ಬೆಂಗಳೂರು: ಡ್ರಗ್, ರೌಡಿ, ಮಾಫಿಯಾ ಮಟ್ಟ: ನೂತನ ಪೊಲೀಸ್ ಕಮಿಷನರ್

Share

ಬೆಂಗಳೂರು, ಬೆಂಗಳೂರಿನಲ್ಲಿ ಡ್ರಗ್ ಮಾಫಿಯಾ ಮಟ್ಟಹಾಕಲು ಪ್ರಯತ್ನಿಸುತ್ತೇನೆ ಎಂದು ಬೆಂಗಳೂರಿನ ಪೊಲೀಸ್ ಆಯುಕ್ತರಾಗಿ ನೂತನವಾ,ಗಿ ಅಧಿಕಾರ ಸ್ವೀಕರಿಸಿದ ಕಮಲ್ ಪಂಥ್ ತಿಳಿಸಿದರು. ಅವರು ಇಂದು ಸುದ್ದಿ ಸಂದರ್ಶನದಲ್ಲಿ ಮಾತನಾಡುತ್ತ ಬೆಂಗಳೂರಿನಲ್ಲಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಭಾಸ್ಕರ್ ರಾವ್ ಅವರಿಂದ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡುತ್ತಾ ರೌಡಿಗಳನ್ನು ಮಟ್ಟಹಾಕಿ ಅವರನ್ನು ಬೆಂಗಳೂರಿನಲ್ಲಿ ಇಟ್ಟುಕೊಳ್ಳುವುದಿಲ್ಲ ಎಂದರು. ಹಿಂದಿನವರು ಮಾಡುತ್ತಿದ್ದ ಕೆಲಸವನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ. ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಕೊರತೆಯಿಂದ ಬಳಲುತ್ತಿದ್ದಾರೆ ಹೀಗಾಗಿ ಹೆಚ್ಚಿನ ಗಮನ ಹರಿಸುತ್ತೇನೆ ಎಂದು ಅವರು ತಿಳಿಸಿದರು.( ಚಿತ್ರಕೃಪೆ ಡೆಕ್ಕನ್ ಹೆರಾಲ್ಡ್)


Share