ಇಂದು ಬೆಳಗ್ಗೆ 6:00ಗೆ ಮುಂಬೈನಿಂದ ಬೆಂಗಳೂರಿಗೆ ಉದ್ಯಾನ್ ಎಕ್ಸ್ ಪ್ರೆಸ್ ಬಂದು ತಲುಪಿದ್ದು, ಈ ರೈಲಿನಲ್ಲಿ 6:45ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ರೈಲಿನಲ್ಲಿ ಇಂಜಿನ್ ಹಾಗೂ ಅದರ ಹಿಂದೆ ಇರುವ ಎರಡು ಕೋಚಿನಲ್ಲಿ (ಎರೆಡನೆ ಎಸಿ ಹಾಗು ಮೂರನೆ ಎಸಿ) ಬೆಂಕಿ ಕಾಣಿಸಿಕೊಂಡಿದೆ. ದಟ್ಟವಾದ ಹೊಗೆ ತುಂಬಿಕೊಂಡಿದ್ದರಿಂದ ಎಲ್ಲರಿಗೂ ಆತಂಕಕ್ಕೆ ಎಡೆ ಮಾಡಿ ಕೊಟ್ಟಿತ್ತು. ಆದರೆ ರೈಲು ಬಂದು ನಿಂತಿದ್ದರಿಂದ ಪ್ರಯಾಣಿಕರೆಲ್ಲರೂ ಇಳಿದಿದ್ದರು ಹಾಗಾಗಿ ಯಾರಿಗೂ ಯಾವುದೇ ಅನಾಹುತವಾಗಿಲ್ಲ. ಮೊದಲಿಗೆ ಇಂಜಿನ್ ನ ತಾಂತ್ರಿಕ ತೊಂದರೆಯಿಂದ ಬೆಂಕಿ ಹತ್ತಿಕೊಂಡಿದೆ ಎಂದು ಹೇಳಿದ್ದರು. ನಂತರ ಯಾರೋ ಕಿಡಿಗೇಡಿ ಬೆಡ್ ಶೀಟಿಗೆ ಬೆಂಕಿ ಹಚ್ಚಿರಬಹುದು ಎಂದು ಶಂಕಿಸಲಾಗುತ್ತಿದೆ. ಯಾವದೇ ಸಾವು ನೋವು ಸಂಭವಿಸಿಲ್ಲ. ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದೆ.
ಮೈಸೂರು;ಮುಂದಿನ ಆಲೋಚನೆ ಇಲ್ಲದೆ ನೀತಿಗಳನ್ನು ಜಾರಿಗೊಳಿಸ ಹೊರಟ ಸರ್ಕಾರದ ನಿಲುವುಗಳಿಗೆ ವಿದ್ಯಾರ್ಥಿಗಳು ಬಲಿಪಶುವಾಗುತ್ತಿದ್ದಾರೆ ಎಂದು ಶರಣ ಸಾಹಿತ್ಯ ಪರಿಷತ್ತು ಜೆಎಸ್ಎಸ್ ಮಹಿಳಾ ಕಾಲೇಜುಗಳಲ್ಲಿ ಏರ್ಪಡಿಸಿದ್ದ ಅಂತರ್ ಕಾಲೇಜು ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ...