ರಫೇಲ್ ಯುದ್ಧ ವಿಮಾನಗಳ ಆಗಮನ ಭಾರತದ ವಾಯುಪಡೆಗೆ ಇಂದು ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ .ಬಹಳ ನಿರೀಕ್ಷಿತ ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್ನಿಂದ ಭಾರತಕ್ಕೆ ಆಗಮಿಸಿದೆ .ಎರಡು ದೇಶಗಳ ಒಡಂಬಡಿಕೆ ಅನುಸಾರ ಮೊದಲ 5 ರಫೇಲ್ ಯುದ್ಧ ವಿಮಾನಗಳು ಇಂದು ಭಾರತಕ್ಕೆ ಆಗಮಿಸಿದವು .ಈ ಯುದ್ಧ ವಿಮಾನಗಳು ಭಾರತದ ಗಡಿಯೊಳಗೆ ಪ್ರವೇಶಿಸುತ್ತಿದ್ದಂತೆ ಕೇಂದ್ರ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಅವರು ಹ್ಯಾಪಿ ಲ್ಯಾಂಡಿಂಗ್ ಎಂದು ಶುಭಾಶಯ ಕೋರಿದ್ದಲ್ಲದೆ,ಭಾರತದ ಪ್ರಧಾನಿ ನರೇಂದ್ರ ಸಿಂಗ್ ಮೋದಿಯವರಿಗೂ , ಭಾರತದ ವಾಯುಪಡೆಗೂ ಫ್ರಾನ್ಸ್ ದೇಶಕೂ ಅಭಿನಂದನೆ ಸಲ್ಲಿಸಿದ್ದಾರೆ .ಸುಮಾರು ಮುನ್ನೂರು ಕಿ ಮೀ ದೂರದಿಂದ ನಿಖರವಾಗಿ ಗುರಿಯತ್ತ ಆಕ್ರಮಣ ಮಾಡಬಲ್ಲ ,ಗಂಟೆಗೆ 2130 ಕಿ .ಮಿವೇಗದಲ್ಲಿ ಚಲಿಸಬಲ್ಲ ,ಗಂಟೆಗೆ 6 ಸಾವಿರ ಅಡಿ ಎತ್ತರಕ್ಕೆ ಒಮ್ಮೆಗೆ ಏರಬಲ್ಲ .ಆಕಾಶ ಮಾರ್ಗದಲ್ಲಿ ಒಂದಕ್ಕಿಂತ ಹೆಚ್ಚು ವಿಮಾನಗಳನ್ನು ಹೊಡೆದುರುಳಿಸಬಲ್ಲ ,ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ದು ಹಲವಾರು ಜಾಗಗಳಲ್ಲಿ ಉಡಾಯಿಸಬಲ್ಲ ಅತ್ಯಂತ ಪ್ರಬಲವಾದ ಯುದ್ಧ ವಿಮಾನಗಳು ಇಂದು ಹರಿಯಾಣಾದ ಅಂಬಾಲಾ ವಾಯು ನೆಲೆಗೆ ಏಳು ಸಾವಿರ ಕಿಲೋಮೀಟರ್ ದಾಟಿ ಬಂದು ಯಶಸ್ವಿಯಾಗಿ ಬಂದಿಳಿಯಿತು .ಎರಡು ಸುಖೋಯ್ ಯುದ್ಧ ವಿಮಾನಗಳು ಈ ಐದು ರಫೇಲ್ ವಿಮಾನಗಳಿಗೆ ಬೆಂಗಾವಲಾಗಿ ಸಾಗುತ್ತಾ ಬಂದು ನಮ್ಮ ನೆಲೆಗೆ ಇಳಿಸಿಯಿತು. ಭಾರತದ ವಾಯುಪಡೆಯ ಮುಖ್ಯಸ್ಥ ಆರ್ ಕೆ ಬದೌರಿಯಾ ಈ ವಿಮಾನಗಳನ್ನು ಬರಮಾಡಿಕೊಂಡರು .ಐವರು ಭಾರತೀಯ ಪೈಲಟ್ಗಳಿಗೆ ಫ್ರಾನ್ಸಿನಲ್ಲಿ ತರಬೇತಿಗೊಳಿಸಿ ಅವರುಗಳೇ ಇದನ್ನು ಚಾಲನೆ ಮಾಡುತ್ತಾ ಭಾರತದ ನೆಲಕ್ಕೆ ತಂದು ಇಳಿಸಿದ್ದಾರೆ .ಈ ಐದರಲ್ಲಿ ಎರಡನ್ನು ತರಬೇತಿಗೂ ಹಾಗೂ ಇನ್ನೂ ಮೂವರನ್ನು ಯುದ್ಧ ಸನ್ನದ್ಧವಾಗಿ ಇರಿಸಲಾಗುವುದು .ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಇದನ್ನು ಭಾರತಕ್ಕೆ ತರಲು ಹಲವಾರು ಬಾರಿ ಮಾತುಕತೆ ನಡೆಯುತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.ಇತ್ತೀಚೆಗೆ ತಾನೇ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಫ್ರಾನ್ಸ್ಗೆ ಭೇಟಿ ನೀಡಿ ಈ ವಿಮಾನಗಳು ಭಾರತಕ್ಕೆ ಹೊರಡುವ ಮುನ್ನ ಹಿಂದೂ ಸಂಸ್ಕೃತಿಯಂತೆ ವಿಮಾನಗಳ ಚಕ್ರದಡಿ ನಿಂಬೆ ಹಣ್ಣುಗಳನ್ನು ಇರಿಸಿ ಅದನ್ನು ಚಾಲು ಗೊಳಿಸಿದ್ದನ್ನು ಸ್ಮರಿಸಬಹುದು . ಇಂದು ಇವುಗಳ ಆಗಮನದಿಂದ ಭಾರತದ ವಾಯು ಪಡೆಗೆ ಭೀಮ ಬಲ ಬಂದಂತಾಗಿದೆ. ನೆರೆಯ ರಾಷ್ಟ್ರಗಳಿಗಂತೂ ಇದು ಆತಂಕ ಸೃಷ್ಟಿಸುವುದರಲ್ಲಿ ಎರಡನೇ ಮಾತಿಲ್ಲ .ಒಡಂಬಡಿಕೆಯ ಪ್ರಕಾರ ಇನ್ನೂ ಮೂವತ್ತ ಒಂದು ರಫೇಲ್ ವಿಮಾನಗಳು ಹಂತ ಹಂತವಾಗಿ ಭಾರತಕ್ಕೆ ಆಗಮಿಸಲಿದೆ.