ಭಾರತೀಯ ರಕ್ಷಣಾ ಇಲಾಖೆಗೆಯಲ್ಲಿ ಸೈನಿಕರೂ, ಅರೆ ಸೇನಾಪಡೆ, ವತಿಯಿಂದ ಯೋಗ ದಿನಾಚರಣೆ

Share

 

*ಭಾರತೀಯ ರಕ್ಷಣಾ ಇಲಾಖೆಗೆಯಲ್ಲಿ ಸೈನಿಕರೂ, ಅರೆ ಸೇನಾಪಡೆ, ಆರಕ್ಷರು ಹುದ್ದೆಗಳಲ್ಲಿ ಸೇವೆ ಸಲ್ಲಿಸಲು ಸೈನಿಕ ಅಕಾಡೆಮಿ (ರಿ) ಮೈಸೂರಿನಲ್ಲಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಂದ ವಿಶ್ವ ಯೋಗ ದಿನದ ಆಚರಣೆ*

ನಗರದ ಬೆಳವಾಡಿ ಗ್ರಾಮದ, ಸಿಲಿಕಾನ್ ವ್ಯಾಲಿ ಬಡಾವಣೆಯಲ್ಲಿ, ಸೇನೆ, ಅರೆ ಸೇನೆ, ಪೊಲೀಸ್ ನಂತಹ ಹುದ್ದೆಗೆ ಸೇರಲು ಬಯಸುವ ಆಕಾಂಕ್ಷಿಗಳಿಗೆ 3 ವರ್ಷಗಳಿಂದ 234 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಸುವಲ್ಲಿ ಯಶಸ್ವಿಯಾಗಿ ಸಾಗುತ್ತಿರುವ ತರಬೇತಿ ಕೇಂದ್ರ ಮಾಜಿ ಕಮಾಂಡೋ ಶ್ರೀಧರ್ ಸಿ ಎಂ ರವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ
ಸೈನಿಕ ಅಕಾಡೆಮಿ (ರಿ) ಮೈಸೂರು ಸಂಸ್ಥೆರವರಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸೈನಿಕ ಅಕಾಡೆಮಿಯ ಸಂಸ್ಥಾಪಕರು ಕಮಾಂಡೋ ಶ್ರೀಧರ್ ಸಿ ಎಂ ಮಾತನಾಡಿ ಯೋಗ ನಮ್ಮ ದೇಶದ ಪ್ರಾಚೀನ ಕಾಲದಿಂದ ಬಂದಂತ ಕೊಡುಗೆ ಆಗಿದೆ, ಯೋಗದಿಂದ ಎಲ್ಲಾ ರೋಗಗಳು ಮುಕ್ತ, ಆಯಸ್ಸು ಹೆಚ್ಚಾಗುತ್ತದೆ, ಮನಸಿಗೆ ನೆಮ್ಮದಿ ನೀಡುತ್ತದೆ, ಯೋಗ ಪ್ರಾಣಾಯಾಮ ಪ್ರತಿದಿನವೂ ಕೇವಲ 20 ನಿಮಿಷಗಳು ಮಾಡಿದರು ಪೂರ್ತಿ ದಿನಚರಿ ಚೆನ್ನಾಗಿರುತ್ತದೆ, ಈಗಿನ ಜನರಲ್ಲಿ ಆವೇಶ, ಆಕ್ರೋಶ, ದುರಾಸೆ ಹೆಚ್ಚಾಗಿದ್ದು ತನ್ನ ನಿಜವಾದ ಬದೂಕನ್ನೇ ಮರೆತು ಆಸ್ಪತ್ರೆಗಳಿಗೆ ಅಂದಾದುಂಡವಾಗಿ ಖರ್ಚು ಮಾಡಿ ಸಾಲ ಸೋಲ ಮಾಡಿ ಜೀವನ ಪೂರ್ತಿ ಅನಾರೋಗ್ಯ, ಮಾನಸಿಕ ಒತ್ತಡಗಳಿಂದ ಕಡಿಮೆ ವಯಸ್ಸಿನಲ್ಲೇ ಸಾಯುತ್ತಿದ್ದಾರೆ, ಇದೆಲ್ಲವೂ ಸರಿ ಪಡಿಸಲು ಯೋಗ ಪ್ರಾಣಾಯಾಮ ಬಹು ಉಪಯೋಗಿ ಮುಖ್ಯವಾಗಿದೆ ಎಂದು ಹೇಳಿದರು…

ಉಪಸ್ಥಿತಿ ಮಾಜಿ ಕಮಾಂಡೋ ಮತ್ತು ಸಂಸ್ಥೆಯ ಸಂಸ್ಥಾಪಕರು ಶ್ರೀಧರ್ ಸಿ ಎಂ ಅಧ್ಯಾಪಕರು ಸಂತೋಷ, ಸಿಬ್ಬಂದಿಗಳು ಚೇತನ್, ಮಂಜು ಪೀಡಾಯ, ಗ್ನಾನೇಂದ್ರ, ಕಾರ್ತಿಕ್, ರೋಜಾ, ತೇಜಸ್ವಿನಿ, ಇಂಚರ, ಜನನಿ, ಹಾಗು ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿದ್ದರು…


Share