ಬೆಂಗಳೂರು, ಲಾಕ್ಡೌನ್ ವಿಸ್ತರಣೆಗೆ ಬಗ್ಗೆ ಮಾತನಾಡಬೇಡಿ ಸಿಎಂ

ಬೆಂಗಳೂರು .

ಮುಂದಿನ ಲಾಕ್ಡೌನ್ ಬಗ್ಗೆ ನಾನೇ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿಳಿಸಿದ್ದಾರೆ. ಕೊರೋನಾ ಉಸ್ತುವಾರಿ, ಕಾರ್ಯಪಡೆ ತಜ್ಞರ ಜೊತೆ ನಡೆದ ಇಂದಿನ ಸಭೆಯಲ್ಲಿ ಅವರು ಹೇಳಿದರು.
ಈಗ ಮಾಡಿರುವ ಲಾಕ್ಡೌನ್ ಅವಧಿ ಮುಗಿದಿಲ್ಲ ಮುಂದಿನ ಲಾಕ್ಡೌನ್ ಬಗ್ಗೆ ಏಕೆ ಮಾತನಾಡುತ್ತೀರಿ ಎಂದು ಅಲ್ಲಿದ್ದವರಿಗೆ ತಾಕೀತು ಮಾಡಿದರು.
ಇಂದು ಸಭೆಯಲ್ಲಿ ಸೇರಿದ್ದ ಎಲ್ಲರೂ ಲಾಕ್ಡೌನ್ ಮಾಡಿ ಎಂದು ಎಷ್ಟೇ ಒತ್ತಡ ಹೇರಿದರು ಮುಖ್ಯಮಂತ್ರಿ ಯಡಿಯೂರಪ್ಪನವರು ವಿಸ್ತರಣೆಗೆ ಒಪ್ಪಲಿಲ್ಲ.
ಹಾಟ್ಸ್ಪಾಟ್ ನಲ್ಲಿ ಪೊಲೀಸರ ವ್ಯವಸ್ಥೆ ಮಾಡಿಕೊಳ್ಳಿ ಎಂದು ಯಡಿಯೂರಪ್ಪ ಅವರು ಸೂಚಿಸಿದರು. ಇಂದು ನಡೆದ ಸಭೆ ಗಮನಿಸಿದರೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ವಿಸ್ತರಣೆ ಮಾಡುವ ಇಚ್ಛೆ ಕಂಡುಬರಲಿಲ್ಲ. ಯಾವುದೇ ಕಾರಣದಿಂದ ಸಾರ್ವಜನಿಕರಲ್ಲಿ ಒಬ್ಬೊಬ್ಬರು ಒಂದೊಂದು ಹೇಳಿಕೆಯನ್ನು ನೀಡಬೇಡಿ ಎಂದು ಒತ್ತಿಒತ್ತಿ ಎಚ್ಚರಿಕೆ ನೀಡಿದ್ದಾರೆ ಮುಂದಿನ ಸೋಮವಾರದಿಂದ ವಿಸ್ತರಣೆ ಆಗಬಹುದು ಅಥವಾ ಆಗದೇನೆ ಇರುವ ಸಂಭವನೆ ಹೆಚ್ಚು ಎಂದು ಹೇಳಲಾಗುತ್ತಿದೆ.