ಬಿಜೆಪಿ ಕುತಂತ್ರ ಎದುರಿಸಲು ನಾಮಪತ್ರ ಸಲ್ಲಿಕೆ ಡಿಕೆ ಸು

Share

ಭಾರತೀಯ ಜನತಾ ಪಕ್ಷವು ಅಧಿಕಾರ, ಅಧಿಕಾರಿಗಳನ್ನು ಬಳಸಿಕೊಂಡು ಡಿಕೆ ಶಿವಕುಮಾರ್ ರವರ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಿರುವುದರಿಂದ ತಾವು ಕನಕಪುರದಲ್ಲಿ ತಮ್ಮ ಅಣ್ಣನ ಕ್ಷೇತ್ರದಲ್ಲೇ ನಾಮಪತ್ರ ಸಲ್ಲಿಸಿರುವುದಾಗಿ ಸಂಸದ ಡಿಕೆ ಸುರೇಶ್ ಇದೀಗ ತಾನೇ ತಿಳಿಸಿದ್ದಾರೆ. ಎಐಸಿಸಿ ನಿರ್ದೇಶನದ ಮೇಲೆ ಕೆಲವು ರೀತಿಯ ಷಡ್ಯಂತ್ರಗಳು ತಮ್ಮ ಸೋದರನ ವಿರುದ್ಧ ನಡೆಯುವ ಸಾಧ್ಯತೆ ಇರುವುದರಿಂದ ಮುಂಜಾಗ್ರತವಾಗಿ ನಾಮಪತ್ರ ಸಲ್ಲಿಸಲು ಸೂಚಿಸಿದ್ದರಿಂದ ತಾವು ಈ ರೀತಿ ಬಿಜೆ ಮಾಡಿರುವುದಾಗಿ ಸುರೇಶ್ ತಿಳಿಸಿದ್ದಾರೆ. ಇಂದು ನಾಮಪತ್ರ ಸಲ್ಲಿಸಲು ಮೂರು ಗಂಟೆವರೆಗೆ ಸಮಯವಿದ್ದ ಸಮಯದಲ್ಲೇ ಸುಮಾರು 2:30ರ ವೇಳೆಯಲ್ಲಿ ಸುರೇಶ್ ರವರು ಕನಕಪುರದಿಂದ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ, ತಾಂತ್ರಿಕವಾಗಿ ಇದು ಸಾಧ್ಯವಿಲ್ಲದಿದ್ದರೂ ಒಂದು ವೇಳೆ ಇಬ್ಬರಲ್ಲಿ ಒಬ್ಬರು ನಾಮಪತ್ರ ವಾಪಸ್ಸು ಪಡೆಯದಿದ್ದರೆ ಒಬ್ಬರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕಾಗುತ್ತದೆ.


Share