ಮಕ್ಕಳಿಗೆ ಆಸ್ತಿಗಿಂತ ಸಂಸ್ಕಾರ ಅಗತ್ಯ : ರವಿ ಶಾಸ್ತ್ರಿ

120
Share

 

*ಮಕ್ಕಳಿಗೆ ಆಸ್ತಿಗಿಂತ ಸಂಸ್ಕಾರ ಅಗತ್ಯ : ರವಿ ಶಾಸ್ತ್ರಿ*

ಮಕ್ಕಳಿಗೆ ಆಸ್ತಿ ಮಾಡಿ ಇರಿಸುವುದರ ಬದಲು ಮಕ್ಕಳನ್ನು ವಿದ್ಯಾವಂತರನ್ನಾಗಿ ಸಂಸ್ಕಾರವಂತರನ್ನಾಗಿ ಮಾಡಿದರೆ ಅದುವೇ ದೊಡ್ಡ ಆಸ್ತಿ ಎಂದು ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷರಾದ ರವಿ ಶಾಸ್ತ್ರಿ ಹೇಳಿದರು

ನಗರದ ಟಿ ಕೆ ಲೇಔಟ್ ನಲ್ಲಿರುವ ಶ್ರೀ ಕೃಷ್ಣ ದಾಮ ದಲ್ಲಿ ಶ್ರೀ ಕೃಷ್ಣ ಮಿತ್ರ ಮಂಡಳಿ ಹಾಗೂ ಶ್ರೀ ಕೃಷ್ಣ ಟ್ರಸ್ಟ್ ವತಿಯಿಂದ ಮಕ್ಕಳಿಗೆ ನಡೆದ 15 ದಿನ ಉಚಿತ ಸಂಸ್ಕಾರ ವಾಹಿನಿ ಶಿಬಿರದ ಸಮಾರಂಭ ಸಮಾರಂಭ ಉದ್ದೇಶ ಮಾತನಾಡಿದ ಅವರು
ಜೀವನದಲ್ಲಿ ಧಾರ್ಮಿಕ ಚಿಂತನೆ ಅಗತ್ಯ, ಬಾಲ್ಯದಿಂದಲೇ ದೇವರ ಬಗ್ಗೆ ನಂಬಿಕೆ ಹಾಗೂ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು,
ಎಂದು ಹೇಳಿದರು
ರಜಾ ದಿನಗಳಲ್ಲಿ ಮಕ್ಕಳು ಮೊಬೈಲ್, ಟಿ.ವಿಯಲ್ಲಿ ಕಳೆದು ಹೋಗುತ್ತಿದ್ದಾರೆ. ಹಾಗಾಗಿ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಸಂಸ್ಕಾರದ ಬೀಜ ಬಿತ್ತಿ, ದೇಶದ ಸುಸಂಸ್ಕೃತ ಪ್ರಜೆಗಳನ್ನಾಗಿಸುವ ಉದ್ದೇಶದಿಂದ ಶಿಬಿರ ಆಯೋಜಿಸಿದ್ದೇವೆ’

ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವಿದ್ವಾನ್ ಡಾಕ್ಟರ್ ಆನಂದ ತೀರ್ಥನಾಗ ಸಂಪಿಗೆ ಆಚಾರ್ಯ, ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷರಾದ ರವಿಶಾಸ್ತ್ರಿ, ಪಿ ಎಸ್ ಶೇಖರ್, ಕಾರ್ಯದರ್ಶಿಗಳಾದ ಕೆ ವಿ ಶ್ರೀಧರ್, ಶ್ರೀ ಕೃಷ್ಣ ಮಿತ್ರ ಮಂಡಳಿಯ ಅಧ್ಯಕ್ಷರ ಪ್ರವೀಣ್, ಖಜಾಂಜಿ ಶ್ರೀವತ್ಸ, ಮಂಗಳ ಅಭ್ಯಂಕರ್, ಸುಧಾ ,ರಮಾದೇವಿ,
ಸಂಸ್ಕೃತ ಶಿಕ್ಷಕರಾದ ವಿದ್ವಾನ್ ಶ್ರೀಕಾಂತ್ ಆಚಾರ್ಯ, ವಿದ್ವಾನ್ ಮುಕುಂದಾಚಾರ್ಯರು, ಮನ್ಯು ಆಚಾರ್ಯ, ಅಕ್ಷಯ ಆಚಾರ್ಯ, ಸುರೇಖಾಚಾರ್ಯ, ಹಾಗೂ ಇನ್ನಿತರರು ಹಾಜರಿದ್ದರು

ನೂರಕ್ಕೂ ಹೆಚ್ಚು ಮಕ್ಕಳು ಶಿಬಿರವನ್ನು ಸದುಪಯೋಗ ಪಡೆಸಿಕೊಂಡರು


Share