ಬಿಜೆಪಿ- ಉತ್ತುಂಗಕ್ಕೇರಿದ ಚುನಾವಣಾ ಕಿಚ್ಚು : ಸುದೀಪ್ ಪ್ರಚಾರ

Share

ಕಿಚ್ಚ ಸುದೀಪ್ ಅವರು ಮುಂಬರುವ ವಿಧಾನ ಸಭಾ ಚುನಾವಣೆಗೆ ಮುಖ್ಯಮಂತ್ರಿಗಳ ಪರ ಪ್ರಚಾರ ಮಾಡಿ ಕರ್ನಾಟಕದಲ್ಲಿ ಬಿಜೆಪಿಯ ದೀಪ ಬೆಳಗಿಸಲು ನಿರ್ದರಿಸಿದ್ದಾರೆ .
ಮೊದಲಿಗೆ ಮುಖ್ಯಮಂತ್ರಿಗಳು ಮಾತನಾಡಿ ಮೊದಲಿಗೆ ಸುದೀಪ್ ರವರು ತಮ್ಮ ಮನದಾಳದ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ತಮ್ಮ ಕಷ್ಟ ದಿನದಲ್ಲಿ ತಮ್ಮೊಂದಿಗೆ ನಿಂತ ವ್ಯಕ್ತಿಯಾದ ಮುಖ್ಯಮಂತ್ರಿ ಬೊಮ್ಮಾಯಿಯವರೊಂದಿಗೆ ತಾವು ನಿಲ್ಲುವುದಾಗಿ ತಿಳಿಸಿದರು. ಮುಖ್ಯಮಂತ್ರಿಯ ವ್ಯಕ್ತಿತ್ವಕ್ಕೆ ತಲೆಬಾಗಿ ತಾವು ಅವರ ಪರ ನಿಲ್ಲುವುದಾಗಿ ಸ್ಪಷ್ಟಪಡಿಸಿದ್ದಾರೆ.

ಕನ್ನಡದ ಮೇರು ನಟ ಕಿಚ್ಚ ಸುದೀಪ್ ಅವರು ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರ ಬಗ್ಗೆ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿದ್ದ ವಿಷಯದ ಬಗ್ಗೆ ಸುದೀಪ್ ಅವರು ಇಂದು ಪತ್ರಿಕಾ ಗೋಷ್ಠಿ ಕರೆದು ಎಲ್ಲರಿಗೂ ತಮ್ಮ ನಿರ್ಧಾರವನ್ನು ಬಹಿರಂಗಗೊಳಿಸಿದ್ದಾರೆ. ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬುದನ್ನು ಖಚಿತ ಪಡಿಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರೊಂದಿಗೆ ಸುದ್ದಿ ಗೋಷ್ಠಿ ನಡೆಸಿದರು ಕಿಚ್ಚ ಸುದೀಪ್ ಅವರು. ವೇದಿಕೆಯಲ್ಲಿ ಸಚಿವ ಆರ್ ಅಶೋಕ್ ಹಾಗೂ ಸಚಿವ ಸುದಾಕರ್ ರವರು ಉಪಸ್ಥಿತರಿದ್ದರು .


Share