ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳು

ಬೆಂಗಳೂರು: ಜುಲೈ ತಿಂಗಳಿನಲ್ಲಿ ಮುಂಗಾರು ಚುರುಕಾಗುತ್ತಿದ್ದು, ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿವುದು ವರದಿಯಾಗಿದೆ.
ಬಿಬಿಎಂಪಿ ಅಧಿಕಾರಿಗಳ ಪ್ರಕಾರ, ಈ ವರ್ಷ ಜೂನ್‌ನಲ್ಲಿ 690 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.
ಜುಲೈ 1 ರಿಂದ ಜುಲೈ 30 ರ ನಡುವೆ ಈ ಸಂಖ್ಯೆ 1,649 ಕ್ಕೆ ಏರಿತು: ಇದು 140% ಹೆಚ್ಚಳ ತೋರಿಸುತ್ತದೆ. ಜುಲೈ 29 ರವರೆಗೆ ಕರ್ನಾಟಕದಲ್ಲಿ ವರದಿಯಾದ 4,739 ಡೆಂಗ್ಯೂ ಪ್ರಕರಣಗಳಲ್ಲಿ ನಗರದಲ್ಲೇ 2,502 (53%) ರಷ್ಟಿದೆ.
ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ, ಮನೆಗಳ ಸುತ್ತ, ದೊಡ್ಡ ಡ್ರಮ್ಮುಗಳಲ್ಲಿ ಸಂಗ್ರಹವಾಗುವ ನೀರು, ಹೂವಿನ ಕುಂಡಗಳ ಕೆಳಗೆ ಇಟ್ಟಿರುವ ತಟ್ಟೆಗಳು, ಹಳೆಯ ಟಯರ್‌ಗಳು, ತೆಂಗಿನ ಚಿಪ್ಪುಗಳು ಮುಂತಾದವುಗಳಲ್ಲಿ ನಿಂತ ಮಳೆನೀರು ಸೊಳ್ಳೆಗಳ ಸಂತಾನೋತ್ಪತ್ತಿಗೆ ಪರಿಪೂರ್ಣ ಸ್ಥಳವಾಗಿದೆ.
ಪೂರ್ವ, ಪಶ್ಚಿಮ ಮತ್ತು ಮಹದೇವಪುರ ವಲಯಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಬಿಬಿಎಂಪಿ ಅಧಿಕಾರಿಗಳ ಪ್ರಕಾರ, ಜುಲೈ ಮೊದಲ 30 ದಿನಗಳಲ್ಲಿ ಪೂರ್ವ ವಲಯದಲ್ಲಿ 442 ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ಪಶ್ಚಿಮ ವಲಯದಲ್ಲಿ 348 ಮತ್ತು ಮಹದೇವಪುರದಲ್ಲಿ 320 ಪ್ರಕರಣಗಳು ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ.