ಬ್ರಾಹ್ಮಣರಿಗೆ 10% ಮೀಸಲಾತಿ ಯೋಜನೆ ಜಾರಿಗೊಳಿಸಿ, ಜೀವಿತಾವಧಿ ಪ್ರಮಾಣ ಪತ್ರ ನೀಡಲು ಆಗ್ರಹ

Share

 

ಬ್ರಾಹ್ಮಣರಿಗೆ 10% ಮೀಸಲಾತಿ ಯೋಜನೆ ಜಾರಿಗೊಳಿಸಿ, ಜೀವಿತಾವಧಿ ಪ್ರಮಾಣ ಪತ್ರ ನೀಡಿ:- ಬ್ರಾಹ್ಮಣ ಯುವ ವೇದಿಕೆ ಒತ್ತಾಯ

ಕರ್ನಾಟಕದಲ್ಲಿ ಬ್ರಾಹ್ಮಣರಿಗೆ ಜೀವಿತಾವಧಿ ಜಾತಿ ಪ್ರಮಾಣಪತ್ರ ನೀಡಬೇಕೆಂದು ಮತ್ತು EWS ಮಾನದಂಡ ತಿದ್ದುಪಡಿ ಮಾಡಬೇಕೆಂದು ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಮೈಸೂರು ಬ್ರಾಹ್ಮಣ ಯುವ ವೇದಿಕೆಯಿಂದ ಕಂದಾಯ ಇಲಾಖೆಗೆ
ಅಂಚೆ ಚಳವಳಿ ಮೂಲಕ ಆಗ್ರಹಿಸಲಾಯಿತು,

ಮೈಸೂರು ಬ್ರಾಹ್ಮಣ ಯುವ ವೇದಿಕೆ ಕರೆ ನೀಡಿದ ‘ವಿಪ್ರರಿಗೆ ಸರ್ಕಾರಿ ಸವಲತ್ತು, ಆಗ್ರಹಿಸಿ ಅಂಚೆ ಚಳವಳಿ’ ಯಲ್ಲಿ ಬ್ರಾಹ್ಮಣ ಸಂಘ ಸಂಸ್ಥೆಯ 100ಕ್ಕೂ ಹೆಚ್ಚು ವಿಪ್ರರು ಭಾಗವಹಿಸಿದ್ದರು

ಇದೇ ಸಂಧರ್ಭದಲ್ಲಿ ಬ್ರಾಹ್ಮಣ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ ಮಾತನಾಡಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜಾತಿಯವರಿಗೆ 10% ಮೀಸಲಾತಿ ಅಡಿಯಲ್ಲಿ ಸರಿಸಮಾರು 144 ಜಾತಿಗಳನ್ನ ಗುರುತಿಸಿದ್ದು ಅದರಲ್ಲಿ ಬ್ರಾಹ್ಮಣ ಜನಾಂಗವೂ ಸಹ ಒಂದು, ಆದರೆ ಕರ್ನಾಟಕದಲ್ಲಿ 10% ಮೀಸಲಾತಿ ಯೋಜನೆ ಬ್ರಾಹ್ಮಣ ಜನಾಂಗಕ್ಕೆ ತಲುಪದಿರುವುದು ನೋವಿನ ಸಂಗತಿ ಇದರಿಂದ ಬ್ರಾಹ್ಮಣ ಸಮುದಾಯದ ಯುವಕರಿಗೆ ಶಿಕ್ಷಣ, ಉದ್ಯೋಗ, ಮತ್ತು ಹಿರಿಯರಿಗೆ ಆರೋಗ್ಯ ಸೇರಿದಂತೆ ಅರ್ಚಕರು ಪುರೋಹಿತರು ಅಡುಗೆಯವರು ಸ್ವಂತ ಉದ್ಯಮಿಗಳು ಎಲ್ಲರಿಗೂ ತೊಂದರೆಯಾಗುತ್ತಿದೆ, ಕಂದಾಯ ಇಲಾಖೆ ನೀಡುವ ಆರ್ಥಿಕಾವಾಗಿ ಹಿಂದುಳಿದವರು EWS certificate ಮಾನದಂಡವಗಾಇದ್ದು ಕೆಲವು ರಾಜ್ಯಗಳಲ್ಲಿ ಸ್ವಂತ ಮನೆಯಾಗಲಿ ಬಾಡಿಗೆ ಮನೆಯಾಗಲಿ ಎಲ್ಲೇ ಎಷ್ಟೇ ಚದರ ವಿಸ್ತೀರ್ಣದಲ್ಲಿ ವಾಸವಿದ್ದರೂ ಸಹ ಅದನ್ನ ಕೈಬಿಟ್ಟಿದ್ದು, ಕೇವಲ ವ್ಯಕ್ತಿಯ ವಾರ್ಷಿಕ ಆದಾಯ 8ಲಕ್ಷದೊಳಗಿರಬೇಕೆಂದು ಎಂದು ಕಾನೂನು ತಂದಿರುವ ಹಾಗೆ ಏಕರೂಪ ನೀತಿ ಮಾರ್ಗಸೂಚಿಯನ್ನ ಕರ್ನಾಟಕದಲ್ಲೂ ಜಾರಿಗೆ ತರಬೇಕಿದೆ ಇದರಿಂದ ಕಟ್ಟಕಡೆಯ ವ್ಯಕ್ತಿಗೆ ಬಡವರಿಗೆ ಸವಲತ್ತು ತಲುಪುತ್ತದೆ,
ಮತ್ತು ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಜಾತಿಯವರಿಗೆ ನೀಡುವ ಜಾತಿ ಪ್ರಮಾಣ ಪತ್ರದ ಮಾದರಿಯಲ್ಲೇ ಬ್ರಾಹ್ಮಣ ಜನಾಂಗದವರಿಗೂ ಸಹ ಜೀವಿತಾವಧಿ ಜಾತಿಪ್ರಮಾಣ ಪತ್ರ ನೀಡಬೇಕಿದೆ, ತೆರಿಗೆ ಕಟ್ಟುವ ಬ್ರಾಹ್ಮಣರು ಶಿಕ್ಷಣ ಆರೋಗ್ಯ ಉದ್ಯೋಗ ಸೇರಿದಂತೆ ಸರ್ಕಾರಿ ಸವಲತ್ತು ಅನುದಾನ ವಿವಿಧ ಯೋಜನೆಗಳ ಪ್ರೋತ್ಸಾಹಧನ ಸಬ್ಸಿಡಿ ನೆರವು ಪಡೆಯಲು ನೆರವಾಗುತ್ತದೆ, ಕರ್ನಾಟಕ ಸರ್ಕಾರ ಕಂದಾಯ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಕಾರ್ಯೋನ್ಮುಖರಾಗಬೇಕಿದೆ ಎಂದು ಆಗ್ರಹಿಸಿದರು

ನಂತರ ಕರ್ನಾಟಕ ರಾಜ್ಯ ಬ್ರಾಹ್ಮಣ ಮಂಡಳಿ ಸದಸ್ಯ ಎಂ.ಆರ್ ಬಾಲಕೃಷ್ಣ ಮಾತನಾಡಿ ಕಂದಾಯ ಇಲಾಖೆ ಅಧಿಕಾರಿಗಳು ಬ್ರಾಹ್ಮಣ ಸಮುದಾಯಕ್ಕೆ 10% ಮೀಸಲಾತಿ ತಲುಪಿಸಲು ಮುಂದಾಗಬೇಕು, ಇದು ಯಾವುದೇ ಸರ್ಕಾರ ಅಥವಾ ವ್ಯಕ್ತಿಯ ವಿರುದ್ಧವಾದ ಆಗ್ರಹವಲ್ಲ ನಮ್ಮ ಬ್ರಾಹ್ಮಣ ಸಮುದಾಯಕ್ಕೆ ಸರ್ಕಾರಿ ಸವಲತ್ತು ತಲುಪಿಸಲು ಅವಶ್ಯಕವಿರುವ ಜೀವಿತಾವಧಿ ಬ್ರಾಹ್ಮಣ ಪತ್ರವನ್ನ ಕಂದಾಯ ಇಲಾಖೆ ನೀಡಲು ಮುಂದಾದರೆ ಮುಂದಿನ‌ ಯುವಪೀಳಿಗೆ ಸರ್ಕಾರದ ಸವಲತ್ತು ಪಡೆಯಲು ಅರ್ಹರಾಗಿರುತ್ತಾರೆ ಎಂದರು,

ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಸದಸ್ಯರಾದ ಎಂ ಆರ್ ಬಾಲಕೃಷ್ಣ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಗೌರವಾಧ್ಯಕ್ಷ ಮುಳ್ಳೂರು ಗುರುಪ್ರಸಾದ್, ಅಧ್ಯಕ್ಷರಾದ ಹೆಚ್ ಎನ್ ಶ್ರೀಧರಮೂರ್ತಿ, ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿ ವಿಕ್ರಮ್ ಅಯ್ಯಂಗಾರ್, ಸಂಘಟನಾ‌ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಕಡಕೊಳ ಜಗದೀಶ್, ವಿಜಯ್ ಕುಮಾರ್, ಪ್ರದೀಪ್ ಭಾರದ್ವಾಜ್, ಪ್ರಶಾಂತ್, ಮಿರ್ಲೆ ಪಣೀಶ್, ಶ್ರೀಕಾಂತ್ ಕಶ್ಯಪ್, ಸುಚೀಂದ್ರ, ಪುನೀತ್, ವಿಕಾಸ್ ಶಾಸ್ತ್ರಿ, ಹೊಯ್ಸಳ ಕರ್ನಾಟಕ ಸಂಘದ ರಂಗನಾಥ್ , ಚಕ್ರಪಾಣಿ, ವಿಜಯನಗರ ಬ್ರಾಹ್ಮಣ ಸಂಘದ ಗುರುಪ್ರಸಾದ್, ವಿಪ್ರ ಜಾಗೃತಿ ವೇದಿಕೆಯ ಮುಳ್ಳೂರು ಸುರೇಶ್, ಅರ್ಚಕರ ಸಂಘದ ಅಧ್ಯಕ್ಷರಾದ ಕೃಷ್ಣಮೂರ್ತಿ, ಶ್ರೀನಿವಾಸ್, ವಿಘ್ನೇಶ್ವರ ಭಟ್, ಯೋಗ ನರಸಿಂಹ, ಮಂಜುನಾಥ್, ಕಲ್ಕೆರೆ ನಾಗರಾಜ್, ಅಪೂರ್ವ ಸುರೇಶ್, ವಿಶ್ವನಾಥ್, ಸುದರ್ಶನ್, ಶ್ರೀನಿವಾಸ್, ವಿ.ಏನ್ ಕೃಷ್ಣ, ರಾಜಕುಮಾರ್, ಹಾಗೂ ಇನ್ನಿತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು


Share