ಭಾರತ ಕೋರೋನ ಸಂಕ್ಷಿಪ್ತ ವರದಿ, ಒಂದೇ ದಿನ 30ಸಾವಿರ ಗುಣಮುಖ.

ಭಾರತದಲ್ಲಿ ಒಂದೇ ದಿನ 30,000 ಜನ ಗುಣಮುರಾಗಿದ್ದಾರೆ , ಒಟ್ಟು ಗುಣಮುಖರಾದವರ ಸಂಖ್ಯೆ 7.82 ಲಕ್ಷಗಳನ್ನು ದಾಟಿದೆ.ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದುತ್ತಿದ್ದಾರೆ, ಅಂದರೆ 29,557. ಚೇತರಿಸಿಕೊಂಡ ಒಟ್ಟು ಪ್ರಕರಣಗಳ ಸಂಖ್ಯೆ 7,82,606 ಕ್ಕೆ ಏರಿಕೆಯಾಗುತ್ತಿದೆ ಹಾಗೂ ಚೇತರಿಕೆ ದರದಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ, ಇದು 63.18% ರಷ್ಟಿದೆ. ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.