ಭಾರತ ಎಂಬ ಹೆಸರೇ ಸೂಕ್ತ : ವಿಕ್ರಮ ಅಯ್ಯಂಗಾರ್*

 

*ಇಂಡಿಯಾ ಎಂಬ ವಿದೇಶದ ಅಪಭ್ರಂಶದ ಹೆಸರಿನಿಂದ ಕರೆಯುವ ಬದಲು ಭಾರತ ಎಂಬ ಹೆಸರೇ ಸೂಕ್ತ : ವಿಕ್ರಮ ಅಯ್ಯಂಗಾರ್*

ಜಗತ್ತಿನಲ್ಲಿ ಭಾರತಕ್ಕೆ ವಿಶೇಷವಾದ ಸಾಂಸ್ಕೃತಿಕ ಹಿನ್ನೆಲೆ ಇದೆ
ಇಲ್ಲಿನ ಕಲೆ ಸಂಸ್ಕೃತಿಯನ್ನು ಅಧ್ಯಯನ ಮಾಡಿ ಜಗತ್ತಿನಾದ್ಯಂತ ಅನೇಕ ವಿದೇಶಿಯರು ಸಹ ಪಸರಿಸುತ್ತಿದ್ದಾರೆ
ಸಹಸ್ರಾರು ವರ್ಷಗಳಿಂದ ಭರತ ಭೂಮಿ ಹೆಸರು ಬಳಕೆಯಲ್ಲಿದೆ
ಈ ಹೆಸರಿನಿಂದ ಭಾರತ ಮತ್ತಷ್ಟು ವಿಶಿಷ್ಟವಾಗಿ ಕಾಣಲಿದೆ
ಭಾರತ ಎಂದ ಕ್ಷಣ ಇಲ್ಲಿನ ಆಧ್ಯಾತ್ಮಿಕ ಸಾಂಸ್ಕೃತಿಕ ಹಿನ್ನೆಲೆಯು ಕಣ್ಣಿನ ಮುಂದೆ ಬರುತ್ತದೆ ಭಾವನಾತ್ಮಕವಾಗಿಯೂ ಇದು ಜನರ ಮನಮುಟ್ಟುತ್ತದೆ.
ವಿವಿಧ ಸಂಸ್ಥಾನಗಳಾಗಿ ಹಂಚಿ ಅನೇಕ ಸಣ್ಣಪುಟ್ಟ ರಾಜ್ಯಗಳಾಗಿದ್ದರೂ ಭರತ ದೇಶ,ಭರತ ವರ್ಷ ಭರತ ಖಂಡ ಎಂಬ ಹೆಸರು ದ್ವಾಪರ ಯುಗದಿಂದಲೂ ಇತ್ತು ಎನ್ನುವುದಕ್ಕೆ ಅನೇಕ ಸಾಕ್ಷಿಗಳು ನಮ್ಮ ಕಣ್ಣ ಮುಂದಿದೆ.
ಪ್ರಾದೇಶಿಕವಾಗಿ ಭಾರತ್,ಭಾರತ,ಭಾರತಂ ಎಂಬ ಹೆಸರುಗಳು ಜನಜನಿತವಾಗಿದೆ.
ಈಗ ಭಾರತ ದೇಶವು ಎಲ್ಲರೀತಿಯಲ್ಲಿಯೂ ವಿಶ್ವದ ಗಮನ ಸೆಳೆಯುತ್ತಿದ್ದು ಇಂಡಿಯಾ ಎಂಬ ವಿದೇಶದ ಅಪಭ್ರಂಶದ ಹೆಸರಿನಿಂದ ಕರೆಯುವ ಬದಲು ಭಾರತ ಎಂಬ ಹೆಸರೇ ಸೂಕ್ತವಾದರೆ ಸ್ವಾವಲಂಬಿಗಳಾಗಿ ವಿಶ್ವಗುರುವಾಗುವತ್ತ ಸಾಗಬೇಕಿದೆ.

-ವಿಕ್ರಂ ಅಯ್ಯಂಗಾರ್
ಸಾಮಾಜಿಕ ಹೋರಾಟಗಾರ