ಮೈಸೂರು ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆ ರಾಜ್ಯ ಕೃಷಿಕರನ್ನು ಬೀದಿಪಾಲು ಮಾಡುವ ಮತ್ತು ಉಳ್ಳವರು ಕೃಷಿ ಜಮೀನು ಖರೀದಿಸಿ ತಮ್ಮ ಇಚ್ಛೆಗೆ ತಕ್ಕಂತೆ ಬಳಸುವ ಅಧಿಕಾರ ನೀಡಿದೆ ಎಂದು ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ್ಯದ ಅಧ್ಯಕ್ಷರಾದ ರಾಮಾಪುರದ ರಾಜೇಂದ್ರ ಅವರು ತಿಳಿಸಿದರು.
ಅವರು ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ಸರ್ಕಾರ ಕೈಗಾರಿಕೆಗಳಿಗೆ ಜಮೀನು ಬೇಕು ಮತ್ತು ಕೃಷಿಯೇತರ ಕೃಷಿಯಲ್ಲಿ ತೊಡಗಿ ಕೃಷಿ ಉತ್ಪಾದನೆಯನ್ನು ಜಾಸ್ತಿ ಮಾಡಲು ಎನ್ನುತ್ತಿದೆ ಕೈಗಾರಿಕಾ ಅಭಿವೃದ್ಧಿ ಮಂಡಳಿ ಅಭಿವೃದ್ಧಿಪಡಿಸಿದ 12000 ಎಕರೆಗಿಂತಲೂ ಹೆಚ್ಚು ಮತ್ತು ಅಭಿವೃದ್ಧಿಪಡಿಸದೆ ಇರುವ 36000 ಎಕರೆಗಿಂತಲೂ ಹೆಚ್ಚು ಜಮೀನಿದೆ ಅದನ್ನು ಕೈಗಾರಿಕೆಗೆ ಕೊಡಬಹುದಾಗಿತ್ತು ಅಲ್ಲದೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಹೈಪವರ್ ಸಮಿತಿ ಇದೆ ಅದರ ಪ್ರಕಾರ ಕೈಗಾರಿಕೆ ಯವರು ಕೇಳಿದ ಜಾಗದಲ್ಲಿ ಜಮೀನು ಖರೀದಿಸಲು ಅನುಮತಿ ನೀಡಬಹುದು ಎಂದು ಅವರು ತಿಳಿಸಿದರು ಕೃಷಿಕರಲ್ಲದವರು ಅವರಿಗೆ 432 ಎಕರೆ ಜಮೀನು ಹೊಂದಲು ಅವರಿಗೆ ಅವಕಾಶ ನೀಡುವುದರ ಉದ್ದೇಶ ಏನು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.ಎಲ್ಲಾ ತಾಲೂಕು ಕಚೇರಿ ಮುಂದೆ 27ರಿ೦ದ 31ರ ಒಲಳಗೆ ಸರ್ಕಾರದ ರಾಜ್ಯಪತ್ರ ಪ್ರತಿಯನ್ನು ಸುಡುವುದರ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.