ಭಾರತರತ್ನ ದಿವಾನ್ ಸರ್ ಎಂ. ವಿಶ್ವೇಶ್ವರಯ್ಯ ರವರ 160ನೇ ಜಯಂತಿ ಆಚರಣೆ.

Share

ಭಾರತರತ್ನ ದಿವಾನ್ ಸರ್ ಎಂ. ವಿಶ್ವೇಶ್ವರಯ್ಯ ರವರ 160ನೇ ಜಯಂತಿಯ ಅಂಗವಾಗಿ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಅಭಿಮಾನಿಗಳ ಬಳಗ “ವಿಶ್ವ ಕಂಡ ವಿಶ್ವೇಶ್ವರಯ್ಯ” ಕಾರ್ಯಕ್ರಮವನ್ನು ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಆವರಣದಲ್ಲಿ ಆಯೋಜಿಸಲಾಗಿತ್ತು, ಹಾಗೂ ಶಾಸಕರಾದ ಜಿಟಿ.ದೇವೆಗೌಡರು ಸರ್ ಎಂ.ವಿಶ್ವೇಶ್ವರಯ್ಯ ರವರ ಪ್ರತಿಮೆಗೆ ಮಾಮಾಡುವ ಮೂಲಕ ಚಾಲನೆ ನೀಡಿದರು, ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯ ಪ್ರತಿಮೆ ವಿವಾದ ಹೊರೆಯಾಲ ಅಂಕಣಕಾರ ದೊರೆಸ್ವಾಮಿ ರವರು ಬರೆದಿರುವ ಪುಸ್ತಕ ಬಿಡುಗಡೆ ಮಾಡಿದ ನಂತರ ಶಾಸಕರಾದ ಜಿಟಿ.ದೇವೆಗೌಡ ರವರು ಮಾತನಾಡಿ ಮೈಸೂರು ನಗರ ಸಾಂಸ್ಕೃತಿಕ ರಾಜಧಾನಿಯಾಗಿ ಗುರುತಿಸಿಕೊಂಡಿದೆ ಅಂದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಪರಿಕಲ್ಪನೆಗೆ ಪುಷ್ಠಿ ನೀಡಿದ ಯಂತ್ರ’ಋಷಿ ವಿಶ್ವೇಶ್ವರಯ್ಯ ರವರ ಆಡಳಿತದ ಸೇವೆಯೇ ಕಾರಣ ಶಿಕ್ಷಣ ನೀರಾವರಿ, ಕೃಷಿ, ಔದ್ಯಮಿಕ, ವಾಣಿಜ್ಯ, ಕೈಗಾರಿಕೋದ್ಯಮ, ಕಾರ್ಖಾನೆ, ವಿದ್ಯುತ್ ಸ್ಥಾವರ ಕನ್ನಡ ಭಾಷಾ ಕೊಡುಗೆ, ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ ಕೃಷ್ಣರಾಜಸಾಗರದಲ್ಲಿ ರಾಜ್ಯ ಸರ್ಕಾರ ಜಲಸಂಪನ್ಮೂಲ ಇಲಾಖೆ ಕಾವೇರಿ ನೀರಾವರಿ ನಿಗಮ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ರವರ ಪ್ರತಿಮೆ ಸ್ಥಾಪಿಸುತ್ತಿದ್ದು ಇದನ್ನ ಒಂದೇ ಬೃಹತ್ ಮಂಟಪದ ಆವರಣದಲ್ಲಿ ಸ್ಥಾಪಿಸಬೇಕು ರಾಮಾಂಜನೇಯ ಇದ್ದ ಹಾಗೆ ನಾಲ್ವಡಿ ಮತ್ತು ಸರ್.ಎಂವಿ ರವರ ಒಡನಾಟ ಅಭಿವೃದ್ಧಿಯತ್ತ ಸಾಗಿತ್ತು ಅದಕ್ಕೆ ಅನ್ಯರ್ಥ ಕಲ್ಪಿಸಬಾರದು ಇದರಿಂದ ಯುವ ಪೀಳಿಗೆ ಇತಿಹಾಸ ತಿಳಿದುಕೊಳ್ಳಲು ಮತ್ತು ಪ್ರವಾಸಿ ತಾಣದ ಅಭಿವೃದ್ದಿಗೆ ಸಹಕಾರಿಯಾಗಲಿದೆ, ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಮಂತ್ರಿಗಳಿಗೆ ಜನಪ್ರತಿನಿಧಿಗಳಿಗೆ ವಿಶ್ವೇಶ್ವರಯ್ಯ ರವರ ಆಡಳಿತ ಸೇವೆ ಮಾದರಿಯಾಗಿದೆ, ದೇಶ ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಮೈಸೂರಿನ ಸೌಂದರ್ಯವನ್ನು ಕಣ್ತುಂಬಿಕೊಂಡು ಇದರ ಹಿಂದಿನ ಶಿಲ್ಪಿಗಳು ಯಾರೆಂದು ಚಿಂತಿಸುತ್ತಾರೆ, ಯಂತ್ರ ಋಷಿ ಶತಾಯುಷಿ ವಿಶ್ವೇಶ್ವರಯ್ಯರವರು ವಿಶ್ವದಲ್ಲೆ ಜನಪ್ರಿಯ ರಾಗಿದ್ದಾರೆ, ಅದಕ್ಕಾಗಿಯೇ ಮಂಡ್ಯ ಮೈಸೂರು ಭಾಗದ ಪ್ರತಿಯೊಂದು ಮನೆಯಲ್ಲೂ ಸರ್.ಎಂ ವಿ ಭಾವಚಿತ್ರವಿಟ್ಟು ಅನ್ನದಾತ ಪ್ರಭು ಮತ್ತು ಗ್ರಾಮಗಳಲ್ಲೂ ಸಹ ಸರ್ ಎಂ ಪ್ರತಿಮೆ ಸ್ಥಾಪಿಸಿ ಎಂದು ಘೋಷಣೆ ಕೂಗುತ್ತಾರೆ ಪ್ರತಿಯೊಬ್ಬ ಇಂಜಿನಿಯರ್ಸ್ ವಿದ್ಯಾರ್ಥಿಗಳಿಗೆ ಮತ್ತು ಅಭಿಯಂತರರಿಗೆ ವಿಶ್ವೇಶ್ವರಯ್ಯ ರವರ ಜೀವನ ಸಂದೇಶವೇ ಮಾದರಿ, ಭಾರತವನ್ನು ರೈತಪ್ರಧಾನ ದೇಶವಾಗಿ ಶ್ರಮಿಸದವರು ಸರ್ ಎಂವಿ ಎಂದು ಮಾತನಾಡಿದರು,

ನಂತರ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ವಿ ರಾಜೀವ್ ರವರು ಮಾತನಾಡಿ ಕನ್ನಂಬಾಡಿ ಮೊದಲ ಹಂತದಲ್ಲಿ 80ಅಡಿ ಉದ್ದೇಶಿತ ನಿರ್ಮಾಣ ಯೋಜನೆಯಿದ್ದಾಗ ನೀರಾವರಿಗಾಗಲಿ ಕೃಷಿ ರೈತಾಪಿ ಚಟುವಟಿಕೆಗೆ ಸಹಕಾರಿಯಗದೆ ನೆನೆಗುದಿಗೆ ಬಿದ್ದಿತು, ಇದರ ವಿಷಯ ಅರಿತ ದಿವಾನ್ ಸರ್. ಎಂ ವಿಶ್ವೇಶ್ವರಯ್ಯ ರವರು ಮದ್ರಾಸ್ ಸರ್ಕಾರ ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಸಂಧರ್ಭದಲ್ಲಿ ರೈತಾಪಿ ವರ್ಗವನ್ನ ಕಾಪಾಡಲು ರಾಜ್ಯದ ಅಭಿವೃದ್ಧಿಯ ಪರವಾಗಿ ವಾದವನ್ನು ಮಾಡಿ ಅನುಮತಿ ಪಡೆದರು ಅವರ ಕ್ರಿಯಾತ್ಮಕ ಶ್ರಮದಿಂದ 124ಅಡಿ ನಿರ್ಮಿಸಲು ಸಹಕಾರಿಯಾಗಿತು ಇವತ್ತಿಗೂ ನಮ್ಮ ಪೂರ್ವಜರು ಹಳೇಮೈಸೂರು ಭಾಗದ ಮನೆಗಳಲ್ಲಿ ವಿಶ್ವೇಶ್ವರಯ್ಯ ಭಾವಚಿತ್ರ ಮಾತ್ರ ಪೂಜಿಸದೇ ಮನೆಗೊಬ್ಬ ವಿಶ್ವೇಶ್ವರಯ್ಯ ಎಂದು ಮಕ್ಕಳಿಗೆ ನಾಮಕರಣ ಮಾಡಿದ್ದಾರೆ, 70ಕ್ಕೂ ಹೆಚ್ಚು ಡಾಕ್ಟರೇಟ್ ಸೇರಿದಂತೆ ಕರ್ನಾಟಕದ ಪ್ರಪ್ರಥಮ ಕನ್ನಡಿಗರಾಗಿ ಭಾರತರತ್ನ ಪಡೆದರು, ಮನೆಮನೆಗೆ ಇಂದು ಕುಡಿಯುವ ನೀರು ಯೋಜನೆ UGD ಪರಿಕಲ್ಪನೆ, ಸಹಕಾರಿ ಮೈಸೂರು ಸ್ಟೇಟ್ ಬ್ಯಾಂಕ್ , ಶಿಕ್ಷಣಕ್ಕೆ ಮೈಸೂರು ವಿಶ್ವವಿದ್ಯಾನಿಲಯ, ಭಾಷೆಗಾಗಿ ಕನ್ನಡ ಸಾಹಿತ್ಯ ಪರಿಷತ್, ಉಕ್ಕಿನ ಕಾರ್ಖನೆಗಳು ಯೋಜನೆ ಕಾರ್ಯಗತಕ್ಕೆ ತಂದರು ಎಂದರು

ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ. ಪ್ರಕಾಶ್ ರವರು ಮಾತನಾಡಿ ಕಳೆದ ದಶಕಗಳಿಂದ ಬ್ರಾಹ್ಮಣ ಸಂಘ ಸರ್.ಎಂ.ವಿ ರವರ ಹುಟ್ಟು ಹಬ್ಬವನ್ನು ಆಚರಿಸುತ್ತಾ ಬಂದಿದೆ ಆದರೆ ರಾಜ್ಯ ಸರ್ಕಾರ ಜಿಲ್ಲಾಡಳಿತ ಮೈಸೂರಿನಲ್ಲಿ‌ ಆಚರಿಸಲು ಮುಂದಾಗದಿರುವುದು ಬೇಸರದ ಸಂಗತಿ, ಸರ್.ಎಂ ವಿ ಪ್ರತಿಮೆಯನ್ನು ಆಯುರ್ವೇದ ಆಸ್ಪತ್ರೆಯ ವೃತ್ತದಲ್ಲಿ ಸ್ಥಾಪಿಸುವಂತೆ ಮತ್ತು ಜಿಲ್ಲಾಡಳಿತ ವತಿಯಿಂದ ಸರ್.ಎಂ ವಿ ಜಯಂತಿ ಕಲಾಮಂದಿರದಲ್ಲಿ ಆಚರಿಸುವಂತೆ ಜನಪ್ರತನಿಧಿಗಳು ರಾಜ್ಯಸರ್ಕಾರದ ಗಮನಸೆಳೆಯಬೇಕು, ಈವಿಚಾರವಾಗಿ ಮುಂದಿನ ದಿನದಲ್ಲಿ ಜಾರಿಗೆ ಬರುವಂತೆ ವಿಧಾನಸಭೆಯಲ್ಲಿ ಮಾತನಾಡಬೇಕು ಎಂದರು

ನಂತರ ಕೆ.ರಘುರಾಂ ವಾಜಪೇಯಿ ಮಾತನಾಡಿ ಒಬ್ಬ ವ್ಯಕ್ತಿ ತಾನೂ ಹೋದಮೇಲೂ ತನ್ನ ಆಡಳಿತ ಸೇವೆ ಮಾತನಾಡುತ್ತದೆ ಎಂದರೇ ದಿವಾನ್ ಸರ್ ಎಂ. ವಿಶ್ವೇಶ್ವರಯ್ಯ ರವರು ಇಂದಿನ ಸರ್ಕಾರಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ, ಮೈಸೂರಿನ ರಸ್ತೆಗಳು ಶತಮಾನಗಳ ಹಿಂದೆಯೇ ಇಂದಿನ ಜನಸಂಖ್ಯೆಯೇ ಆಧಾರಿತವಾಗಿ ಯೋಜಿಸಿ ಯುಜಿಡಿ ವ್ಯವಸ್ಥೆಯ ಸೇವೆ ಮನೆಬಾಗಿಲಿಗೆ ಬರುತ್ತದೆ ಎಂದರೆ ಸರ್.ಎಂ ವಿ ರವರ ಚಿಂತನಾ ಶಕ್ತಿ ಅಗಾಧವಾದುದು ಸರ್ ಎಂ ವಿ ಯಾವುದೋ ಒಂದು ಜನಾಂಗಕ್ಕೆ ಅಥವಾ ಪ್ರದೇಶಕ್ಕೆ ಸೀಮಿತವಾದವರಲ್ಲ ನೀರಿನ ಹನಿಯ ಮೌಲ್ಯತೆಯನ್ನು ವಿಶ್ವಕ್ಕೆ ಸಾರಿದವರು ವಿಶ್ವೇಶ್ವರಯ್ಯ ನವರು ಎಂದರು

ನಂತರ ಹೊಟೆಲ್ ಮಾಲಿಕರ ಸಂಘದ ಅಧ್ಯಕ್ಷರಾದ ಸಿ.ನಾರಾಯಣಗೌಡ ಮಾತನಾಡಿ ರಾಜ್ಯಸರ್ಕಾರ ಮುಂದಿನ ದಿನದಲ್ಲಿ ಸರ್.ಎಂ ವಿ ರವರ ಜಯಂತಿಯನ್ನು ಆಚರಿಸಲು ಮುಂದಾಗಬೇಕು, ಅಭಿಯಂತರರು ರೈತವರ್ಗ ಇಂಜಿನಿಯರ್ಸ್ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಹಲವಾರು ಯೋಜನೆಗಳನ್ನು ರೂಪಿಸಬೇಕು ಎಂದು ಮಾತನಾಡಿದರು,
ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ, ಶಾಸಕರಾದ ಜಿಟಿ. ದೇವೆಗೌಡ, ಮೈಸೂರು ನಗರಾಭಿವೃದ್ಧಿ ಪ್ರಾದಿಕಾರ ಅಧ್ಯಕ್ಷ ಹೆಚ್.ವಿ ರಾಜೀವ್, ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ. ಪ್ರಕಾಶ್, ಹಿರಿಯ ಸಮಾಜಸೇವಕ ಕೆ.ರಘುರಾಂ ವಾಜಪೇಯಿ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣ ಗೌಡ, ಮಾಜಿ ನಗರಪಾಲಿಕೆ ಸದಸ್ಯ ಎಂ.ಡಿ ಪಾರ್ಥಸಾರಥಿ, ಯುವ ಮುಖಂಡರಾದ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಶ್ರೀಧರಮೂರ್ತಿ, ಗುರು ಪ್ರಸಾದ್, ಲೋಹಿತ್, ಮಧು ಪುಜಾರ್, ಕಡಕೊಳ ಜಗದೀಶ್, ವಿನಯ್ ಕಣಗಾಲ್,ಸುಚೇಂದ್ರ , ಜಯಸಿಂಹ, ಚಕ್ರಪಾಣಿ, ಪ್ರಶಾಂತ್, ಅಶ್ವಿನ್,ಶ್ರಿಕಾಂತ್ ಕಶ್ಯಪ್,


Share