ಬೆಂಗಳೂರು: ವಾಪಸ್ ಬರುತ್ತಿರುವ ಜನರು

ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಬೆಂಗಳೂರು ಬಿಟ್ಟುಹೋಗಿದ್ದ ಜನರು ನಿನ್ನೆ ಮುಖ್ಯ ಮಂತ್ರಿ ಗಳು ಲಾಕ್ಡೌನ್ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರಿಂದ ಮತ್ತೆ ಬೆಂಗಳೂರಿಗೆ ತಂಡೋಪತಂಡವಾಗಿ ಬರುತ್ತಿದ್ದಾರೆ.
ದೇವನಹಳ್ಳಿ ನೆಲಮಂಗಲ ಮೈಸೂರು ರಸ್ತೆ ಮುಂತಾದ ಬೆಂಗಳೂರಿಗೆ ಬಂದು ಸೇರುವ ರಸ್ತೆಗಳಲ್ಲಿ ಟ್ರ್ಯಾಕ್ ದಟ್ಟಣೆ ಹೆಚ್ಚಾಗಿದೆ.
ಬೆಂಗಳೂರು ನಗರಕ್ಕೆ ಪ್ರತಿದಿನ ಓಡಾಡಲು ಸಾಧ್ಯವಿರುವ ಜನರು ಶಾಶ್ವತವಾಗಿ ಬೆಂಗಳೂರನ್ನು ಬಿಟ್ಟು ಹೋಗಿರುವುದಾಗಿ ತಿಳಿಸಲಾಗುತ್ತಿದೆ.