ಮತದಾನ-ವಿಶೇಷಚೇತನರಿಗೆ ಇರಲಿ ವ್ಯವಸ್ಥೆ: ಸಿಇಓ ಗಾಯಿತ್ರಿ

Share

 

*ವಿಶೇಷಚೇತನರಿಗೆ ಇರಲಿ ವ್ಯವಸ್ಥೆ: ಸಿಇಓ ಗಾಯಿತ್ರಿ*
ಮೈಸೂರು- ಮೈಸೂರುನ ಮತಕೇಂದ್ರಕ್ಕೆ ಆಗಮಿಸುವ ವಿಶೇಷಚೇತನರಿಗೆ ಮೆಟ್ಟಿಲುಗಳು ಇರುವ ಕಡೆಗಳಲ್ಲಿ ಇಳಿಜಾರು ಅಥವಾ ವೀಲ್‌ಚೇರ್‌ ವ್ಯವಸ್ಥೆ ಇರುವಂತೆ ನೋಡಿಕೊಳ್ಳಿ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ.ಗಾಯಿತ್ರಿ ತಿಳಿಸಿದರು.

ಮೈಸೂರಿನ ಜಿಲ್ಲಾ ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ನಡೆದ ಸ್ವೀಪ್‌ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ವಿಶೇಷಚೇತನ ಸ್ನೇಹಿ ಮತಕೇಂದ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ. ಪ್ರಮುಖವಾಗಿ ಮತದಾನದಿಂದ ದೂರ ಉಳಿಯುವ ಸುಶಿಕ್ಷಿತರ ವಾಸತಾಣವಾದ ಬಡಾವಣೆ, ಅಪಾರ್ಟಟ್ಮೆಂಟ್‌ಗಳಲ್ಲಿ ಮತದಾನದ ಅರಿವು ಮೂಡಿಸಿ ಎಂದು ಸಲಹೆ ನೀಡಿದರು.

ಮಾತ್ರವಲ್ಲದೆ, ಪ್ರವಾಸಿ ತಾಣಗಳಾದ ಮೃಗಾಲಯ, ಅರಮನೆ, ದೇವರಾಜ, ಮಾರುಕಟ್ಟೆ, ರೈಲು ನಿಲ್ದಾಣ ಹಾಗೂ ಶಾಲಾ-ಕಾಲೇಜುಗಳಲ್ಲಿ ಹೆಚ್ಚಿನ ಪ್ರಚಾರ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ಸ್ವೀಪ್‌ ಸಮಿತಿ ಕಾರ್ಯದರ್ಶಿ ಹಾಗೂ ನೋಡಲ್ ಅಧಿಕಾರಿಯೂ ಆಗಿರುವ ಜಿಪಂ ಉಪ ಕಾರ್ಯದರ್ಶಿ(ಅಭಿವೃದ್ಧಿ) ಡಾ.ಎಂ.ಕೃಷ್ಣರಾಜು,
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಜಿಲ್ಲಾ ವಿಶೇಷಚೇತನ ಕಲ್ಯಾಣಾಧಿಕಾರಿ, ಸ್ವೀಪ್‌ ನೋಡೆಲ್‌ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Share