ಬ್ರಾಹ್ಮಣ: ಮಂಡಳಿಯ ಸಾಮಾಜಿಕ ಯೋಜನೆಗಳು

Share

ಮಂಡಳಿಯ ಸಾಮಾಜಿಕ ಯೋಜನೆಗಳು

*ಸುಭದ್ರ*:- ಬ್ರಾಹ್ಮಣ ಸಮುದಾಯದ ಅನಾಥ/ನಿರಾಶ್ರಿತ ಅಂಗವಿಕಲ, ವಿಧವೆ ಮಹಿಳೆಯರು , ಹಿರಿಯ ನಾಗರೀಕರಿಗೆ ಮಾಸಿಕ ಪಿಂಚಣಿ. ಅರ್ಜಿ ಸಲ್ಲಿಕೆಯ ವಿವರಗಳ ಬಗ್ಗೆ ಸೂಕ್ತ ಪ್ರಕಟಣೆ ಹೊರಡಿಸಲಾಗುವುದು. *ಸೌಖ್ಯ*:- ನಿರಾಶ್ರಿತರಾದ ಬ್ರಾಹ್ಮಣ ವಿಧವೆ ಹಾಗೂ ಹಿರಿಯ ನಾಗರೀಕರಿಗೆ ಆಶ್ರಯ ಕಲ್ಪಿಸಲು ವೃದ್ಧಾಶ್ರಮಗಳ ಸ್ಥಾಪನೆ/ವೃದ್ಧಾಶ್ರಮ ವೆಚ್ಚ ಮರುಪಾವತಿ ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿ ಮಾಡುವುದು. ಅರ್ಹ ಬ್ರಾಹ್ಮಣರಿಗೆ ಉಚಿತ ವೈದ್ಯಕೀಯ ತಪಾಸಣೆ ಆಯೋಜಿಸುವುದು. ಅರ್ಜಿ ಸಲ್ಲಿಕೆಯ ವಿವರಗಳ ಬಗ್ಗೆ ಸೂಕ್ತ ಪ್ರಕಟಣೆ ಹೊರಡಿಸಲಾಗುವುದು. *ಕಲ್ಯಾಣ*:- ಬ್ರಾಹ್ಮಣರಿಗಾಗಿ ಸಾಮೂಹಿಕ ವಿವಾಹ/ಉಪನಯನಗಳನ್ನುಆಯೋಜಿಸುವುದು. ಬಡ ಬ್ರಾಹ್ಮಣ ಕೃಷಿಕರನ್ನು/ ಅಡಿಗೆಯವರನ್ನು/ ಪುರೋಹಿತರನ್ನು ಮದುವೆಯಾಗುವ ವಧುವಿನ ಹೆಸರಲ್ಲಿ ನಿಗದಿತ ಮೊತ್ತದ ವಿತ್ತಬಾಂಡ್ ವಿತರಿಸುವುದು. ಅರ್ಜಿ ಸಲ್ಲಿಕೆಯ ವಿವರಗಳ ಬಗ್ಗೆ ಸೂಕ್ತ ಪ್ರಕಟಣೆ ಹೊರಡಿಸಲಾಗುವುದು. *ಚೈತನ್ಯ ಉತ್ಸವ*:- ಬ್ರಾಹ್ಮಣ ಸಮುದಾಯದ ಯುವ ಪೀಳಿಗೆಯ ಯುವ ಸಂಘಟನೆ ಹಾಗೂ ಅಭಿವೃದ್ಧಿಗಾಗಿ ಉತ್ಸವಗಳನ್ನು ಆಯೋಜಿಸುವುದು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಬ್ರಾಹ್ಮಣ ಯುವಕ-ಯುವತಿಯರಿಗೆ ಪ್ರೋತ್ಸಾಹ ಹಾಗೂ ಸಹಾಯಧನ ಪಾವತಿ. ಅರ್ಜಿ ಸಲ್ಲಿಕೆಯ ವಿವರಗಳ ಬಗ್ಗೆ ಸೂಕ್ತ ಪ್ರಕಟಣೆ ಹೊರಡಿಸಲಾಗುವುದು.

ಹೆಚ್ಚನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿ ಜಾಲತಾಣವನ್ನು ಸಂಪರ್ಕಿಸಿ
ಜಾಲ ತಾಣ ವಿಳಾಸ :https://ksbdb.karnataka.gov.in/


Share