ಪಾರ್ಲೆ ಬಿಸ್ಕತ್ ಕಂಪನಿ ವತಿಯಿಂದ 53 ಸಾವಿರ ಬಿಸ್ಕತ್ ಪೊಟ್ಟಣಗಳ ನೀಡಿಕೆ
ಹುಬ್ಬಳ್ಳಿ(ಕರ್ನಾಟಕ ವಾರ್ತೆ).ಮೇ.17: ಕೊರೋನಾ ಸಂದರ್ಭದ ಸಹಾಯಾರ್ಥವಾಗಿ ಹುಬ್ಬಳ್ಳಿ ಪಾರ್ಲೆ ಬಿಸ್ಕತ್ ಕಂಪನಿ ವತಿಯಿಂದ ಧಾರವಾಡ ಜಿಲ್ಲಾಡಳಿತಕ್ಕೆ 53 ಸಾವಿರ ಬಿಸ್ಕತ್ ಪೊಟ್ಟಣಗಳ ನೀಡಲಾಗುತ್ತಿದೆ.
ಹುಬ್ಬಳ್ಳಿ ಗೋಕುಲ ಕೈಗಾರಿಕಾ ವಸಹಾತುವಿನಲ್ಲಿರುವ ತಯಾರಿಕಾ ಘಟಕದಲ್ಲಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರಿಗೆ ಸಾಂಕೇತಿಕವಾಗಿ ಕಂಪನಿ ವತಿಯಿಂದ ಬಿಸ್ಕತ್ ಪೊಟ್ಟಣ ನೀಡಲಾಯಿತು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ್ ಕಲ್ಬುರ್ಗಿ, ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್, ಕಂಪನಿಯ ಅಧ್ಯಕ್ಷ ಮಹೇಂದ್ರ ಟಕ್ಕರ್, ಪ್ರವೀಣ್, ಧೀರಜ್, ಜಿತಿಲ್,ನಿಖಿಲ್ ಸೇರಿದಂತೆ ಮತ್ತಿತ್ತರು ಉಪಸ್ಥಿತರಿದ್ದರು.