ಮಕ್ಕಳೇ ಮಾಣಿಕ್ಯ

1020
Share

ಮೈಸೂರು ಪತ್ರಿಕೆಯ MP TALK ನಲ್ಲಿ ಇಂದಿನ ವಿಷಯದಲ್ಲಿ ಮಕ್ಕಳೇ ಮಾಣಿಕ್ಯ.ಎಂಬ ವಿಷಯ ಕುರಿತು ಚರ್ಚಿಸಲಾಗುತ್ತಿದೆ. ತಜ್ಞರ ವರದಿ ಆಧರಿಸಿ ಶಾಲೆ ಪ್ರಾರಂಭಿಸುವ ಹಂತದಲ್ಲಿ ಸರ್ಕಾರ ಇದೆ ಎಂಬ ವಿಷಯದಲ್ಲಿ ಹೆಚ್ಚಿನ ಬೆಳಕು ಚೆಲ್ಲಲು ಈ ಪ್ರಯತ್ನವಾಗಿದೆ . ಎಸ್ಸೆಸ್ಸೆಲ್ಸಿ ಪರೀಕ್ಷೆಯ ಅಭೂತಪೂರ್ವ ಯಶಸ್ವಿಯಿಂದ ಉತ್ತೇಜನಗೊಂಡ ಸರ್ಕಾರ ಆತುರದಲ್ಲಿ ಈಗ ತಜ್ಞರ ವರದಿಯನ್ನು ಸ್ವಾಗತಿಸಿದೆ ಎಂಬ ವಿಷಯ ಗೊತ್ತಾಗುತ್ತಿದ್ದಂತೆ ಜನರು ಬಹಳ ಆತಂಕಕ್ಕೆ ಈಡಾಗುತ್ತಿದ್ದಾರೆ .ಇಂದು ಸಾರ್ವತ್ರಿಕವಾಗಿ ಹಿರಿಯರೇ ಹೇಳಿದ ಮಾತು ಕೇಳುವುದಿಲ್ಲ ಅಂಥಾದ್ದರಲ್ಲಿ ಮಕ್ಕಳನ್ನು ಹದ್ದುಬಸ್ತಿನಲ್ಲಿಟ್ಟು ವಿದ್ಯಾ ವಿದ್ಯಾಭ್ಯಾಸ ನೀಡುವುದು ಸಾಧ್ಯವೇ ? ಸುಪ್ರಸಿದ್ಧ ವೈದ್ಯಕೀಯ ಸಂಸ್ಥೆಗಳಾದ ನಿಮ್ಯಾನ್ಸ್ ನಂಥ ಡಾಕ್ಟರ್ಗಳೇ ಮಕ್ಕಳ ಮನಸ್ಥಿತಿಯ ಬಗ್ಗೆ ಸಾಕಷ್ಟು ವರದಿಗಳನ್ನು ನೀಡುತ್ತಿರುವಾಗ ಇಂತಹ ಆತುರದ ನಿರ್ಧಾರ ಏಕೆ? ಮಕ್ಕಳಿದ್ದರೆ ಭವಿಷ್ಯ ….ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು….. ಎಂಬ ನಾಣ್ನುಡಿಯನ್ನು ಸರ್ಕಾರ ಮರೆತು ಹೋಯಿತೇ ?ಮುಂತಾದ ವಿಷಯಗಳು ಇಂದಿನ ಚರ್ಚೆಯಲ್ಲಿ ಮೂಡಿ ಬರಲಿದೆ


Share