ಬಿಜೆಪಿ ಮೂರನೇ ಪಟ್ಟಿ ಬಿಡುಗಡೆ- ಕೆ.ಅರ್ ವತ್ಸ ಅಭ್ಯರ್ಥಿ

Share

ಕರ್ನಾಟಕ ರಾಜ್ಯದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಭಾರತೀಯ ಜನತಾ ಪಕ್ಷ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಬಿಜೆಪಿ ಬಿಡುಗಡೆ ಮಾಡಿರುವ ಮೂರನೇ ಪಟ್ಟಿಯಲ್ಲಿ ಕೆ ಆರ್ ಕೆ ಮೈಸೂರಿನ ಕೆಆರ್ ಕ್ಷೇತ್ರ ದಿಂದ ಸ್ಪರ್ಧಿಸಲು ಮೈಸೂರು ನಗರ ಜಿಲ್ಲಾಧ್ಯಕ್ಷ ಶ್ರೀವತ್ಸಾರ್ ಅವರಿಗೆ ಚುನಾವಣಾ ಕಣಕ್ಕೆ ಇಳಿಸಿದೆ.

ಕೆಆರ್ ಕ್ಷೇತ್ರದ ಹಾಲಿ ಶಾಸಕ ಮಾಜಿ ಸಚಿವ ರಾಮ್ದಾಸ್ ರವರಿಗೆ ಈ ಬಾರಿ ಚುನಾವಣಾ ಸ್ಪರ್ಧಿಸದಂತೆ ಬಿಜೆಪಿ ನಿರ್ಧರಿಸಿ ಈ ವರ್ಷ ಅವರಿಗೆ ಟಿಕೆಟ್ ನೀಡಿಲ್ಲ.

ಕೆಆರ್ ಕ್ಷೇತ್ರದಿಂದ ಹಾಲಿ ಶಾಸಕ ರಾಮದಾಸ್ ರವರಿಗೆ ಟಿಕೆಟ್ ನೀಡಬಾರದು ಎಂದು ಬ್ರಾಹ್ಮಣ ಸಮುದಾಯದವರು ಹಾಗೂ ವೀರಶೈವ ಲಿಂಗಾಯತರ ಸಮುದಾಯದವರು ಬಿಜೆಪಿ ಹೈಕಮಾಂಡಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.


Share