ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರದ ಆರೋಪ: ಬಿಜೆಪಿ ಶಾಸಕರಿಂದಲೇ ಹೈಕಮಾಂಡ್ ಗೆ ಪತ್ರ

Share

ಮೈಸೂರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ HG ಬಿ.ವೈ.ವಿಜಯೇಂದ್ರ ವಿರುದ್ಧ ಭ್ರಷ್ಟಾಚಾರ ಆರೋಪ ಸಂಬಂಧ ಬಿಜೆಪಿ ಶಾಸಕರು ಹೈಕಮಾಂಡ್ ಗೆ ಪತ್ರ ಬರೆದಿರುವುದನ್ನು ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ಹೊತ್ತಾರ ಲಕ್ಷ್ಮಣ್ ಅವರು ಬಿಡುಗಡೆ ಮಾಡಿದರು. ಅವರು ಇಂದು ಬೆಳಗ್ಗೆ ಇಂದಿರಾ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ಬಿ.ವೈ ವಿಜಯೇಂದ್ರ ಟ್ರಾನ್ಸ್ ಫರ್ ದಂಧೆಯಲ್ಲಿ ಕೋಟಿಗಟ್ಟಲೇ ವಸೂಲಿ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪಿಸಿದರು.
ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿಂದು ಬಿಜೆಪಿಯ ಕೆಲ ಶಾಸಕರು ಬಿಜೆಪಿ ಹೈಕಮಾಂಡಿಗೆ ಮತ್ಚತು ಮಾಧ್ಯಮಗಳಿಗೆಂದು ಬರೆದಿರುವ ಪತ್ರವನ್ನು ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು. ಬಿಜೆಪಿ ಸರ್ಕಾರ ಬಿ.ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿಲ್ಲ. ಬದಲಿಗೆ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರು ಸೂಪರ್ ಸಿಎಂ ಆಗಿ ರಾಜ್ಯವನ್ನು ಲೂಟಿ ಮಾಡಿ ಸುಮಾರು 5ಸಾವಿರ ಕೋಟಿಗಳಷ್ಟು ಹಣವನ್ನು ಸಂಗ್ರಹಿಸಿದ್ದಾರೆಂದು ಆರೋಪಿಸಿದ್ದಾರೆಂದರು.
ವಿಜಯೇಂದ್ರ 31 ಆಪ್ತರಕೂಟವನ್ನು ರಚಿಸಿಕೊಂಡು ಒಂದೊಂದು ಇಲಾಖೆಗೆ ಒಬ್ಬೊಬ್ಬರನ್ನು ಬಿಟ್ಟು ದಂಧೆ ಮಾಡುತ್ತಿದ್ದಾರೆಂಬ ಗಂಭೀರವಾದ ಆರೋಪ ಮಾಡಿರುತ್ತಾರೆ. ಗುತ್ತಿಗೆದಾರರು, ದಳ್ಳಾಳಿಗಳು, ಮಧ್ಯವರ್ತಿಗಳು ಹಣ ಕೊಟ್ಟು ಕೆಲಸ ಮಾಡಿಕೊಳ್ಳಲು ಇಚ್ಛಿಸುವವರು ಈ ಕೂಟವನ್ನು ಸಂಪರ್ಕಿಸಿ ಕಮಿಷನ್ ಆಧಾರದ ಮೇಲೆ ಕೆಲಸ ಮಾಡಿಸಿಕೊಳ್ಳುತ್ತಾರೆ. ವಿಜಯೇಂದ್ರರ ಒಪ್ಪಿಗೆ ಇಲ್ಲದೆ ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಏನೂ ಕೆಲಸ ಆಗುವುದಿಲ್ಲ ಎಂಬುದೇ ಬಿಜೆಪಿ ಶಾಸಕರುಗಳ ಅಳಲು. ಸ್ವತಃ ಮುಖ್ಯಮಂತ್ರಿಗಳೇ ಅಸಹಾಯಕತೆಯನ್ನು ತೋರಿಸುತ್ತಿದ್ದಾರೆ ಎಂದು ಬಿಜೆಪಿ ಶಾಸಕರೇ ಹೇಳುತ್ತಿದ್ದಾರೆ ಎಂದರು.
ಭಾರತೀಯ ಜನತಾ ಪಕ್ಷದ ಶಾಸಕರುಗಳಾದ ನಮಗೆ ಸಿಎಂ ಪುತ್ರನ ಮುಂದೆ ಅಂಗಲಾಚುವುದು ನಾಚಿಗೇಡಿನ ಸಂಗತಿಯಾಗಿದೆ. ಪಕ್ಷಕ್ಕೆ ಮತ್ತು ನಾಡಿನ ಜನರಿಗೆ ಮಾಡುತ್ತಿರುವ ದ್ರೋಹ ಮತ್ತು ವಂಚನೆ ಎಂದು ಹೇಳಿದ್ದಾರೆ. ಯಡಿಯೂರಪ್ಪನವರಿಗೆ ಚೆಕ್ ಮೂಲಕ 20ಲಕ್ಷ ಲಂಚವನ್ನು ಕೊಡಿಸಿ 2011ರಲ್ಲಿ ಇವರನ್ನು ಜೈಲಿಗೆ ಕಳುಹಿಸಿದ್ದೆ ಇದೇ ವಿಜಯೇಂದ್ರ. ಈ ಅವಸ್ಥೆಯನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಕರ್ನಾಟಕದ ಎಲ್ಲಾ ಚುನಾವಣೆಗಳನ್ನು ನಾವು ಸೋಲುತ್ತೇವೆ ಎಂದು ಬಿಜೆಪಿ ಶಾಸಕರೇ ಬರೆದಿದ್ದಾರೆ. ಈ ಪತ್ರವನ್ನು ಕಾಂಗ್ರೆಸ್ ಬರೆದಿಲ್ಲ. ಸುಪ್ರೀಂ ಕೋರ್ಟ್ ಈ ಬಗ್ಗೆ ಸ್ಪಷ್ಟವಾಗಿ ಹೇಳಿದೆ. ಯಾವುದೇ ಪತ್ರ ಇದ್ದರೂ ಅದರ ಬಗ್ಗೆ ತನಿಖೆ ಮಾಡಬೇಕು ಎಂದಿದೆ. ವಿಜಯೇಂದ್ರ ಬೇನಾಮಿ ಆಸ್ತಿಗಳನ್ನು ಮಾಡಿದ್ದಾರೆ. ನರೇಂದ್ರ ಮೋದಿ ಹಂತದಿಂದಲೇ ಭ್ರಷ್ಟಾಚಾರ ಶುರುವಾಗಿದೆ ಎಂದು ಆರೋಪಿಸಿದರು.
ಹೈಕಮಾಂಡ್ಗೆ ಕಳುಹಿಸಿದ ಪತ್ರದಲ್ಲಿ ಏಳು ಜನ ಶಾಸಕರು ಸಹಿ ಹಾಕಿದ್ದಾರೆ. 32 ಜನರ ಕೂಟವನ್ನು ವಿಜಯೇಂದ್ರ ಮಾಡಿಕೊಂಡಿದ್ದಾರೆ. ವಿಜಯೇಂದ್ರ ಪರ್ಯಾಯ ಸರಕಾರ ನಡೆಸುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ. ಪತ್ರದಲ್ಲಿ ಏಳು ಜನ ಶಾಸಕರ ಸಹಿ ಇದೆ. ಆದರೆ ಅವರುಗಳ ಯಾರು ಎಂಬುದು ಗೊತ್ತಿಲ್ಲ. ಈ ಬಗ್ಗೆ ತಕ್ಷಣ ತನಿಖೆಯಾಗಬೇಕು ಹತ್ತು ದಿನಗಳ ಗಡುವು ಕೊಡುತ್ತಿದ್ದೇವೆ. ಸಿಬಿಐ ತನಿಖೆ ಮಾಡಿಸಬೇಕು ಇಲ್ಲ ಕಾನ್ಸ್ಟಿಟ್ಯೂಟಲ್ ವಿಚಾರಣೆ ಮಾಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಹೊಂದಾಣಿಕೆ ರಾಜಕಾರಣ ಮಾಡಿರುವ ಇತಿಹಾಸ ಇಲ್ಲ. ಮುಖ್ಯಮಂತ್ರಿಗಳು ಸರ್ಕಾರದಲ್ಲಿ ದುಡ್ಡಿಲ್ಲ ಅಂತ ಆರೋಪ ಮಾಡ್ತಾರೆ, ದುಡ್ಡು ನಿಮ್ಮ ಮಗನ ಬಳಿಯೇ ಇದೆ ಅದನ್ನು ಬಳಕೆ ಮಾಡಿ. ಇವರು ನೇಮಕ ಮಾಡಿರುವ ಇಲಾಖೆ ಬಗ್ಗೆ ನಾವು ಮಾಹಿತಿ ಸಂಗ್ರಹಿಸಿದ್ದೇವೆ. ಈ ಬಗ್ಗೆ ಸೆಪ್ಟೆಂಬರ್ ನಲ್ಲಿ ಮತ್ತಷ್ಟು ವಿಚಾರಗಳನ್ನು ಆಡಿಯೋ ವಿಡಿಯೋ ಸಮೇತ ದೆಹಲಿಯಲ್ಲಿ ಬಿಡುಗಡೆ ಮಾಡುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿಜೆ.ವಿಜಯ್ ಕುಮಾರ್, ಮತ್ತಿತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು


Share