ಮತ್ತೆ ಬೆಳಕು ಕಂಡ ಮೈಸೂರು ಹೊರವರ್ತುಲ ರಸ್ತೆ

356
Share

ಮೈಸೂರು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಮತ್ತು ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ್ ಅವರ ಸೂಚನೆ ಮೇರೆಗೆ ಮೈಸೂರಿನ ಹೊರವರ್ತುಲ ರಸ್ತೆ ಮತ್ತೆ ಬೆಳಕು ಕಂಡಿದೆ.

ವಿದ್ಯುತ್ ಬಿಲ್ಲು ಬಾಕಿ ಉಳಿಸಿಕೊಂಡಿದ್ದರಿಂದ ಹೊರ ವರ್ತುಲ ರಸ್ತೆಯ ವಿದ್ಯುತ್ ದೀಪಗಳಿಗೆ ಕಳೆದ ನವೆಂಬರ್ ನಿಂದ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿತ್ತು. ಇದರಿಂದ ರಾತ್ರಿ ವೇಳೆ ಈ ರಸ್ತೆಯಲ್ಲಿ ಕತ್ತಲೆ ಆವರಿಸಿ ಹಲವಾರು ಸಮಸ್ಯೆಗಳಿಗೆ ಕಾರಣವಾಗಿತ್ತು.

ಗುರುವಾರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್‌.ಟಿ.ಸೋಮಶೇಖರ್ ಹಾಗೂ ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ್ ಅವರು ಮುಡಾ ಸಭೆ ನಡೆಸಿದ ವೇಳೆ ಈ ಸಮಸ್ಯೆ ಗಮನಕ್ಕೆ ಬಂದಿತ್ತು. ಬಾಕಿ ಇರುವ ಸುಮಾರು 1.5 ಕೋಟಿ ವಿದ್ಯುತ್ ಬಿಲ್ಲನ್ನು ಪಾವತಿಸುವಂತೆ ಸಚಿವದ್ವಯರು ಸೂಚನೆ ನೀಡಿದ್ದರು‌. ಅದೇ ರೀತಿ ತಕ್ಷಣವೇ ವಿದ್ಯುತ್ ಸಂಪರ್ಕ ನೀಡುವಂತೆ ಚೆಸ್ಕಾಂ ಅಧಿಕಾರಿಗಳಿಗೂ ಸೂಚನೆ ನೀಡಿದ್ದರು.

ಸಚಿವದ್ವಯರ ಪ್ರಯತ್ನದ ಫಲವಾಗಿ ಸುಮಾರು 44 ಕಿ.ಮೀ.‌ಉದ್ದದ ಮೈಸೂರು ಹೊರವರ್ತುಲ ರಸ್ತೆ ಈಗ ಬೆಳಕು ಕಂಡಿದೆ.


Share