊಳ್ಳುತ್ತೇನೆ ಎಂದು ಹೇಳಿದರು
ನಂತರ ಮಾತನಾಡಿದ ಬಿಜೆಪಿ ಮುಖಂಡ ಕೇಬಲ್ ಮಹೇಶ್ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಕೆಲವೇ ತಿಂಗಳಗಳಲ್ಲಿ ಕೋರೂನಾ ಸೋಂಕು ಶುರುವಾಯಿತು.ಈಗ ಇಡೀ ಸರ್ಕಾರ ಈ ಬಗ್ಗೆ ಯೋಚಿಸಬೇಕಾಗಿ ಬಂದಿದೆ. ಆರೋಗ್ಯ ಸರಿ ಇರುವಂತೆ. ರೋಗ ಹೆಚ್ಚು ಹರಡದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಇದನ್ನು ಹೊರತುಪಡಿಸಿ ಬೇರೆ ಬದಲಾವಣೆ ಗಳಾಗಲು ಅವಕಾಶವೇ ಸಿಗಲಿಲ್ಲ.ಸದ್ಯ ಸರ್ಕಾರ ಕೂರೂನಾ ಸೋಂಕಿನ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದೆ ಜನರಲ್ಲಿ ಜಾಗೃತಿ ಮೂಡಿಸಲು ಉತ್ತಮ ಗುಣಮಟ್ಟದ ಸೇವೆ ಸಲ್ಲಿಸಲು ಶತಪ್ರಯತ್ನ ನಡೆಸುತ್ತಿದೆ.ಒಂದು ವೇಳೆ ಈ ಯುದ್ಧದಲ್ಲಿ ಗೆದ್ದರೆ ಎಲ್ಲವನ್ನೂ ಗೆದ್ದಂತೆ ಕೂರೋನಾ ಸೋಂಕು ಇಳಿಮುಖವಾಗುವಂತೆ ಮಾಡಿ ಜನರ ಆತಂಕ ಕಡಿಮೆ ಮಾಡಿ ವ್ಯವಸ್ಥಿತವಾಗಿ ಕೆಲಸ ಮಾಡಿದ್ದಾರೆ ಅಷ್ಟೇ ಸಾಕು ಎಂದು ಹೇಳಿದರು
ಇದೇ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮುಖಂಡರಾದ ಲಕ್ಷ್ಮಿದೇವಿ ,ಕೇಬಲ್ ಮಹೇಶ್ ,ಮಲ್ಲಿಕಾರ್ಜುನ್, ಜೀವಾಧಾರ ಗಿರೀಶ್ ,ವಿಕ್ರಂ ಅಯ್ಯಂಗಾರ್, ಲೋಹಿತ್ ,ಹಾಗೂ ಇನ್ನಿತರರು ಹಾಜರಿದ್ದರು
Home Local Express ಬಿಎಸ್ ಯಡಿಯೂರಪ್ಪ ಅವರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಪೌರಕಾರ್ಮಿಕರಿಗೆ ಔಷಧಿ...