ಬೆಟ್ಟದ,ದೇವೀ ದರ್ಶನ: ನಟರು ಜನಪ್ರತಿನಿದಿ, ಯಾವ ಕಾನೂನಿನ ಅಡಿ ಅನುಮತಿ ನೀಡಲಾಗಿದೆ, ಸರ್ಕಾರ ವರದಿ ನೀಡಲು ಸೂಚನೆ.

Share

ಬೆಂಗಳೂರು ಚಾಮುಂಡಿಬೆಟ್ಟದ ದೇವಿ ದರ್ಶನಕ್ಕೆ ಪ್ರವೇಶ ಮಾಡಿದ್ದ ನಟರು ರಾಜಕಾರಣಿಗಳು ಮುಂತಾದವರಿಗೆ ಯಾವ ಕಾನೂನಿನಡಿ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು ಎಂದು ಸರ್ಕಾರದ ಪರ ವಕೀಲರಿಗೆ ಹೈಕೋರ್ಟ್ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ. ದೇವಾಲಯಕ್ಕೆ ಬರುವ ಭಕ್ತರು ಎಲ್ಲರೂ ಒಂದೇ ಹೀಗಿರುವಾಗ ವಿಶೇಷ ಪ್ರವೇಶ ಏಕೆ ನೀಡಲಾಗಿತ್ತು ಈ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಸಮಗ್ರ ವರದಿ ನೀಡುವಂತೆ ಸರ್ಕಾರದ ಪರ ವಕೀಲರಿಗೆ ತಾಕೀತು ಮಾಡಿದೆ. ಕಾನೂನು ಉಲ್ಲಂಘಿಸಿದ ನಟರು, ಜನಪ್ರತಿನಿಧಿಗಳ ,ವಿರುದ್ಧ ಸರ್ಕಾರ, ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳದೆ ಇರುವ ಬಗ್ಗೆ ಹೈಕೋರ್ಟ್ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಜನಪ್ರತಿನಿಧಿಗಳು, ನಟರು, ಕೋರೋನ ಮಾರ್ಗಸೂಚಿ ಉಲ್ಲಂಘಿಸಿದ ಪ್ರಕರಣಗಳಿಗೆ ಸಂಬಂಧಿಸಿದ ವಕೀಲರಾದ ಗೀತಾಮಿತ್ರ ನ್ಯಾಯಾಲಯಕ್ಕೆ ದೂರು ನೀಡಿದ್ದನು ಇಲ್ಲಿ ಸ್ಮರಿಸಬಹುದಾಗಿದೆ.


Share