ಬೆಂಗಳೂರು ಫೈರಿಂಗ್ 3 ಏರಿದ ಸಾವು ಎಸ್ಡಿಪಿಐ ಮುಖಂಡರು ಸೇರಿದಂತೆ,165 ಮಂದಿ ಬಂಧನ

Share

ಬೆಂಗಳೂರು ಫೈರಿಂಗ್ 3 ಏರಿದ ಸಾವು ಬೆಂಗಳೂರಿನ ಡಿಜೆ ಹಳ್ಳಿ ಸುತ್ತಮುತ್ತ ನಿನ್ನೆ ರಾತ್ರಿ ಇದ್ದಕ್ಕಿದ್ದಂಗೆ ಕಿಡಿಗೇಡಿಗಳ ಪುಂಡಾಟಕ್ಕೆ ಪ್ರತ್ಯುತ್ತರವಾಗಿ ಪೊಲೀಸ್ ನಡೆಸಿದ ಫೈರಿಂಗ್ ಗೆ ಮೂರನೇ ವ್ಯಕ್ತಿ ಸಾವನ್ನಪ್ಪಿದ್ದಾನೆ. ನಿನ್ನೆ ರಾತ್ರಿ 11 ಗಂಟೆಯ ಸುಮಾರಿಗೆ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು ಇನ್ನಿಬ್ಬರು ಬೆಳಗಿನ ಜಾವದ ಹೊತ್ತಿಗೆ ಅಸುನೀಗಿದ್ದಾರೆ. ಇನ್ನೊಬ್ಬನ ಸ್ಥಿತಿ ಗಂಭೀರ ವಾಗಿದ್ದು ಆರಕ್ಕೂ ಹೆಚ್ಚು ಜನರು ಆಸ್ಪತ್ರೆಯಿಂದ ಓಡಿಹೋಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಾತ್ರಿಯಿಡೀ ಕರ್ಫ್ಯೂ ನಡುವೆ ಮನೆಮನೆ ಜಾಲಾ ಡಿರುವ ಪೊಲೀಸರು ಇದುವರೆಗೂ 110ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ನಿನ್ನೆ ರಾತ್ರಿ 9:00 ಗಂಟೆಯಿಂದ 11:30 ಹೊತ್ತಿಗೆ ಏಕಾಕಿಯಾಗಿ ಹಡೆದ ಗಲಭೆಯಲ್ಲಿ ನೂರಾರು ವಾಹನಗಳು ಸುಟ್ಟು ಕರಕಲಾಗಿದೆ. ಶಾಸರ ಸಂಬಂಧಿಯೊಬ್ಬರು ಅವಹೇಳನಕಾರಿ ಪೋಸ್ಟಿಂಗ್ ಒಂದನ್ನು ಫೇಸ್ಬುಕ್ಕಲ್ಲಿ ಹಾಕಿದ್ದಾರೆ ಎಂಬ ಕಾರಣ ನೆಪ ಮಾತ್ರ , ಇದು ಹೊರಗಿನಿಂದ ಬಂದು ಗೂಂಡಾಗಳು ನಡೆಸಿರುವ ಕೃತ್ಯ ಎಂದು ಸ್ಥಳೀಯರು ಹೇಳುತ್ತಿದ್ದಾರೆ ಶಾಸಕರ ಮನೆ ನೆಲಮಾಳಿಗೆ ಸಂಪೂರ್ಣ ಸುಟ್ಟು ಕರಕಲಾಗಿದ್ದು ಹಲವಾರು ಮನೆಗಳಿಗೆ ನುಗ್ಗಿ ದಾಂದಲೆ ನಡೆಸಿದ್ದಾರೆ ಕೆಲವು ಮನೆಗಳಲ್ಲಿನ ಒಡವೆ ಮತ್ತಿತರ ಪದಾರ್ಥಗಳನ್ನು ಗಲಭೆಕೋರರು ದೋಚಿ ಪೀಠೋಪಕರಣ ಟಿವಿ ಫ್ರಿಡ್ಜ್ ಮುಂತಾದವುಗಳನ್ನು ಧ್ವಂಸ ಮಾಡಿದ್ದಾರೆ ಎಂದು ಹೇಳಲಾಗಿದೆ. ಬಾಣಸವಾಡಿಯ ಸುತ್ತಮುತ್ತಲಿನ ಜನ ಭಯಭೀತರಾಗಿದ್ದಾರೆ. ಇದು ಪೂರ್ವ ನಿಯೋಜಿತ ಕೃತ್ಯ ಇದರ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಕೂಡಲೇ ಹತ್ತಿಕಲಾಗುವುದು ಎಂದು ಕಂದಾಯ ಸಚಿವ ಅಶೋಕ್ ತಿಳಿಸಿದ್ದಾರೆ. ಎಸ್ಡಿಪಿಐ ಮುಖಂಡರು ಸೇರಿದಂತೆೆ 150 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ .


Share