ಭಾರತಕ್ಕೆ ಅಮೆರಿಕದಿಂದ ವೆಂಟಿಲೇಟರ್ ದೇಣಿಗೆ

644
Share

ಅಮೆರಿಕವು ಭಾರತಕ್ಕೆ ವೆಂಟಿಲೇಟರ್‌ಗಳನ್ನು ದೇಣಿಗೆ ನೀಡಲಿದೆ: ಟ್ರಂಪ್


ವಾಷಿಂಗ್ಟನ್, ಮೇ 16: ಪ್ರಧಾನಮಂತ್ರಿ ನರೇಂದ್ರ ಮೋದಿ ನನ್ನ ಉತ್ತಮ ಸ್ನೇಹಿತ. ಉಭಯ ದೇಶಗಳ ಪಾಲುದಾರಿಕೆ ಅನ್ಯೋನ್ಯವಾಗಿದೆ. ಅಮೆರಿಕವು ಭಾರತಕ್ಕೆ ವೆಂಟಿಲೇಟರ್‌ಗಳನ್ನು ದೇಣಿಗೆ ನೀಡಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಭಾರತದಲ್ಲಿ ಶುಕ್ರವಾರ ಕೋವಿಡ್-19 ಪ್ರಕರಣಗಳ ಸಂಖ್ಯೆ 85,000 ಗಡಿ ದಾಟಿದೆ, ಈ ಮೂಲಕ ಚೀನಾದ ದಾಖಲೆಯನ್ನು ಭಾರತ ಹಿಂದಿಕ್ಕಿದೆ. ಚೀನಾದಲ್ಲಿ 82,933 ಸೋಂಕಿನ ಪ್ರಕರಣ ದೃಢಪಟ್ಟಿದ್ದವು.
“ನಮ್ಮ ಸ್ನೇಹಿತ ಭಾರತಕ್ಕೆ ವೆಂಟಿಲೇಟರ್‌ಗಳನ್ನು ಅಮೆರಿಕ ದೇಣಿಗೆ ನೀಡುತ್ತಿದೆ ಎಂದು ಘೋಷಿಸಲು ನನಗೆ ಹೆಮ್ಮೆಯಾಗುತ್ತಿದೆ. ನಾವು ಭಾರತದೊಂದಿಗೆ ನಿಲ್ಲಲಿದ್ದೇವೆ. ನಾವು ಭಾರತಕ್ಕೆ ಸಾಕಷ್ಟು ವೆಂಟಿಲೇಟರ್‌ಗಳನ್ನು ಕಳುಹಿಸಿಕೊಡಲಿದ್ದೇವೆ. ನಾನು ಭಾರತ ಪ್ರಧಾನಿ ಮೋದಿಯೊಂದಿಗೆ ಮಾತನಾಡಿದ್ದೇನೆ.ನಾವು ವೆಂಟಿಲೇಟರ್‌ಗಳ ಅಪಾರ ಪೂರೈಕೆ ಹೊಂದಿದ್ದೇವೆ” ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಭಾರತಕ್ಕೆ ಎಷ್ಟು ವೆಂಟಿಲೇಟರ್‌ಗಳನ್ನು ಕಳುಹಿಸಿಕೊಡಲಾಗುತ್ತದೆ ಎಂದು ಶ್ವೇತಭವನ ಈ ತನಕ ಸ್ಪಷ್ಟಪಡಿಸಿಲ್ಲ.


Share