ಭವಾನಿಗೆ ಮರೀಚಿಕೆ ಆದ ಹಾಸನ ಟಿಕೆಟ್, ಜೆಡಿಎಸ್ 2 ನೇ ಪಟ್ಟಿ ಬಿಡುಗಡೆ

Share

ಹಾಸನ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ರೇವಣ್ಣ ಕುಟುಂಬ ಅರ್ಥಾತ್ ಭವಾನಿ ರೇವಣ್ಣರವರಿಗೆ ಜನತಾದಳದ ಟಿಕೆಟ್ ಕೊಡುವುದಿಲ್ಲ ಎಂದು ಹಠ ಹಿಡಿದಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೊನೆಗೂ ತಮ್ಮ ನಿಲುವಿಗೆ ಬದ್ಧರಾಗಿ ಉಳಿದಿದ್ದಾರೆ. ಓರ್ವ ಸಾಮಾನ್ಯ ಕಾರ್ಯಕರ್ತನಿಗಷ್ಟೇ ಟಿಕೆಟ್ ನೀಡುವುದಾಗಿ ತಿಳಿಸುತ್ತಿದ್ದ ಕುಮಾರಸ್ವಾಮಿ ಕೊನೆಗೂ ಸ್ವರೂಪ ರವರಿಗೆ ಬಿ ಫಾರಂ ನೀಡಿ ಅವರ ಸ್ಪರ್ಧೆಯನ್ನು ಖಚಿತಪಡಿಸಿದ್ದಾರೆ.
ದಳ ಬಿಟ್ಟು ಕಾಂಗ್ರೆಸ್ ಮತ್ತೆ ಕಾಂಗ್ರೆಸ್ ನಿಂದ ಮರಳಿ ದಳದಕ್ಕೆ ಹಿಂದಿರುಗಿದ ವೈ ಯಸ್ ವಿ ದತ್ತಾರವರಿಗೆ , ಇಷ್ಟವಿಲ್ಲದಿದ್ದರೂ ಕುಮಾರಸ್ವಾಮಿ ಅವರು ಕಡೂರಿನಿಂದಲೇ ಸ್ಪರ್ಧಿಸಲು ಅನುವು ಮಾಡಿಕೊಟ್ಟಿದ್ದಾರೆ. ಕುಮಾರಸ್ವಾಮಿ ಮತ್ತು ಹೆಚ್ ಡಿ ರೇವಣ್ಣ ರವರುಗಳು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಇದೀಗ ತಾನೇ ಬಿಡುಗಡೆ ಮಾಡಿದ ಜೆಡಿಎಸ್ ಎರಡನೇ ಪಟ್ಟಿ ಅಭ್ಯರ್ಥಿಗಳ ಹೆಸರು ಈ ಕೆಳಕಂಡಂತಿವೆ.
ಕುಡುಚಿ- ಆನಂದ ಮಾಳಗಿ
ರಾಯಭಾಗ-ಪ್ರದೀಪ ಮಾಳಗಿ
ಸವದತ್ತಿ ಯಲ್ಲಮ್ಮ-ಸೌರಭ್ ಆನಂದ ಚೋಪ್ರಾ
ಅಥಣಿ – ಶ್ರೀ ಶಶಿಕಾಂತ ಪಡಸಲಗಿ ಗುರುಗಳು
ಹುಬ್ಬಳ್ಳಿ ಧಾರವಾಡ ಪೂರ್ವ-ವೀರಭದ್ರಪ್ಪ ಹಾಲಹರವಿ
ಕುಮಟಾ -ಸೂರಜ್ ಸೋನಿ ನಾಯ್ಕ
ಹಳಿಯಾಳ-ಎಸ್.ಎಲ್. ಘೋಟ್ನೆಕರ್
ಭಟ್ಕಳ -ನಾಗೇಂದ್ರ ನಾಯಕ
ಶಿರಸಿ- ಉಪೇಂದ್ರ ಪೈ
ಯಲ್ಲಾಪುರ-ಡಾ.ನಾಗೇಶ್ ನಾಯಕ್
ಚಿತ್ತಾಪುರ- ಸುಭಾಷ್ ಚಂದ್ರ ರಾಥೋಡ್
ಕಲಬುರಗಿ ಉತ್ತರ-ನಾಸಿರ್ ಹುಸೇನ್ ಉಸ್ತಾದ್
ಬಳ್ಳಾರಿ ನಗರ-ಅಲ್ಲಾಭಕ್ಷ ಅಲಿಯಾಸ್ ಮುನ್ನಾ
ಹಗರಿಬೊಮ್ಮನಹಳ್ಳಿ-ಪರಮೇಶ್ವರಪ್ಪ
ಹರಪನಹಳ್ಳಿ- ಎನ್ .ಎಂ. ನೂರ್ ಅಹ್ಮದ್
ಸಿರಗುಪ್ಪ-ಪರಮೇಶ್ವರ ನಾಯಕ

Share