ಮದುರೈ : ಲಸಿಕೆ ತೆಗೆದುಕೊಳ್ಳದಿದ್ದರೆ ಸಾರ್ವಜನಿಕ ಸ್ಥಳಕ್ಕೆ ಪ್ರವೇಶ ನಿಷೇಧ

Share

ಮದುರೆ : ಕೋವಿಡ್-19 ವಿರುದ್ಧ ಲಸಿಕೆ ತೆಗೆದುಕೊಳ್ಳದ ಜನರಿಗೆ ಡಿಸೆಂಬರ್ 13 ರಿಂದ ಮಧುರೈ ಜಿಲ್ಲೆಯ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶವನ್ನು ನಿಷೇಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಎಸ್. ಅನೀಶ್ ಶೇಖರ್ ತಿಳಿಸಿದ್ದಾರೆ.
ಮಧುರೈನಲ್ಲಿ ಲಸಿಕೆ ಹಾಕಿಸಿಕೊಳ್ಳದವರಿಗೆ ನ್ಯಾಯಬೆಲೆ ಅಂಗಡಿಗಳು, ವ್ಯಾಪಾರ ಸಂಸ್ಥೆಗಳು, ಸೂಪರ್‌ಮಾರ್ಕೆಟ್‌ಗಳು, ಥಿಯೇಟರ್‌ಗಳು, ಮದುವೆ ಮಂಟಪಗಳು, ಶಾಪಿಂಗ್ ಮಾಲ್‌ಗಳು, ಗಾರ್ಮೆಂಟ್ಸ್ ಅಂಗಡಿಗಳು, ಬ್ಯಾಂಕ್‌ಗಳು ಮತ್ತು ಮದ್ಯದಂಗಡಿಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಲಸಿಕೆ ಹಾಕಿಸಿಕೊಳ್ಳದವರನ್ನು ಸಮೀಪದ ಕೇಂದ್ರಗಳಿಗೆ ಕಳುಹಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಈ ಹಿಂದೆ, ಆಡಳಿತವು ಜನರಿಗೆ ಕನಿಷ್ಠ ಒಂದು ಡೋಸ್ COVID-19 ಲಸಿಕೆಯನ್ನು ಪಡೆಯಲು ಒಂದು ವಾರದ ಸಮಯವನ್ನು ನೀಡಿತ್ತು. “ಜನರಿಗೆ ಕನಿಷ್ಠ ಒಂದು ಡೋಸ್ COVID-19 ಲಸಿಕೆಯನ್ನು ಪಡೆಯಲು ಒಂದು ವಾರದ ಸಮಯವನ್ನು ನೀಡಲಾಗಿದೆ, ವಿಫಲವಾದರೆ ಲಸಿಕೆ ಹಾಕದ ಜನರು ಹೋಟೆಲ್‌ಗಳು, ಶಾಪಿಂಗ್ ಮಾಲ್‌ಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳಂತಹ ಸಾರ್ವಜನಿಕ ಸ್ಥಳಗಳನ್ನು ಪ್ರವೇಶಿಸಲು ಅನುಮತಿಸಲಾಗುವುದಿಲ್ಲ.” ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.


Share